ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ನಾಣ್ಣುಡಿಯಿದೆ, ಆದರೆ ಸವಿತಾ ಸಮಾಜದ ವಿಕಲಚೇತನೊಬ್ಬ ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಛಲ ಆದರೆ ಆರ್ಥಿಕವಾಗಿ ಬಲವಿಲ್ಲ, ಇಂತಹ ಸಮಯದಲ್ಲಿ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವ ಪಡೆಯು ವಿಕಲಚೇತನನಿಗೆ ಕ್ಷೌರಕುಟೀರ ನಿರ್ಮಿಸಿಕೊಟ್ಟು ಸ್ವಾಭಿಮಾನಿ ಜೀವನಕ್ಕೆ ದಾರಿ ಮಾಡಿ ರಾಜ್ಯಸಭಾ ಸದಸ್ಯರಾಗಿದ್ದ ದಿವಂಗತ ಅಶೋಕ ಗಸ್ತಿ ರವರ ಸ್ಮರಣಾರ್ಥ ಅಶೋಕ್ ಗಸ್ತಿ ಹೇರ್ ಸಲೂನ್ ಹೆಸರಿನಲ್ಲಿ ಪ್ರಾರಂಭಿಸಲಾಗಿದೆ ಎಂದು ಸವಿತಾ ಸಮಾಜ ಯುವ ಘಟಕದ ಜಿಲ್ಲಾಧ್ಯಕ್ಷ ಕಟ್ ವೆಲ್ ರಂಗನಾಥ್ ತಿಳಿಸಿದರು.
ತುಮಕೂರು ಜಿಲ್ಲಾ ಸವಿತಾ ಯುವಪಡೆಯು ೧೨೬ ಸದಸ್ಯರನ್ನು ಒಳಗೊಂಡಿದ್ದು ಘಟಕ ಪ್ರಾರಂಭವಾಗಿ ಎರಡು ರ್ಷ ಪೂರೈಸಿದ ಸುಸಂದರ್ಭದಲ್ಲಿ ಯುವ ಘಟಕದ ವತಿಯಿಂದ, ಮಾನವ ಸಂಘ ಜೀವಿ ಪರಸ್ಪರ ಸಹಕಾರ ದಿಂದ ಜೀವನ ನಡೆಸಬೇಕಾಗಿರುವುದು ಸಮಾಜದ ನಿಯಮ, ಕೈಲಾಗದವರಿಗೆ ನೆರವು ನೀಡುವುದು, ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವುದು ಸಂಘ ಸಂಸ್ಥೆಗಳ ಧ್ಯೇಯ. ಅಸಹಾಯಕರಿಗೆ ಸರ್ಕಾರವೇ ನೆರವು ನೀಡಲಿ ಎಂದು ಕಾಯುವವರ ಮಧ್ಯೆ ಕಷ್ಟದಲ್ಲಿ ಇದ್ದ ವ್ಯಕ್ತಿಗೆ ತುಮಕೂರಿನ ಜಿಲ್ಲಾ ಸವಿತಾ ಸಮಾಜ ಯುವ ಪಡೆ ವತಿಯಿಂದ ಕ್ಷೌರ ಕುಟೀರ ನಿರ್ಮಿಸಿ ಕೊಟ್ಟು, ಇಡೀ ರಾಜ್ಯಕ್ಕೆ ಮಾದರಿಯಾದ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. ಸ್ವಾಸ್ಥ ಸಮಾಜಕ್ಕೆ ಸವಿತಾ ಸಮಾಜದ ಕ್ಷೌರಿಕರ ಸೇವೆ ಅಗತ್ಯವಾಗಿ ಬೇಕಾಗಿದ್ದು, ಸ್ವಾವಲಂಭಿ ಜೀವನ ನಡೆಸಲು ಸ್ವಯಂ ಉದ್ಯೋಗ ಕೈಗೊಳ್ಳಲು ಬಂಡವಾಳದ ಕೊರತೆ ಇರುವ ಅಸಹಾಯಕ ಸ್ಥಿತಿಯಲ್ಲಿರುವವರಿಗೆ ಸರ್ಕಾರಗಳು ನೆರವು ನೀಡಬೇಕು, ಆದರೆ ಸರ್ಕಾರ ನೆರವು ನೀಡದಿದ್ದರೂ ಮಾನವೀಯತೆ ಆಧಾರದ ಮೇಲೆ ನೆರವು ನೀಡಬಹುದು ಎಂದು ಯುವಜನತೆ ರುಜುವಾತುಪಡಿಸಿದ ಪ್ರಕರಣ ಒಂದು ಜಿಲ್ಲೆಯಲ್ಲಿ ಜರುಗಿದೆ. ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿಯ ಬೆಣ್ಣೂರು ಗ್ರಾಮದ ವಾಸಿ ಗೋವಿಂದರಾಜು, ವಿಕಲಚೇತನ, ತಂದೆ ಮರಣ ನಂತರ ಕುಲ ವೃತ್ತಿಯಾದ ಕ್ಷೌರಿಕ ವೃತ್ತಿಯನ್ನು ಅಣ್ಣ ವೆಂಕಟೇಶ್ ರವರಿಂದ ಕಲಿತು, ನಿಟ್ಟೂರಿನ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಪಕ್ಕ ಸಣ್ಣದೊಂದು ಮಳಿಗೆಯಲ್ಲಿ ಬದುಕಿನ ಬಂಡಿ ಸಾಗಿಸತೊಡಗಿದ್ದ. ಆರ್ಥಿಕವಾಗಿ ಸಧೃಡರಾಗಿಲ್ಲದ ಗೋವಿಂದರಾಜು ರವರ ಅಂಗಡಿ ರಸ್ತೆ ಅಗಲೀಕರಣದಲ್ಲಿ ಸಂಪೂರ್ಣ ವಾಗಿ ಕಳೆದು ಕೊಂಡಿರುವ ವಿಷಯ ತುಮಕೂರು ತಾಲ್ಲೂಕು ಹಾಗೂ ನಗರ ಸವಿತಾ ಸಮಾಜದ ಅಧ್ಯಕ್ಷ, ಜಿಲ್ಲಾ ಸವಿತಾ ಸಮಾಜ ಯುವ ಪಡೆಯ ಮುಖ್ಯಸ್ಥ ಕಟ್‌ವೆಲ್ ರಂಗನಾಥ್ ಅವರಿಗೆ ನಿಟ್ಟೂರು ಅಧ್ಯಕ್ಷರಾದ ಕರಿಯಣ್ಣ ನವರು ತಿಳಿಸಿರುತ್ತಾರೆ, ಸ್ವಾವಲಂಬಿ ಜೀವನ ನಡೆಸಲು ಸ್ವಯಂ ಉದ್ಯೋಗ ಕೈಗೊಳ್ಳಲು ಬಂಡವಾಳದ ಕೊರತೆ ಇರುವ ಗೋವಿಂದರಾಜು ರವರಿಗೆ ಪರಸ್ಪರ ಸಹಾಯದಿಂದ ನೆರವು ನೀಡಲು ಚಿಂತಿಸಿದರು. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ರಚನೆ ಯಾಗಿರುವ ತುಮಕೂರು ಜಿಲ್ಲಾ ಸವಿತಾ ಸಮಾಜ ಯುವ ಪಡೆಯ ವತಿಯಿಂದ ಅಸಹಾಯಕರಿಗೆ ನೆರವು ನೀಡುವ ಕ್ರಿಯಾ ಯೋಜನೆ ರೂಪಿಸಿದ ಕಟ್ ವೆಲ್ ರಂಗನಾಥ್, ತುಮಕೂರು ಜಿಲ್ಲೆಯ ಎಲ್ಲಾ ಯುವಕರ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಆರ್ಥಿಕ ಸಹಾಯ ಪಡೆದರು. ಗುಬ್ಬಿ ಸವಿತಾ ಸಮಾಜ ಯುವ ಪಡೆ ಅಧ್ಯಕ್ಷರಾಧ ರಮೇಶ್ ಎನ್, ರವರ ಸಹಕಾರದಿಂದ ಹಾಗೂ ಶ್ರೀ ವಿರೇಶಾನಂದ ಸ್ವಾಮಿಗಳ ಆರ್ಶೀವಾದದಿಂದ ಸಲೂನ್ ಸ್ವಚ್ಛತಾ ಅಭಿಯಾನ ಯೋಜನೆಯ ಅಡಿಯಲ್ಲಿ ಒಂದು ಉತ್ತಮ ಕ್ಷೌರಕುಟೀರ ನಿರ್ಮಾಣ ಮಾಡಿ, ದಿನಾಂಕ 16-01-2024 ರ ಮಂಗಳವಾರ ಕ್ಷೌರ ಸೇವೆ ಪುನರ್ ಆರಂಭಿಸಲು ಗೋವಿಂದರಾಜು ರವರ ಸ್ವಗ್ರಾಮ ಬೆಣ್ಣೂರಿನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ.
