ಮಕ್ಕಳಿಂದ ಆಯೋಜಿಸಲಾಗಿದ್ದ ಸಂತೆ ಮೇಳಕ್ಕೆ ಪ್ರಶಂಸನೆಯ ಮಹಾಪೂರ ಹರಿದು ಬಂದಿದೆ

ತುಮಕೂರು : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಸಕೋಟೆ, ಕೊರಟಗೆರೆ ತಾಲೂಕು ,ಮಧುಗಿರಿ ಶೈಕ್ಷಣಿಕ ಜಿಲ್ಲೆ ಇಲ್ಲಿನ ಶಾಲಾ ಮಕ್ಕಳಿಂದ ಸಂತೆ ಮೇಳ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು.  ಸ್ವಯಂ ವಿದ್ಯಾರ್ಥಿಗಳೇ ತರಕಾರಿಗಳು, ಹಣ್ಣುಗಳು ಮುಂತಾದ ದಿನನಿತ್ಯದ ವಸ್ತುಗಳನ್ನು ಶಾಲೆಯ ಹತ್ತಿರ ಮಾರಾಟ ಮಾಡಿದರು.

 

 

ಗ್ರಾಮದ ಗ್ರಾಮಸ್ಥರು ತಮ್ಮ ಊರಿನ ಮಕ್ಕಳು ಆಯೋಜಿಸಿರುವ ಸಂತೆ ಮೇಳದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಖರೀದಿ ಮಾಡಿದರು. ಸುಮಾರು 25 ಸಾವಿರ ರೂಪಾಯಿಗಳ ವಹಿವಾಟನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಕಾರ್ಯಕ್ರಮದ ನಂತರ ಮಕ್ಕಳಿಂದ ಈ ಸಂತೆ ಮೇಳದ ಅನುಭವವನ್ನು ಶಾಲಾ ಶಿಕ್ಷಕರು ಪಡೆದರು.

 

 

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೊಸಹಳ್ಳಿ ಶಿಕ್ಷಕರಾದ ನಾಗರಾಜು  ಮಾತನಾಡಿ ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡುವ ಚಟುವಟಿಕೆಯನ್ನು ಗ್ರಾಮಸ್ಥರು ಮತ್ತು ಶಿಕ್ಷಕರುಗಳು ಅದ್ಭುತವಾಗಿ ಆಯೋಜಿಸಿದ್ದು  ತುಂಬಾ ಪ್ರಶಂಸನೀಯ ಸಂಗತಿ ಎಂದರಲ್ಲದೇ ಮಕ್ಕಳಲ್ಲಿ ವಿದ್ಯಾಭ್ಯಾಸದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಈ ಸಂತೆ ಮೇಳೆ ಒಂದು ಅಭೂತಪೂರ್ವ ಕಾರ್ಯಕ್ರಮವಾಗಿದೆ.

 

 

ಅಲ್ಲದೆ ಕಾರ್ಯಕ್ರಮಕ್ಕೆ ಸಹಕಾರ ನೀಡಿದಂತ ವಿದ್ಯಾರ್ಥಿ ಸಿಬ್ಬಂದಿಗಳು ಗ್ರಾಮಸ್ಥರು ಎಲ್ಲರಿಗೂ ಕೂಡ ಮುಖ್ಯ ಶಿಕ್ಷಕರಾದ ಶ್ರೀಯುತ ಕಾಂತಪ್ಪ ರವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಗ್ರಾಮ ಪಂಚಾಯತಿ ಸದಸ್ಯರಾದ ಕಾಮಣ್ಣ ರವರು ಮಾತನಾಡಿ ಮಕ್ಕಳಿಗೆ ಅವರ ಭವಿಷ್ಯಕ್ಕಾಗಿ ವ್ಯವಹಾರಿಕ ಜ್ಞಾನವನ್ನು ನೀಡುತ್ತಿರುವ ಈ ಕಾರ್ಯಕ್ರಮವು ಅತ್ಯುತ್ತಮವಾಗಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ದೇವರಾಜು ಗ್ರಾಮ ಪಂಚಾಯಿತಿ ಸದಸ್ಯರು ಲಕ್ಷ್ಮಿದೇವಮ್ಮ ಎಸ್ ಡಿ ಎಂ ಸಿಅಧ್ಯಕ್ಷರು.
ಶಿವರಾಮಯ್ಯ ಶಿಕ್ಷಕರು .ದೇವರಾಜು ಶಿಕ್ಷಕರು. ಹರೀಶ್ ಕುಮಾರ್ ಶಿಕ್ಷಕರು ಹಾಗೂ ಗ್ರಾಮಸ್ಥರು ಪೋಷಕರು ವಿದ್ಯಾರ್ಥಿಗಳು ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!