ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ನಗರಾಧ್ಯ ಅಂತ ವಾಹನ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು ನಗರದ ವಿವಿಧ ಮುಖ್ಯ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಮಿತಿಮೀರಿದ ಹಿನ್ನೆಲೆಯಲ್ಲಿ ಸಂಚಾರದಟ್ಟಣೆ ನಿಯಂತ್ರಿಸುವ ಸಲುವಾಗಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಅವರು ಸ್ವತಹ ರಸ್ತೆಗಳಿದು ಪರಿಶೀಲನೆ ನಡೆಸಿ ಪುಟ್ ಬಾತ್ ಮೇಲೆ ಅನಧಿಕೃತ ವಾಹನಗಳ ನಿಲುಗಡೆಗೆ ಸೂಕ್ತ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಹಳೆ ಮಾರ್ಕೆಟ್, ಬಾಳನ ಕಟ್ಟೆ, ಮಂಡಿಪೇಟೆ ಸರ್ಕಲ್ ಸೇರಿದಂತೆ ಭಾಗದ ರಸ್ತೆಗಳಲ್ಲಿ ಪ್ರತಿನಿತ್ಯ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು ಈ ಭಾಗದಲ್ಲಿ ಸಾರ್ವಜನಿಕರ ಓಡಾಟ ಹೆಚ್ಚಿದ ಹಿನ್ನೆಲೆಯಲ್ಲಿ ವಾನ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ನಗರದಲ್ಲಿ ಸಾರ್ವಜನಿಕರು ನಗರದಲ್ಲಿ ಸುಲಲಿತವಾಗಿ ಸಂಚರಿಸಲು ಪಾದಚಾರಿಗಳು ನಡೆದು ಹೋಗಲು ಅನುಕೂಲವಾಗುವಂತೆ ಪುಟ್ಬಾತ್ ಮೇಲೆ ನಿಲುಗಡೆ ಮಾಡಿದ ವಾಹನಗಳ ತೆರವಿಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ತುಮಕೂರುನಗರ ವೃತ್ತ ನಿರೀಕ್ಷಿಕರಾದ ದೀನೆಶ್ ಅವರಿಗೆ ಸೂಚಿಸಿದರು.