ತುಮಕೂರು : ತುಮಕೂರು ಕಸಬಾ ಅಮಾನಿಕೆರೆಯ ಸ.ನಂ. 15, 5, 4, 3 ಇವುಗಳಲ್ಲಿ ಹಾದು ಹೋಗಿರುವ ಸರ್ಕಾರಿ ರಾಜಕಾಲುವೆಯ ಜಾಗದಲ್ಲಿ ತುಮಕೂರಿನ ಪ್ರಪ್ರಥಮ ಮತ್ತು ಪ್ರತಿಷ್ಠಿತ ಎಸ್ ಮಾಲ್ ನಿರ್ಮಾಣವಾಗಿದೆ ಎಂದು ಇಮ್ರಾನ್ ಎಂಬುವವರು ದೂರು ನೀಡಿದ್ದ ಪರಿಣಾಮ ಇದೀಗ ನೋಟೀಸ್ ಒಂದನ್ನು ನೀಡಲಾಗಿದೆ.
ಸರ್ಕಾರಿ ರಾಜಕಾಲುವೆ ಹಾದು ಹೋಗಿರುವ ಜಾಗದಲ್ಲಿ ಎಸ್ ಮಾಲ್ ನಿರ್ಮಾಣವಾಗಿದ್ದು, ಕಟ್ಟಡದ ಕೆಲ ಭಾಗ ಸರ್ಕಾರಿ ರಾಜಕಾಲುವೆ ಮೇಲೆ ಕಟ್ಟಲಾಗಿದೆಂದು ಹೇಳಲಾಗಿದ್ದು ಅದನ್ನು ಈ ಕೂಡಲೇ ತೆರವುಗೊಳಿಸಬೇಕೆಂದು ತಹಶೀಲ್ದಾರ್ ರವರು ನೋಟೀಸ್ ನೀಡಿದ್ದಾರೆ, ಜೊತೆಗೆ ನಿಗಧಿತ ಅವಧಿಯೊಳಗೆ ತೆರವುಗೊಳಿಸದೇ ಹೋದ ಪಕ್ಷದಲ್ಲಿ ಅದನ್ನು ಸರ್ಕಾರದ ವತಿಯಿಂದ ತೆರವುಗೊಳಿಸಲಾಗುವುದು ಅದಕ್ಕೆ ತಗಲುವ ವೆಚ್ಚವನ್ನು ಎಸ್ ಮಾಲ್ ಮಾಲೀಕರೇ ಭರಿಸಬೇಕೆಂದು ನೋಟೀಸ್ ನಲ್ಲಿ ತಿಳಿಸಲಾಗಿದೆ.
ಎಸ್ ಮಾಲ್ ಒತ್ತುವಾರಿ ಮಾಡಿ ಕಟ್ಟಿರುವ ಜಾಗ ತೆರವಾಗುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ ಅಥವಾ ಕೆಲವರಿಗೆ ಅಮೇಥ್ಯ ತಿನ್ನಿಸಿ ಹಾಗೇ ಉಳಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ.