ತುಮಕೂರಿನಲ್ಲಿ ಜಿಲ್ಲಾ ಮಟ್ಟದ ಕೆಲವು ಅಧಿಕಾರಿಗಳು ಮಹಿಳಾ ಹಾಸ್ಟೆಲ್ ನಲ್ಲಿ ತಡ ರಾತ್ರಿಯ ಡಿಸ್ಕೋ ಸಾಂಗ್ ಗಳಿಗೆ ಹಾಸ್ಟೆಲ್ ವಿದ್ಯಾರ್ಥಿನಿಯರ ಜೊತೆ ಡ್ಯಾನ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.
ತುಮಕೂರು ನಗರದ ಗೆದ್ದಲಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದೀಪಾವಳಿ ಹಬ್ಬದಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಕೆಲ ಅಧಿಕಾರಿಗಳು ಮಹಿಳಾ ವಿದ್ಯಾರ್ಥಿಗಳು ಹಾಗೂ ಯುವತಿಯರ ಜೊತೆಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕೆಲ ಅಧಿಕಾರಿಗಳ ನಡೆಗೆ ಪ್ರಗತಿಪರರು, ಬುದ್ದಿ ಜೀವಿಗಳು ತೀವ್ರ ವಿರೋಧ ವ್ಯಕ್ತವಾಗಿದೆ.
ಏಕೆಂದರೆ ವಿದ್ಯಾರ್ಥಿನಿ ನಿಲಯದ ಮಕ್ಕಳಿಗೆ ವಾರ್ಡನ್ಗಳು / ನಿಲಯ ಪಾಲಕರು ಹೇಗೆ ಶಿಸ್ತು ಹೇಳಿಕೊಡುತ್ತಾರೆ, ಅವರು ಹೀಗೆ ಉದಾಸೀನ ತೋರಿದರೆ ಹೇಗೆ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿರುವ ವಿಷಯ ಮತ್ತೊಂದು ಕಡೆ ಆದರೆ, ಇನ್ನೂ ಕೆಲವು ಈ ಘಟನೆ ನಡೆದಿರುವುದು ಸಂಜೆ ಸಮಯದಲ್ಲಿ ಅದೂ ಸಹ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಏನಾದರೂ ಅವಘಢ ಸಂಭವಿಸಿದ್ದರೇ, ಇದಕ್ಕೆ ಹೊಣೆ ಯಾರನ್ನು ಮಾಡಬೇಕಾಗಿತ್ತು ಎಂಬ ಗುಸು ಗುಸು ಚರ್ಚೆ ನಡೆಯುತ್ತಿದೆ
ಬೇಲಿಯೇ ಎದ್ದು ಹೊಲೆ ಮೇದಿತೇ? ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿ ಕಾಡ ತೊಡಗಿದೆ.
ಹಲವು ಹಿರಿಯ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮುಂದೆಯೇ ದೀಪಾವಳಿ ಹಬ್ಬದ ನೇಪದಲ್ಲಿ ಯುವತಿಯ ರೊಂದಿಗೆ ಡಿಸ್ಕೋ ಸಾಂಗ್ಗಳು, ಹಾಗೂ ಪಡ್ಡೆ ಹುಡುಗರ ಸಾಂಗ್ ಗಳಿಗೆ ಹೆಜ್ಜೆ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ತುಮಕೂರು ನಗರದಲ್ಲಿ ಇನ್ನೂ 23 ಕ್ಕು ಹೆಚ್ಚು ಹಾಸ್ಟೆಲ್ ಗಳು ಇರುತ್ತವೆ, ಜೊತೆಗೆ ಬಾಲಕರ ಹಾಸ್ಟಲ್ ಗಳೂ ಇವೆ ಅವುಗಳನ್ನು ಹೊರತುಪಡಿಸಿ ನಗರದ ಹೊರವಲಯದ ಹಾಸ್ಟಲ್ ಅನ್ನೇ ಆಯ್ಕೆ ಮಾಡಿಕೊಂಡಿರುವುದು ಸಾಕಷ್ಟು ಚರ್ಚೆಗೂ ಸಹ ಗ್ರಾಸವಾಗಿದೆ.
ಅದೇನೇ ಇರಲಿ ಜಿಲ್ಲಾಮಟ್ಟದ ಅಧಿಕಾರಿಗಳು ಈ ರೀತಿ ಸಾರ್ವಜನಿಕವಾಗಿ ಸರ್ಕಾರಿ ಹಾಸ್ಟೆಲ್ ಗೆ ರಾತ್ರಿ ವೇಳೆ ತೆರಳಿ ನೃತ್ಯ ಮಾಡಿರುವುದು ನಿಜಕ್ಕೂ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿರುವ ವಿಷಯವಾದರೇ, ಮತ್ತೊಂದು ಕಡೆ ಹಾಸ್ಟಲ್ಗಳಲ್ಲಿರುವ ಮಕ್ಕಳ ಪೋಷಕರು ಯಾರಿಗೆ ದೂರನ್ನು ಸಲ್ಲಿಸಬೇಕು ಎಂಬ ಗೊಂದಲದಲ್ಲಿದ್ದಾರೆಂದು ಹೇಳಲಾಗಿದೆ.
ಯಾಕೆಂದರೆ ಈ ಸಮಯದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಜಂಟಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ದಂಡಾಧಿಕಾರಿಗಳು ಸೇರಿದಂತೆ ಹಲವಾರು ಮುಖ್ಯ ಅಧಿಕಾರಿಗಳೇ ಇದರಲ್ಲಿ ಭಾಗಿಯಾಗಿದ್ದು, ಯಾರಿಗೆ ದೂರನ್ನು ಸಲ್ಲಿಸಬೇಕು ಎಂದು ಗೊಂದಲದಲ್ಲಿ ಸಿಲುಕಿದ್ದಾರೆ…….