ಪಾವಗಡ: ತಾಲೂಕಿನ ವಳ್ಳೂರು ಗ್ರಾಮದಲ್ಲಿ ನಿರ್ಮಾಣ ವಾಗುತ್ತಿರುವ ಖಾಸಗಿ ಐರ್‌ಕಾನ್ ರಿನುವೆಬಲ್ ಪವರ್ ಲಿಮಿಟೆಡ್ ಎಂಬ ಸೋಲಾರ್ ಕಂಪನಿಯ ಸಿಬ್ಬಂದಿ ದಬ್ಬಳಿಕೆ ಮಾಡಿ ತನ್ನ ಜಮೀನನ್ನು ಕಸಿದುಕೊಂಡು ಮೋಸ, ಅನ್ಯಾಯ ಮಾಡಲಾಗುತ್ತಿದ್ದು ಅಲ್ಲದೇ ನನಗೂ ಮತ್ತು ನನ್ನ ಕುಟುಂಬಕ್ಕೂ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆಂದು ವಳೂರು ಗ್ರಾಮದ ವಿಧವಾ ಮಹಿಳೆ ಲಾವಣ್ಯ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪಾವಗಡದ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ತಮ್ಮ ನೋವನ್ನು ಪತ್ರಕರ್ತರೊಂದಿಗೆ ಹಂಚಿಕೊಂಡಿರುವ ಮಹಿಳೆ ತಾನು ವಳ್ಳೂರು ಗ್ರಾಮದ ದಿವಂಗತ ನಾಗಮೋಹನರೆಡ್ಡಿ ಯವರ 2 ನೇ ಪತ್ನಿಯಾಗಿದ್ದು, ಮೊದಲನೆ ಪತ್ನಿ ನಳಿನಾ 2013 ರಲ್ಲಿ ವಿಚ್ಛೇದನ ಪಡೆದುಕೊಂಡಿರುತ್ತಾರೆ.
ಪಾವಗಡ ತಾಲ್ಲೂಕು ನೊಂದಣಿ ಅಧಿಕಾರಿ ರವಿಕುಮಾರ್ ಮತ್ತು ಸಿಬ್ಬಂದಿ ನನ್ನ ಜಮೀನನ್ನು ವಶಪಡಿಸಿಕೊಳ್ಳಲು ಈ ಸೋಲಾರ್ ಕಂಪನಿಯ ಜೊತೆ ಶಾಮೀಲಾಗಿ ಕಂಪನಿಯ ಕರ್ಣ್ಣ ಸುಬ್ಬಯ್ಯ ಮತ್ತು ಇತರರು ಸೇರಿ ನನ್ನ ಜಮೀನು ಕಬಳಿಸಲು ಮುಂದಾಗಿದ್ದಾರೆ ಈ ಕುರಿತು ತಿರುಮಣಿ ಪೋಲಿಸ್ ಠಾಣೆಗೆ ದೂರು ಸಲ್ಲಿಸಿದರೂ ಸಹ ಪೋಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲಾ ನನಗೆ ತಿಳಿಯದಂತೆ ಇವರೆಲ್ಲರೂ ಸಹ ಮೋಸ ಮತ್ತು ಅನ್ಯಾಯ ಮಾಡಲಾಗುತ್ತಿದೆ ಎಂದು ವಿಧವಾ ಮಹಿಳೆ ತಮ್ಮ ನೋವನ್ನು ಮಾದ್ಯಮಗಳ ಮುಂದೆ ತೋಡಿಕೊಂಡಿದ್ದಾರೆ.
ಇನ್ನು ಈ ವಿಚಾರದ ಕುರಿತು ಸ್ಥಳೀಯ ಪ್ರಮುಖ ಮುಖಂಡರು ಹಾಗೂ ತಾಲ್ಲೂಕು ರಾಜಕೀಯದ ಪ್ರಭಾವಿ ಚನ್ನಕೇಶವರೆಡ್ಡಿ ಮಾತನಾಡಿ, ಬಾಧಿತ ಮಹಿಳೆ ಲಾವಣ್ಯ ನನ್ನ ಸೊಸೆ ಸಂಬಂದಿಯಾಗಿದ್ದು ಈ ಮಹಿಳೆಗೆ ಬೆಂಬಲಿಸಿದ್ದರಿಂದ ಕಂಪನಿಯು ಸಹ ನನ್ನ ವಿರುದ್ದ ತಿರುಮಣಿ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿ ನನ್ನ ಮೇಲೆ ಸುಳ್ಳು ಎಫ್. ಐ. ಆರ್. ದಾಖಲಿಸಿದ್ದಾರೆ, ಇವರೆಲ್ಲರೂ ಸೇರಿಕೊಂಡು ಈ ಭಾಗದ ಅಮಾಯಕರ ಜಮೀನುಗಳನ್ನು ಕಬಳಿಸುವ ದುರುದ್ದೇಶದಿಂದ ಈ ರೀತಿಯಾಗಿ ಮಾಡುತ್ತಿದ್ದಾರೆ ಅದರಂತೆ ನನ್ನ ಸೊಸೆ ಲಾವಣ್ಯ ದೂರು ಸಲ್ಲಿಸಿ ವಾರ ಕಳೆದರೂ ಯಾವುದ ಕ್ರಮ ಕೈಗೊಂಡಿಲ್ಲ, ಇದರ ಹಿಂದೆ ಹಾಲಿ ಚುನಾಯಿತ ವ್ಯಕ್ತಿಗಳ ಕೈವಾಡವೂ ಇದೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಈ ಕುರಿತು ತನಗೆ ನ್ಯಾಯ ದೊರಕಿಸಿಕೊಡದಿದ್ದೇರೆ ತಾನು ದಯಮಾರಣಕ್ಕೆ ಅರ್ಜಿ ಸಲ್ಲಿಸಿ, ದಯಮಾರಣಕ್ಕೆ ಬಲಿಯಾಗಬೇಕಾಗುತ್ತದೆಂದು ಮಾದ್ಯಮಗಳ ಮುಂದೆ ತಮ್ಮ ಅಳಲನ್ನು ಲಾವಣ್ಯ ಹೊರಹಾಕಿದ್ದಾರೆ.