ತುಮಕೂರು: ರಾಜ್ಯಾದ್ಯಂತ 68ನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು ಪ್ರತಿ ಸಂಘ ಸಂಸ್ಥೆ, ಸರ್ಕಾರಿ ಕಚೇರಿ, ಖಾಸಗಿ ಕಛೇರಿಗಳು ಸೇರಿದಂತೆ ವಿವಿಧಡೆ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬಿ.ಡಿ.ಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ (ಪಿಡಿಒ) ತಮ್ಮ ಗ್ರಾ.ಪಂ. ಸದಸ್ಯರಿಗೆ ರಾಜ್ಯೋತ್ಸವಕ್ಕೆ ಆಹ್ವಾನಿಸುವ ಬರದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಸಹಿ ಹಾಕದೇ ಪ್ರತಿಯನ್ನು ರವಾನಿಸಿರುವುದು ಉದ್ಧಟನವನ್ನು ತೋರಿರುವುದಲ್ಲದೇ ಸದಸ್ಯರಿಗೆ ಅವಮಾನ ಮಾಡಿಡುತ್ತಾರೆ.
ತುಮಕೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಇಂತಹ ಬೇಜಾವಾಬ್ದರಿ ಅಧಿಕಾರಿಗಳ ವಿರುದ್ದ ಯಾವ ಕ್ರಮವನ್ನು ಜರುಗಿಸುತ್ತಾರೊ ಎನ್ನುವುದು ಕಾದು ನೋಡ ಬೇಕಿದೆ.