ದತ್ತ ಜಯಂತಿ ಮಹತ್ವ

ದತ್ತ ಜಯಂತಿಯಂದು (ಮಾರ್ಗಶಿರ ಹುಣ್ಣಿಮೆ) ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ. ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡಿರುವ ಪೂರ್ವಜರಿಗೆ ಗತಿಯು ಸಿಗುತ್ತದೆ. ಮುಂದೆ ಅವರು ಅವರ ಕರ್ಮಗಳಿಗನುಸಾರ ಮುಂದುಮುಂದಿನ ಲೋಕಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಂದ ನಮಗಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ. 2023 ರಲ್ಲಿ ದತ್ತ ಜಯಂತಿಯನ್ನು 26 ಡಿಸೆಂಬರ್, ಮಂಗಳವಾರದಂದು ಆಚರಿಸಲಾಗುವುದು.

ದತ್ತಾತ್ರೇಯ ದೇವತೆ ಮಾರ್ಗಶೀರ್ಷ ಪೂರ್ಣಿಮಾ (ಹಿಂದೂ ತಿಂಗಳ ಮಾರ್ಗಶೀರ್ಷದಲ್ಲಿ ಹುಣ್ಣಿಮೆಯ ದಿನ) ಸಂಜೆ ಜನಿಸಿದರು. ಈ ದಿನವನ್ನು ದತ್ತ ದೇವರ ಆರಾಧಕರು ಹಬ್ಬವನ್ನಾಗಿ ಆಚರಿಸುತ್ತಾರೆ.

 

 

 

ಇತಿಹಾಸ

ಪ್ರಾಚೀನ ಕಾಲದಲ್ಲಿ, ಸೂಕ್ಷ್ಮ ಮತ್ತು ಗೋಚರ ರೂಪಗಳಲ್ಲಿನ ರಾಕ್ಷಸ ಶಕ್ತಿಗಳು ಭೂಮಿಯ ಮೇಲೆ ಮಹತ್ತರವಾಗಿ ಹೆಚ್ಚಾಗಿದ್ದವು. ಅವರನ್ನು ‘ದೈತ್ಯರು’ (ರಾಕ್ಷಸರು) ಎಂದು ಕರೆಯಲಾಗುತ್ತಿತ್ತು. ಅವುಗಳನ್ನು ನಾಶಮಾಡಲು ವಿವಿಧ ದೇವತೆಗಳ ಎಲ್ಲಾ ಪ್ರಯತ್ನಗಳು ವ್ಯರ್ಥವಾಯಿತು. ಆದ್ದರಿಂದ, ಬ್ರಹ್ಮದೇವನ ಆದೇಶದ ಮೇರೆಗೆ, ದತ್ತದೇವರು ವಿವಿಧ ಸ್ಥಳಗಳಲ್ಲಿ ವಿವಿಧ ರೂಪಗಳಲ್ಲಿ ಅವತರಿಸಬೇಕಾಯಿತು. ನಂತರ ರಾಕ್ಷಸರು ನಾಶವಾದರು. ಆದ್ದರಿಂದ ಈ ದಿನವನ್ನು ‘ದತ್ತ ಜಯಂತಿ’ ಎಂದು ಆಚರಿಸಲಾಗುತ್ತದೆ.

 

 

 

 

 

ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ಮತ್ತು ಅವರಿಗೆ ಸದ್ಗತಿಯನ್ನು ಪ್ರದಾನಿಸುವ ದೇವತೆ – ದತ್ತ

| ಶ್ರೀ ಗುರುದೇವ ದತ್ತ | ದತ್ತ ನಾಮಜಪ
ಅತೃಪ್ತ ಪೂರ್ವಜರಿಂದ ಯಾವುದೇ ರೀತಿಯ ತೊಂದರೆ ಇಲ್ಲದಿದ್ದಲ್ಲಿ ಮತ್ತು ಮುಂದೆ ತೊಂದರೆಗಳು ಆಗಬಾರದೆಂದು, ಹಾಗೆಯೇ ಸ್ವಲ್ಪ ತೊಂದರೆ ಇದ್ದರೆ ಪ್ರತಿದಿನ 1 ರಿಂದ 2 ಗಂಟೆ ‘ಶ್ರೀ ಗುರುದೇವ ದತ್ತ|’ ನಾಮಜಪವನ್ನು ಮಾಡಬೇಕು.

 

 

 

ದತ್ತಗುರುಗಳಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು

೧. ಹೇ ದತ್ತಾತ್ರೇಯಾ, ನೀನು ಇಪ್ಪತ್ನಾಲ್ಕು ಗುಣಗುರುಗಳನ್ನು ಮಾಡಿದಂತೆ ನನ್ನಲ್ಲಿಯೂ ಎಲ್ಲರಲ್ಲಿರುವ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳುವ ವೃತ್ತಿಯನ್ನು ನಿರ್ಮಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.
೨. ಹೇ ದತ್ತಾತ್ರೇಯಾ, ಭುವರ್ಲೋಕದಲ್ಲಿ ಸಿಲುಕಿಕೊಂಡಿರುವ ನನ್ನ ಅತೃಪ್ತ ಪೂರ್ವಜರಿಗೆ ಮುಂದಿನ ಗತಿಯನ್ನು ಪ್ರದಾನಿಸು.
೩. ಹೇ ದತ್ತಾತ್ರೇಯಾ, ನನ್ನನ್ನು ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸು. ನಿನ್ನ ರಕ್ಷಾಕವಚವು ನನ್ನ ಸುತ್ತಲೂ ಸದಾಕಾಲ ಇರಲಿ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ.

 

 

 

 

ಆಧಾರ: ಸನಾತನದ ಪವಿತ್ರ ಗ್ರಂಥ – ‘ದತ್ತ’

ಸಂಗ್ರಹ: ಶ್ರೀ. ವಿನೋದ ಕಾಮತ್ ರಾಜ್ಯ ವಕ್ತಾರಾರು ಸನಾತನ ಸಂಸ್ಥೆ.
ಸಂಪರ್ಕ: 9342599299

Leave a Reply

Your email address will not be published. Required fields are marked *

error: Content is protected !!