ತುಮಕೂರು : ಖಾಸಗಿ ಬಸ್ ಮಾರುತಿ ಒಮಿನಿ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಅಸುನೀಗಿರುವ ಘಟನೆ ತುಮಕೂರು ಹೊರ ವಲಯದ ಮರಳೂರು ಕೆರೆ ಏರಿ ಮೇಲೆ ಇಂದು ಸಂಜೆ ಸಂಭವಿಸಿದೆ.
ಮರಳೂರು ಕೆರೆ ಏರಿ ತುಂಬಾ ಕಿರಿದಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಅಲ್ಲದೇ ಇದೇ ಮಾರ್ಗವಾಗಿ ತೆರಳುವ ಖಾಸಗಿ ಬಸ್ ಗಳು ಅತೀ ವೇಗ ಹಾಗೂ ಅಜಾಗರೂಕತೆ ಚಾಲನೆಯಿಂದ ಪದೇ ಪದೇ ಇಂತಹ ಅಪಘಾತಗಳು, ಸಾವು-ನೋವುಗಳು ಸರ್ವೇ ಸಾಮಾನ್ಯವಾಗುತ್ತಿವೆ.
ಗುರುವಾರ ಸಂಜೆ ನಡೆದ ಭೀಕರ ಅಪಘಾತವೂ ಸಹ ಖಾಸಗಿ ಬಸ್ ಚಾಲಕನ ಅತೀ ವೇಗದ ಚಾಲನೆಯಿಂದ ಸಂಭವಿಸಿದೆಂದು ಸ್ಥಳೀಯರು ಆರೋಪಿಸುತ್ತಿದ್ದು, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮೃತ ವ್ಯಕ್ತಿಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿರುತ್ತದೆ. ಇನ್ನು ಹಲವಾರು ಜನರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕಳುಹಿಸಿಲಾಗಿದೆಂದು ಮಾಹಿತಿ ತಿಳಿದು ಬಂದಿದೆ.