ಕತ್ತಲೆಯಲ್ಲೂ ಕಾರ್ಯ ನಿರ್ವಹಣೆ ಮಾಡಿ ಬಾರಿ ಮೆಚ್ಚುಗೆಗೆ ಪಾತ್ರರಾದ ತುಮಕೂರು ಉಪ ವಿಭಾಗಧಿಕಾರಿ

ತುಮಕೂರು ನಗರದ ಜಿಲ್ಲಾಧಿಕಾರಿ  ಕಚೇರಿ ಆವರಣದಲ್ಲಿರುವ ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ   ಇಂದು ಸಂಜೆ ಕಲಾಪ ನಡೆಯುವಾಗ ವಿದ್ಯುತ್ ಕೈಕೊಟ್ಟರೆ ಮೊಬೈಲ್ ಟಾರ್ಚ್ ಬೆಳಕೇ ಆಸರೆಯಾಗಿದೆ.

 

 

 

ಜಿಲ್ಲಾಧಿಕಾರಿ ಕಚೇರಿ ಸುಣ್ಣ ಬಣ್ಣ ಬಳಿದುಕೊಂಡು ಹೊರಗೆ ರಂಗು ರಂಗಾಗಿ ಮಿಂಚುತ್ತಿದ್ದರೆ ಒಳಗೆ ಮಾತ್ರ  ಅಧಿಕಾರಿಗಳು ಕತ್ತಲೆಯಲ್ಲಿ ಕೆಲಸ ಮಾಡುವಂತ ಪರಿಸ್ಥಿತಿ ಬಂದಿದೆ. ಹೌದು ಇಂದು ತುಮಕೂರು ಉಪ ವಿಭಾಗಧಿಕಾರಿ ತಮ್ಮ ನ್ಯಾಯಾಲಯ ಕಲಾಪದ ಸಮಯದಲ್ಲಿ ಕರೆಂಟ್ ಕೈ ಕೊಟ್ಟ ಪರಿಣಾಮ   ಟಾರ್ಚ್ ಬೆಳಕಲ್ಲಿ    ಕೆಲಸ ಮಾಡುವ  ಪರಿಸ್ಥಿತಿ  ಬಂದಿತು.

 

ಮಂಗಳವಾರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕೋರ್ಟ್ ಕಲಾಪ ನಡೆಯುತ್ತಿತ್ತು,ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿತ್ತು,
ವಿದ್ಯುತ್ ಕೈ ಕೊಟ್ಟಾಗ ಬದಲಿ ವ್ಯವಸ್ತೆಯಾಗಿ ಚಾಲ್ತಿಗೆ ಬಂದದ್ದು ಮೊಬೈಲ್ ಟಾರ್ಚ್ ಬೆಳಕು, ಟಾರ್ಚ್ ಬೆಳಕಲ್ಲೇ ಉಪವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ವಕೀಲರ ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿದ್ದ ದೃಶ್ಯ ಜಿಲ್ಲಾಢಳಿತದ ವೈಪಲ್ಯಕ್ಕೆ ಕನ್ನಡಿ ಹಿಡಿದಂತಿತ್ತು.

 

 

 

 

ಜಿಲ್ಲಾಢಳಿತ ಯುಪಿಎಸ್ ಹಾಗೂ ಜನರೇಟರ್ ಕೊಳ್ಳಲು ಸಾಧ್ಯವಾಗದಷ್ಟು ಅಸಹಾಯಕವಾಯಿತೇ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!