ತುಮಕೂರು : ಇಂದು ತುಮಕೂರು ನಗರಕ್ಕೆ ಎ.ಐ.ಸಿ.ಸಿ. ಕಾರ್ಯದರ್ಶಿ ಮಯೂರ ಜಯಕುಮಾರ್ ಆಗಮಿಸಿದ್ದ ಸಂದರ್ಭದಲ್ಲಿ ಕೆ.ಎನ್.ರಾಜಣ್ಣರವರು ತಮ್ಮ ನಿವಾಸದಲ್ಲಿ ಪತ್ರರ್ತರೊಂದಿಗೆ ಮಾತನಾಡುತ್ತಾ ಈ ಹಿಂದೆ ಆಯೋದ್ಯ ವಿಚಾರವಾಗಿ ತಾವು ಕೊಟ್ಟಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ತಾನು ಒಬ್ಬ ರೈತ, ಹೊಲಕ್ಕೆ ಹೋಗುವಾಗ ಸಗಣಿ ತೆಗೆದುಕೊಂಡು ಹೋಗಿ, ಸಗಣಿ ಮೂರ್ತಿ ಮಾಡಿ ಗರಿಕೆ ಹುಲ್ಲು ಇಟ್ಟು ಪೂಜೆ ಮಾಡ್ತಿದ್ದೆ ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡ್ತಿದ್ವಿ ಅದು ನಮ್ಮ ನಂಬಿಕೆ ಎಂದು ಹೇಳಿದರಲ್ಲದೇ. ಬಾಬ್ರಿ ಮಸೀದಿ ದ್ವಂಸ ಮಾಡಿದಾಗ, ನಾನು ಭೇಟಿ ಕೊಟ್ಟಾಗ ನಾನು ಅಲ್ಲಿ ಕಂಡ ಚಿತ್ರಣವನ್ನು ಅವತ್ತು ಹೇಳಿಕೊಂಡಿದ್ದೇನೆ ಅಷ್ಟೇ ಬೊಂಬೆಯನ್ನ ದೇವರು ಅಂತಾ ಹೇಳಿದ್ರೆ ಏನು ತಪ್ಪು ಬೊಂಬೆಯಲ್ಲಿ ದೈವತ್ವ ಇರೋದಿಲ್ವಾ? ಎಂದು ತಮ್ಮ ಹೇಳಿಕಯನ್ನು ಸಮರ್ಥಿಸಿಕೊಂಡರು.
ಬೊಂಬೆ ಅನ್ನೋ ಕಾರಣಕ್ಕೆ ತಿರಸ್ಕಾರ ಮನೋಭಾವದಿಂದ ಇವರು (ಬಿಜೆಪಿಯವರು) ಮಾತನಾಡ್ತಾರಲ್ಲ ಅದು ಸರಿನಾ? ಎಂದು ಮರುಪ್ರಶ್ನೆ ಹಾಕಿದರು. ಅಂದು ಅಲ್ಲಿ ಟೂರಿಂಗ್ ಟಾಕೀಸ್ ರೀತಿಯೇ ಇತ್ತು ಅದನ್ನೇ ನಾನು ಹೇಳಿದ್ದೇನೆಂದು ತಮ್ಮ ಹೇಳಿಕೆಯನ್ನೇ ಸಮರ್ಥಿಸಿಕೊಂಡರು. ಅದನ್ನ ಬಿಟ್ಟು ದೇವರನ್ನೇ ಟೂರಿಂಗ್ ಟಾಕೀಸ್ ಅಂದಿಲ್ಲ ಬಿಜೆಪಿಯವರು ನನಗೆ ರಾವಣ ಎಂದಿದ್ದಾರೆ ನನಗೆ ಬೇಜಾರಿಲ್ಲ, ರಾವಣ ಎಂದು ಅನಿಸಿಕೊಳ್ಳಲು ನಾನು ಸಿದ್ಧನಿದ್ದೇನೆ, ಅವನಂತ ಧೈವ ಭಕ್ತ ಯಾರೂ ಇರಲಿಲ್ಲ, ಇವರೆಲ್ಲ ಡೋಂಗಿ ಧೈವ ಭಕ್ತರು ಎಂದು ಕಿಚಾಯಿಸಿದರು.
