ಕನ್ನಡ ಭಾಷೆಯನ್ನು ಬಳಸುವ ಮೂಲಕ ಕನ್ನಡ ಉಳಿಸುವ ಕಾರ್ಯವಾಗಲಿ : ಸುನೀತ ದಗ್ಗಲ್

 

ತುಮಕೂರು : ತುಮಕೂರಿನ ಊರುಕೆರೆಯಲ್ಲಿರುವ ಜೈನ್ ಪಬ್ಲಿಕ್ ಶಾಲೆಯಲ್ಲಿ ಇಂದು ೬೮ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಸುನೀತ ದುಗ್ಗಲ್‌ರವರು ಕನ್ನಡ ಭಾಷೆಯ ಮಹತ್ವ, ಕರ್ನಾಟಕದಲ್ಲಿ ಕನ್ನಡದ ಭಾಷೆಯ ಕುರಿತಾಗಿ ನಡೆದ ಹೋರಾಟಗಳು, ಚಳುವಳಿಗಳು ಮತ್ತು ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಹೇಗೆ ನಾಮಕರಣವಾಯಿತು, ಕನ್ನಡ ನಾಡು-ನುಡಿಗಾಗಿ ಹೋರಾಟ ಮಾಡಿದ ಕನ್ನಡದ ವೀರರ ಕುರಿತು ವಿವರವಾಗಿ ಶಾಲೆಯ ಮಕ್ಕಳಿಗೆ ತಿಳಿಸಿದರು.

 

 

 

 

 

ಪ್ರಾಂಶುಪಾಲರು ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ಹಲವಾರು ಶಾಲೆಗಳು ಆಂಗ್ಲ ಮಾದ್ಯಮಕ್ಕೇ ಹೆಚ್ಚು ಪ್ರಾತಿನಿಧ್ಯತೆ ನೀಡುತ್ತಿವೆ, ಆದರೆ ನಮ್ಮ ಶಾಲೆಯಲ್ಲಿ ಅಂಗ್ಲ ಭಾಷೆಗೆ ಮಾತ್ರ ಸೀಮಿತವಾಗದೇ ಶಾಲಾ ಮಕ್ಕಳೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡುವುದು, ಸಂಬೋಧಿಸುವುದು ಜೊತೆಗೆ ಮಕ್ಕಳಲ್ಲಿ ಕನ್ನಡವನ್ನು ದೂರ ಮಾಡದೇ ಕನ್ನಡದಲ್ಲಿ ಮಾತನಾಡಿಸುವುದನ್ನು ಮಾಡುತ್ತಾ ಮಕ್ಕಳಲ್ಲಿ ಕನ್ನಡದ ಭಾಷೆಯ ಬಗ್ಗೆ ಗೌರವವನ್ನು ಕಾಪಾಡುವುದನ್ನು ಪರಿಪಾಠ ಮಾಡಿಕೊಂಡು ಬರಲಾಗುತ್ತಿದೆಂದು ಹೇಳಿದರು.

 

 

 

 

ಇನ್ನು ನಮ್ಮ ಕರ್ನಾಟಕಕ್ಕೆ ಶತಮಾನಗಳ ಇತಿಹಾಸವಿದ್ದು, ಹಲ್ಮಿಡಿ ಶಾಸನ ಅತ್ಯಂತ ಪುರಾತನ ಶಾಸನ, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಸಾಮ್ರಾಜ್ಯ ಹೀಗೆ ನಮ್ಮ ರಾಜ್ಯವನ್ನು ಆಳಿದ ರಾಜ ಮನೆತನೆಗಳ ಬಗ್ಗೆ ಪರಿಚಯವನ್ನು ಈ ಸಮಯದಲ್ಲಿ ಮಕ್ಕಳಿಗೆ ತಿಳಿಸಿದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾನಿಕೇತನ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ನರೇಂದ್ರ ಬಾಬುರವರು ಮಕ್ಕಳಿಗೆ “ಕನ್ನಡ ನಾಡು ಮತ್ತು ನುಡಿಯ ಮಹತ್ವ ಹಾಗೂ ಕರ್ನಾಟಕದ ಏಕೀಕರಣದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

 

 

 

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳು ಪಥ ಸಂಚಲನದ ಮೂಲಕ ನಾಡಧ್ವಜಕ್ಕೆ ವಂದನೆ ಸಲ್ಲಿಸಿದರು. ಜೊತೆಗೆ ವಿಶೇಷವಾಗಿ ಶಾಲಾ ಮಕ್ಕಳೇ ಕನ್ನಡ ಭಾಷೆಯ ಕುರಿತ ಭಾಷಣವನ್ನು ಮಾಡಿದರು, ಕಿರುನಾಟಕ ಪ್ರದರ್ಶನ ಮಾಡಲಾಯಿತು, ನೃತ್ಯ ಮತ್ತು ಗಾಯನ ಕಾರ್ಯಕ್ರಮಗಳು ಈ ಸಮಾರಂಭಕ್ಕೆ ಮೆರುಗು ನೀಡಿದವು. ಈ ಸಂದರ್ಭದಲ್ಲಿ ಶಾಲಾ ನಿರ್ವಾಹಕಾಧಿಕಾರಿಗಳಾದ ಬಸವರಾಜು, ಸಂಯೋಜಕರುಗಳಾದ ಚನ್ನಬಸಯ್ಯ ಹಾಗೂ ಶ್ರೀಮತಿ ಪೂರ್ಣಿಮಾ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!