ಕನ್ನಡ ಹಾಗೂ ಬಜೆಟ್ ಶಾಲೆಗಳನ್ನು ಮುಚ್ಚಿ ಕಾರ್ಪೋರೇಟ್ ಶಾಲೆಗಳಿಗೆ ಮಣೆ ಹಾಕುತ್ತಿರುವ ಶಿಕ್ಷಣ ಸಚಿವರ ವಿರುದ್ಧ ಆಕ್ರೋಷ ಹೊರ ಹಾಕಿದ ಲೋಕೇಶ್ ತಾಳಿಕಟ್ಟೆ
ಅನಾಧಿಕೃತ ಶಾಲೆಗಳ ಪಟ್ಟಿಯನ್ನು ಪ್ರಕಟಿಸಲು ಉಲ್ಲೇಖಿತಾ ಆದೇಶದಲ್ಲಿ ಬಡ,ದೀನ ದಲಿತರ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡುತ್ತಿರುವ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಭಾಗದ ಹಾಗೂ ನಗರದ ಕೊಳಚೆ ಪ್ರದೇಶಗಲ್ಲಿರುವ ಬಜೆಟ್ ಶಾಲೆಗಳನ್ನು ಗುರಿಯಾಗಿಸಿ ಸಾವಿರಾರು ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸಿರುವುದು ದುರಾದೃಷ್ಟಕರ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಹಾಗೂ ರೂಪ್ಸಾ ಅಧ್ಯಕ್ಷರಾದ ಲೋಕೇಶ್ ತಾಳಿಕಟ್ಟೆ ರವರು ತಮ್ಮ ಆಕ್ರೋಷನವನ್ನು ಹೊರ ಹಾಕಿದ್ದಾರೆ.
ಬೆಂಗಳೂರನಲ್ಲಿ ಅನೇಕ ವರ್ಷಗಳಿಂದ ಅನಾಧಿಕೃತ ಬೃಹತ್ ಶಾಲೆಗಳಿದ್ದು, ಅವುಗಳಲ್ಲಿ ಅನೇಕ ವಿಭಾಗ (section)ಗಳು ಹಾಗೂ ಮಾನ್ಯತೆ ಇಲ್ಲದ ಶಾಖೆ (Branch)ಗಳೊಂದಿಗೆ ಬಹಿರಂಗವಾಗಿ ನಡೆಯುತ್ತಿವೆ. ಈ ಶಾಲೆಗಳ ಮಾಲೀಕರು ಮಂತ್ರಿಗಳೋ ಅಥವಾ ಶಾಸಕರೋ,ಮತ್ತು ಪ್ರಭಾವಿಗಳೋ, ಆಗಿರುವುದರಿಂದ ಆ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲಾಗದ ಇಲಾಖೆ ಸಣ್ಣ ಪುಟ್ಟ ಬಜೆಟ್ ಶಾಲೆಗಳನ್ನು ಅನಾಧಿಕೃತ ಎನ್ನುವುದರ ಹಿಂದೆ ಪ್ರಭಾವಿಗಳ ಕೈವಾಡ ಇರುವುದು ನಿರೂಪಿತವಾಗಿದೆ.
ಈ ವಿಚಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಮದ್ದೇಪ್ರವೇಶಿಸಿ ಕನ್ನಡ ಮಾಧ್ಯಮ ಹಾಗೂ ಬಜೆಟ್ ಶಾಲೆಗಳನ್ನು ರಕ್ಷಿಸಬೇಕೆಂದು ಲೋಕೇಶ್ ತಾಳಿಕಟ್ಟೆರವರು ತಮ್ಮ ಅಭಿಪ್ರಾಯವನ್ನು ಮಾದ್ಯಮಗಳೊಂದಿಗೆ ಹಂಚಿಕೊಂಡರು.