ಇಂದು ಗೋವಿಂದರಾಜು ರವರ ಕುಟುಂಬ ನೆಮ್ಮದಿಯ ಜೀವನ ನಡೆಸುವಂತಾಗಿರುವುದು ಸಂತಸದ ಸಂಗತಿ. ಇದೇ ರೀತಿ ಸರ್ಕಾರದ ನೆರವನ್ನು ನಿರೀಕ್ಷಿಸದೇ ನಮ್ಮ ಸಮಾಜದವರು ಪರಸ್ಪರ ಸಹಾಯ ಮಾಡುವ ಮೂಲಕ ಕೆಳಗೆ ಬಿದ್ದಿರುವ ವ್ಯಕ್ತಿಯನ್ನು ಮೇಲೆತ್ತುವ ಕೆಲಸಮಾಡಿದರೆ ವಸುದೈವ ಕುಟುಂಬಕಂ ಎಂಬ ಮಾತು ಸಾಧ್ಯವಾಗುತ್ತದೆ ಹಾಗೂ ವಿಶೇಷ ಚೇತನ ಗೋವಿಂದರಾಜುವಿಗೆ ಸಲೂನ್ ಕೀ ಹಸ್ತಾಂತರಿಸಲಾಯಿತು. ಈ ಸಂಧರ್ಭದಲ್ಲಿ ಸಮುದಾಯದ ಮುಖಂಡರಾದ ಸ್ವದೇಶಿ ವಿಶ್ವಣ್ಣನವರು, ನಾಮದೇವ್ ನಾಗರಾಜು ರವರು, ಯಲಹಂಕ ಲಕ್ಷೀನಾರಾಯಣ್ ರವರು, ಜಿಲ್ಲಾಧ್ಯಕ್ಷರಾದ ಕಟ್ ವೆಲ್ ರಂಗನಾಥ್, ನಿಟ್ಟೂರು ಅಧ್ಯಕ್ಷರಾದ ಕರಿಯಣ್ಣನವರು, ರಾಮಸ್ವಾಮಿ, ಗುಬ್ಬಿ ಯುವ ಪಡೆ ಅಧ್ಯಕ್ಷರಾದ ರಮೇಶ್ ಎನ್, ಗುಬ್ಬಿ ಲಕ್ಷೀನಾರಾಯಣ್(ಪಾಪಣ್ಣ) ಮಾಜಿ ಅಧ್ಯಕ್ಷರು ಮುಕುಂದರಾಜು, ನಟರಾಜು ರವರು, ಮಂಡ್ಯ ಜಯರಾಮಣ್ಣ, ಜಡೇಕುಂಟೇ ರಾಜು, ಚಂದ್ರು ದಾಸರಹಳ್ಳಿ, ಹಾಗೂ ಜಿಲ್ಲಾ ಮಟ್ಟದ ಯುವ ಪಡೆ ಸದಸ್ಯರು ಮತ್ತು ಸವಿತಾ ಸಮಾಜದ ಬಂಧುಗಳು ಹಾಜರಿದ್ದರು.