ತುಮಕೂರು ನಗರದಲ್ಲಿ ತಲೆ ಎತ್ತಲು ಮುಂದಾಗಿರುವ ಬಾರ್ & ರೆಸ್ಟೋರೆಂಟ್ ಗಳಿಗೆ ಬ್ರೇಕ್ ಹಾಕಲು ಮುಂದಾದ ದಲಿತ ಮುಖಂಡರು

ತುಮಕೂರು:-  ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ನೃಪತುಂಗ  ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮದ್ಯದ ಅಂಗಡಿಯ  ಲೈಸನ್ಸ್ ಅನ್ನು ವಾಪಸ್ ಪಡೆಯುವಂತೆ ಮಾದಿಗ ದಂಡೋರ ಸಮಿತಿ ವತಿಯಿಂದ ಒತ್ತಾಯಿಸಿ  ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಪಿ.ಎನ್.ರಾಮಯ್ಯ ಮಾತನಾಡಿದರು.

 

 

ಪಿ.ಎನ್.ರಾಮಯ್ಯನವರು ಮಾತನಾಡಿ ಶೆಟ್ಟಿಹಳ್ಳಿ ಮುಖ್ಯ ರಸ್ತೆ, ನೃಪತುಂಗ ಬಡಾವಣೆ ಮತ್ತು ಜನತಾ ಕಾಲೋನಿಯ ನಿವಾಸಿಗಳು ಹಾಗೂ ವಿದ್ಯಾರ್ಥಿಗಳು ಇಲ್ಲಿ ಇದ್ದು  ದಲಿತರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದು, ಕಾಲೇಜು ಸೇರಿದಂತೆ ಹಲವು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಹೆಚ್. ಎಂ. ಎಸ್ ಶಾಲಾ ಸಂಸ್ಥೆಗಳು, ಪಾರ್ಕ್‌ಗಳು ಹಾಗೂ ದೇವಾಲಯಗಳಿವೆ. ಇದಕ್ಕೆ ಹೊಂದಿಕೊಂಡಂತೆ ಕೆಲವೇ ಅಂತರದಲ್ಲಿ ಪಿ.ಎನ್.ಎಸ್ ಆರ್ಕೇಡ್‌ನಲ್ಲಿ ಮದ್ಯದಂಗಡಿ (ಬಾರ್ & ರೆಸ್ಟೋರೆಂಟ್) ತೆರೆಯಲು ಉದ್ದೇಶಿಸಿದ್ದು, ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುವುದು, ಹಾಗೂ ಕಾನೂನು ಉಲ್ಲಂಘನೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದಕ್ಕೆ ಅಧಿಕಾರಿಗಳ ಸಹಕಾರವು ಇದ್ದಂತ್ತಿದೆ. ಈ ಕಾಲೋನಿಗೆ ಹೊಂದಿಕೊಂಡಂತೆ ಮದ್ಯದಂಗಡಿ ತೆರೆದರೆ ಇಲ್ಲಿನ ದಲಿತರನ್ನು ಮತ್ತಷ್ಟು ಮದ್ಯವ್ಯಸನಿಗಳನ್ನಾಗಿಸಿ ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿ ಮಾಡಿ ಅನೇಕ ದಲಿತ ಕುಟುಂಬಗಳನ್ನು ಬೀದಿಗೆ ತರುವ ಉದ್ದೇಶವಿದೆ ಎಂದರು.

 

 

ರಸ್ತೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಮಹಿಳೆಯರು, ಹಾಗೂ ಮಕ್ಕಳು ಹೆಚ್ಚು. ಓಡಾಡುತ್ತಿರುವುದರಿಂದ ಮದ್ಯವ್ಯಸನಿಗಳಿಂದ ತೊಂದರೆಗೊಳಗಾಗುತ್ತಾರೆ. ಈ ಕಾಲೋನಿಗೆ ಹೊಂದಿಕೊಂಡಂತೆ ಈಗಾಗಲೇ ವೈನ್ಸ್ ಸೆಂಟರ್ ಒಂದು ಕಾರ್ಯನಿರ್ವಹಿಸುತ್ತಿದ್ದು  ಅದರ ಹಿಂದೆ ಸರ್ಕಾರಿ ಶಾಲೆಯಂದು ಇದೆ ಇದರ ಪರಿವಿಲ್ಲದೆ ಅಧಿಕಾರಿಗಳು ವೈನ್ಸ್ ಓಪನ್ ಮಾಡಲು ಪರವಾನಗಿ ನೀಡಿದ್ದಾರೆ  ಇದರಿಂದ ರಸ್ತೆಯಲ್ಲಿ ಅಪಘಾತ ಕ್ಷುಲಕ ಕಾರಣಕ್ಕೆ ಗಲಾಟೆಗಳು ಸೇರಿದಂತೆ ಇತರೆ ಚಟುವಟಿಕೆಗಳು ನಡೆಯುತ್ತಿರುವುದರಿಂದ  ಇದರಿಂದಾಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದರು.