ಈ ಹಿಂದೆ ಅಣ್ಣಾದೋರೈ ರಾಮಾಯಣಕ್ಕೆ ಬದಲಾಗಿ ರಾವಣಾಯಣ ನಾಟಕ ಆಡಿದ್ರು ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡೋದಿಲ್ಲ, ಇದು ರಾವಣನ ದೊಡ್ಡ ಗುಣ ಅಲ್ವೇ, ನಾನು ರಾಮ ಮತ್ತು ರಾವಣ ಇಬ್ಬರ ಪರ ಇದ್ದೇನೆ, ನನ್ನ ಹೇಳಿಕೆಯನ್ನ ನಾನು ಸಮರ್ಥನೆ ಮಾಡಿಕೊಳ್ತೇನೆ ಹೇಳಿಕೆಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ ಎಂದರಲ್ಲದೇ ರಾವಣ ಒಬ್ಬ ಶಿವನ ಪರಮಭಕ್ತ, ರಾವಣನಿಗೆ ಶಿವ ಆತ್ಮಲಿಂಗ ಕೊಟ್ಟಿರೋದು ಎಂದರು.
ಕಾಂಗ್ರೆಸ್ ನವರು ಹಜ್ ಯಾತ್ರೆಗೆ ದುಡ್ಡು ಕೊಟ್ಟಂತೆ ಯಡಿಯೂರಪ್ಪ ನವ್ರು ಕಾಶಿಗೆ ಹೋಗೋಕೆ ದುಡ್ಡು ಕೊಟ್ಟಿದ್ರು, ಅದನ್ನ ಯಾರೂ ಬೇಡ ಅನ್ನಲ್ಲ, ಇದರ ಕುರಿತು ಇನ್ನೂ ಹಲವು ಸೂಕ್ಷ್ಮವಾದ ವಿಚಾರಗಳಿವೆ, ಮುಂದಿನ ದಿನಗಳಲ್ಲಿ ಹೇಳುತ್ತೇನೆಂದು ಹೇಳಿದರು.
ಇನ್ನುಳಿದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭಾ ಟಿಕೇಟ್ ವಿಚಾರಕ್ಕೆ ಹೇಳಿಕೆ ನೀಡಿದ ಅವರು ಮಾಜಿ ಸಂಸದರಾಗಿರುವ ಎಸ್.ಪಿ.ಮುದ್ದಹನುಮೇಗೌಡರವರು ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದವರು, ಸಜ್ಜನ ರಾಜಕಾರಣಿ ಎಂದೂ ಸಹ ಮನೆ ಮಾತಾಗಿದ್ದಾರೆ. ಅವರು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ಸನ್ನಿಹದಲ್ಲಿದ್ದಾರೆ ಯಾವಾಗ ಬೇಕಾದರೂ ಸೇರ್ಪಡೆಯಾಗಬಹುದು ಎಂದರಲ್ಲದೇ.
ಇದೀಗ ನಮ್ಮ ಎ.ಐ.ಸಿ.ಸಿ. ಕಾರ್ಯದರ್ಶಿಗಳು ತುಮಕೂರಿಗೆ ಆಗಮಿಸಿದ್ದಾರೆ, ಅವರು ಇಲ್ಲಿನ ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ಪಕ್ಷದ ಕೆಲ ನಾಯಕರನ್ನು ಭೇಟಿಯಾಗಲಿದ್ದು, ಅವರು ಇಲ್ಲಿನ ಅಭಿಪ್ರಾಯಗಳನ್ನು ಸಂಗ್ರಹಿಸಿ ವರಿಷ್ಠರಿಗೆ ವರದಿ ನೀಡಿದ ನಂತರವಷ್ಟೇ ಯಾರಿಗೆ ಲೋಕಸಭಾ ಟಿಕೇಟ್ ನೀಡಬೇಕು ಎಂಬುದು ತೀರ್ಮಾನವಾಗಲಿದೆಂದು ಹೇಳಿದರು.