ಮಾಯಾನಗರಿ ಕನ್ನಡ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ-ನಟ ಭರತ್ ಸಾಗರ್

ತುಮಕೂರು: ಡಿಸೆಂಬರ್ 15ರಂದು ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಮಾಯಾನಗರಿ ಕನ್ನಡ ಚಲನಚಿತ್ರ ಬಿಡುಗಡೆಯಾಗುತ್ತಿದ್ದು,ಈ ಚಿತ್ರದಲ್ಲಿ ಇಬ್ಬರು ನಟರಿದ್ದು ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ,ಶಂಕರ್ ಆರಾಧ್ಯ ನಿರ್ದೇಶಿಸಿದ್ದು, ೪ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ,ದ್ವಾರಕೀಶ್,ಸುಚೇಂದ್ರ ಪ್ರಸಾದ್,ಚಿಕ್ಕಣ್ಣ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು,ಅದ್ಧೂರಿ ಸೆಟ್ ಹಾಕಿ ಶೂಟ್ ಮಾಡಲಾಗಿದೆ,ಬೆಳ್ಳಿ ತೆರೆಯ ಹಿರಿಯ ನಟ-ನಟಿಯರು ಈ ಚಿತ್ರದಲ್ಲಿ ನಟಿಸಿದ್ದು,ಮೊದಲಿನಿಂದ ಕಡೆಯವರೆಗೂ ಈ ಚಿತ್ರ ನೋಡಲೇಬೇಕು,ಆ ರೀತಿ ಉತ್ತಮವಾಗಿ ಮೂಡಿಬಂದಿದೆ,ದೇವರಾಯನದುರ್ಗ,ಶಿವಮೊಗ್ಗ,ಜೋಗ್ ಫಾಲ್ಸ್,ಚಿಕ್ಕಮಗಳೂರು,ಬೆಂಗಳೂರು,ಇತ್ಯಾದಿ ಊರುಗಳಲ್ಲಿ ಚಿತ್ರೀಕರಣ ಮಾಡಲಾಗಿದೆ,ವಿಕ್ರಂ ಮಾಸ್ಟರ್ ಸಾಹಸ ನಿರ್ದೇಶನ ಮಾಡಿದ್ದಾರೆ,ಹೆಸರಾಂತ ನಿರ್ದೇಶಕ ಓಂ ಪ್ರಕಾಶ್ ರಾವ್ ಮಗಳು ಶ್ರಾವ್ಯರಾವ್ ನಟಿಯಾಗಿ ನಟಿಸಿದ್ದಾರೆ,ಉತ್ತಮ ಛಾಯಾಗ್ರಹಣ,ಕಥೆ-ಚಿತ್ರಕಥೆ,ನಿರ್ದೇಶನ,ಫೋಟೋಗ್ರಫಿ,ಸುಂದರ ವಿನ್ಯಾಸ,ಹಾಡುಗಳಿಂದ ಮೂಡಿಬಂದಿದ್ದು ಈ ಚಿತ್ರವನ್ನು ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಬೇಕೆಂದು ನಟ ಭರತ್ ಸಾಗರ್ ಮನವಿ ಮಾಡಿದರು.

 

 

ಅವರು ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಾನು ಈ ಹಿಂದೆ ಮೂಡ್ ಔಟ್ ಎಂಬ ಸಿನಿಮಾದಲ್ಲಿ ನಟನಾಗಿ ಮಾಡಿದ್ದು,ಈಗ ಮಾಯಾನಗರಿ,ಕಾಲವೇ ಮೋಸಗಾರ ಎಂಬ ಸಿನಿಮಾದಲ್ಲಿ ಸಹ ನಟನಾಗಿ ಅಭಿನಯಿಸಿದ್ದೇನೆ, ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಆಶೀರ್ವದಿಸಿ,ಈ ಚಿತ್ರ ಶತದಿನೋತ್ಸವ ಆಚರಿಸಲು ಆಶೀರ್ವದಿಸಿ ಎಂದು ಮನವಿ ಮಾಡಿದರು.

 

 

ನಿರ್ಮಾಪಕ ಸತೀಶ್ ಮಾತನಾಡಿ ಉತ್ತಮ ಕಥೆ ಇದ್ದರೆ ಎಲ್ಲರೂ ನೋಡುತ್ತಾರೆ,ಮಾಯನಗರಿ ಉತ್ತಮ ಕಥೆ ಹೊಂದಿದೆ,ತಾಂತ್ರಿಕ ವಿಭಾಗ,ನಟ-ನಟಿಯರು ಎಲ್ಲರೂ ಚೆನ್ನಾಗಿ ನಟನೆ ಮಾಡಿದ್ದಾರೆ, ಈ ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಲ್ಲರೂ ಚಿತ್ರಮಂದಿರಕ್ಕೆ ಬಂದು ಹೊಸ ಪ್ರತಿಭೆಗಳನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಉಮೇಶ್,ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷರಾದ ಮಂಜುನೇಮೇಶ್,ಪರೇರಾ.ಜಿ.ಪಿ.ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!