ತುಮಕೂರು : ಕಳೆದ ಸೋಮವಾರ ನಗರದ ಗ್ರಂಥಾಲಯದ ಸಭಾಂಗಣದಲ್ಲಿ ಭೀಮ್ ಆರ್ಮಿ ಸಂಘಟನೆಯ ನೂತನ ಜಿಲ್ಲಾ ಘಟಕದ ಪದಗ್ರಹಣ ಸಮಾರಂಭ ಮತ್ತು ಸಂವಿಧಾನ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಮುರಳೀದರ ಹಾಲಪ್ಪ, ಎಸ್.ಟಿ.ಶ್ರೀನಿವಾಸ್, ನಿಕೇತ್ ರಾಜ್ ಮೌರ್ಯ, ಹೆತ್ತೇನಹಳ್ಳಿ ಮಂಜು, ಕೆ.ಜಿ.ವೆಂಕಟೇಶ್, ಭೀಮ್ ಆರ್ಮಿ ರಾಜ್ಯಾಧ್ಯಕ್ಷರಾದ ರಾಜಗೋಪಾಲ್ ಸೇರಿದಂತೆ ಹಲವಾರು ಮುಖಂಡರುಗಳು ಭಾಗವಹಿಸಿ ತುಮಕೂರು ಜಿಲ್ಲಾ ಭೀಮ್ ಆರ್ಮಿ ಸಂಘಟನೆಯ ನೂತನ ಅಧ್ಯಕ್ಷರನ್ನಾಗಿ ಶ್ರೀನಿವಾಸಮೂರ್ತಿ ಅಯ್ಯನಪಾಳ್ಯ ಆದ ನನ್ನನ್ನು ಆಯ್ಕೆ ಮಾಡಿರುತ್ತಾರೆ, ಇದರ ಪ್ರಯುಕ್ತ ಅಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಗಣ್ಯಾತಿ ಗಣ್ಯರಿಗೆ ನಾನು ಹೃದಯಪೂರ್ವಕ ಅಭಿನಂದನೆಗಳನ್ನು ಜಿಲ್ಲಾಧ್ಯಕ್ಷರಾದ ಅಯ್ಯನಪಾಳ್ಯ ಶ್ರೀನಿವಾಸ ಮೂರ್ತಿ ತಿಳಿಸಿದರು.
ಮುಂದುವರೆದು ಮಾತನಾಡುತ್ತಾ ಭೀಮ್ ಆರ್ಮಿ ಸಂಘಟನೆಯು ದೇಶದಲ್ಲಿಯೇ ಬಹುದೊಡ್ಡ ಸಂಘಟನೆಯಾಗಿದ್ದು ಹಲವಾರು ಸಂಘಟನಾತ್ಮಕ ಕಾರ್ಯಗಳನ್ನು ಮಾಡುತ್ತಾ ಭೀಮ ಬಂಧುಗಳ ಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ. ಈ ಸಂಘಟನೆಯನ್ನು ತುಮಕೂರು ಜಿಲ್ಲೆಯಲ್ಲಿ ಬಲಪಡಿಸುವ ಸದುದ್ದೇಶದಿಂದ ಮುಂದಿನ ದಿನಗಳಲ್ಲಿ ಹಲವಾರು ಪ್ರಗತಿಪರ, ಸಾಮಾಜಿಕ ಚಿಂತನೆಗಳನ್ನು ಜನರಲ್ಲಿ ಮೂಡಿಸುವುದರೊಂದಿಗೆ ಬಾಬಾ ಸಾಹೇಬರ ಆಶಯಗಳನ್ನು ಪ್ರತಿಯೊಬ್ಬ ನಾಗರೀಕರಿಗೂ ತಿಳಿಸಿ ಸಂವಿಧಾನದ ಹಕ್ಕು, ಮೌಲ್ಯ, ಅದರ ಮಹತ್ವವನ್ನು ಪಸರಿಸುವ ಕೆಲಸವನ್ನು ನಮ್ಮ ಸಂಘಟನೆಯನ್ನು ಮಾಡುವ ಸದುದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು.
ಚಂದ್ರಶೇಖರ್ ಆಜಾದ್ ರಾವಣರವರಿಂದ ಸ್ಥಾಪಿಸಿರುವ ನಮ್ಮ ಸಂಘಟನೆಯ ಆಶಯದಂತೆ ಭೀಮ್ ಆರ್ಮಿ, ಭಾರತ್ ಏಕತಾ ಮಿಷನ್, ತುಮಕೂರು ಜಿಲ್ಲೆ ಇದರ ಅಡಿಯಲ್ಲಿ ಜಿಲ್ಲಾದ್ಯಂತ ಪ್ರವಾಸ ಮಾಡಿ ತಾಲ್ಲೂಕು ಘಟಕಗಳನ್ನು, ರಚಿಸಿ ನಂತರ ಪಂಚಾಯಿತಿವಾರು ಘಟಕಗಳನ್ನು ರೂಪಿಸುವ ಕಾರ್ಯಕ್ಕೆ ನಾವು ಮುಂದಾಗಿದ್ದೇವೆ, ಜೊತೆಗೆ ನಮ್ಮ ಭೀಮ್ ಆರ್ಮಿಯ ಉದ್ದೇಶ ಮತ್ತು ಸಂವಿಧಾನದ ಮೌಲ್ಯಗಳು ಸಮಾಜದಲ್ಲಿ ಏಕತೆಯನ್ನು ತರುವುದಕ್ಕೆ ಎಲ್ಲಾ ಭೀಮ ಬಂಧುಗಳು ಸೇರಿದಂತೆ ಸಮಸ್ತ ನಾಗರೀಕರ ಸಹಕಾರವನ್ನು ಕೋರಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಕಾರ್ಯಾಧ್ಯಕ್ಷರಾದ ಅಬ್ಬಾಸ್, ಸಂಘಟನಾ ಕಾರ್ಯದರ್ಶಿ ಆಕಾಶ್, ಸದಸ್ಯರಾದ ರಾಜು ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.