 

 

 

ಪ್ರತಿಷ್ಠಿತ ರಸ್ತೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು  ಸ್ಥಳೀಯ ರಾಜಕಾರಣಿಗಳು ಹಾಗೂ ಮೇಲ್ಮಟ್ಟದ ಅಧಿಕಾರಿಗಳ ಕುಮಕಿನಿಂದ ಇದು ಸಾಧ್ಯವಾಗುತ್ತಿದ್ದು ಕೂಡಲೇ ನಗರ ಶಾಸಕ ಜ್ಯೋತಿ ಗಣೇಶ್, ಸಂಸದ ಬಸವರಾಜು ಪಾಲಿಕೆ ಆಯುಕ್ತರಾದ ಬಿ ಅಶ್ವಿಜಾ ಅವರು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯದಂತೆ ಅಬಕಾರಿ ಇಲಾಖೆಯ ಅಧಿನಿಯಮದ ಅಡಿಯಲ್ಲಿ ಸೂಕ್ತ ಕ್ರಮ ವಹಿಸಬೇಕು ಎಂದರು

ತುಮಕೂರು ನಗರ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವಸಂತ ಅವರು ಮಾತನಾಡಿ  ಪುರುಷರು ಮದ್ಯ ಸೇವನೆ ಮಾಡುವುದರಿಂದ  ಮಹಿಳೆಯರ ನೆಮ್ಮದಿ ಹಾಳು ಮಾಡುತ್ತಿದ್ದಾರೆ  ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ನಾಗರೀಕರು ಓಡಾಡುವ ಸ್ಥಳ, ಶಿಕ್ಷಣ ಸಂಸ್ಥೆ, ಶಾಲಾ ಮಕ್ಕಳು, ಮಹಿಳೆಯರು, ಓಡಾಡುವ ಸ್ಥಳದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ತೆರಯುವುದಕ್ಕೆ ನಾವು ಬೀಡುವುದಿಲ್ಲ ಒಂದು ವೇಳೆ ಸ್ಥಳೀಯ ಆಡಳಿತ ಅನುಮತಿ ನೀಡಿದೇ ಆದರೆ ಜಿಲ್ಲಾಧಿಕಾರಿ ಗಳ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದರು.

 

 

 

ಇದೇ ವೇಳೆ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಗೊಳರಿವೆ ನಾಗರಾಜ್ ಮಾತನಾಡಿ ಶಾಲಾ ಮಕ್ಕಳು ಸಂಚರಿಸುವ ಭಾಗದಲ್ಲಿ ಮಧ್ಯದ ಅಂಗಡಿ ತೆರೆಯುವುದು ಖಂಡನೀಯ ಈಗಾಗಲೇ ಇದೇ ರಸ್ತೆಯಲ್ಲಿ ಗುರು ವೈನ್ಸ್ ಎಂಬ ಮಧ್ಯದ ಅಂಗಡಿ ಇದ್ದು ಇದರಿಂದಾಗಿ ಗಲಾಟೆ ಗಲಭೆಗಳು ನಡೆಯುತ್ತಿವೆ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಬಾರದೆಂದರು.

 

 

 

 

ಸಂದರ್ಭದಲ್ಲಿ ದಲಿತ ವಿಮೋಚನಾ ಸಭೆ ಉಪಾಧ್ಯಕ್ಷ ಹಬ್ಬತ್ತನಹಳ್ಳಿ ಶ್ರೀನಿವಾಸ್, ಡಿಎಸ್ ಎಸ್ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ,  ಮಾದಿಗ ದಂಡೋರ ಜಿಲ್ಲಾಧ್ಯಕ್ಷ ನಾಗರಾಜು ಬಿಜೆಪಿ ಎಸ್‌ಟಿ ಮೋರ್ಚಾದ ಮಹಾಲಕ್ಷ್ಮಿ ಆರಾಧನಾ ಸಮಿತಿಯ ಪ್ರೇಮಲತಾ ಕರುನಾಡ ವಿಜಯ ಸೇನೆ ರಾಜ್ಯ ಕಾರ್ಯದರ್ಶಿ ರಾಧಾ ಗಂಗಾಧರ್ ದಲಿತ ಪ್ರಜಾ ಸೇನೆ ಉಪಾಧ್ಯಕ್ಷ ಡಿಟಿ ಮೂರ್ತಿ ಸುಲೋಚನಾ ಲತಾ ಗಾಯಿತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!