ರಸ್ತೆ ದುರಸ್ಥಿ ಮಾಡಿ ಮಾದರಿಯಾದ ಯುವಕರು

ತುಮಕೂರು : ತೋವಿನಕೆರೆ ಬಳಿಯ ಕೆಸ್ತೂರು ಕೆರೆ ಏರಿ ಕಟ್ಟೆ ಮೇಲೆ ಇತ್ತೀಚೆಗೆ ಸರಣಿ ಅಪಘಾತಗಳು ನಡೆಯುತ್ತಿದ್ದವು ಎನ್ನಲಾಗಿದೆ, ಇಲ್ಲಿನ ಸ್ಥಳೀಯ ಮುಖಂಡರು ಸೇರಿದಂತೆ ಹಲವಾರು ನಾಗರೀಕರು ಸಂಬಂಧಪಟ್ಟ ಇಲಾಖೆಗೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ರೀತಿಯಾದ ದುರಸ್ಥಿ ಕಾಮಗಾರಿ ಮಾಡದೇ ಇದ್ದನ್ನು ನೋಡಿ ಬೇಸತ್ತ ನವ ಯುವಕರ ತಂಡ ಇದರ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದಾರಲ್ಲದೇ ಮುಂದೆ ಸಂಭವಿಸಬಹುದಾಗಿದ್ದ ಹಲವಾರು ಸಾವು ನೋವುಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

 

 

 

 

ಮುಂದೆ ಸಂಭವಿಸಬಹುದಾದ ಅಪಘಾತಗಳನ್ನು ತಡೆದು ಯುವ ಪೀಳಿಗೆಗೆ ಮಾದರಿಯ ವ್ಯಕ್ತಿಗಳಾಗಿದ್ದಾರೆ, ಇನ್ನು ಈಗಾಗಲೇ ಈ ಭಾಗದಲ್ಲಿ ಹಲವಾರು ಅಪಘಾತಗಳು ಸಂಭವಿಸಿ, ನಾನಾ ರೀತಿಯ ತೊಂದರೆಗಳನ್ನು ಅನುಭವಿಸಿರುವ ಸ್ಥಳೀಯ ನಿವಾಸಿಗಳಿಗೆ ಇವರು ಆಶಾ ಕಿರಣಗಳಾಗಿ ಮುಂದೆ ಬಂದಿದ್ದಾರೆ ಎನ್ನಲಾಗಿದೆ.

 

 

 

 

ಇನ್ನು ಈ ಘಟನೆ ಕೊರಟಗೆರೆ ತಾಲ್ಲೂಕು, ತೋವಿನಕೆರೆ ಹೋಬಳಿ ಬಳಿಯಿರುವ ಕೆಸ್ತೂರು ಕೆರೆ ಬಳಿ ಎಂದು ಹೇಳಲಾಗಿದ್ದು, ಪ್ರಜ್ಞಾವಂತ ಯುವಕರ ತಂಡವಾದ ಹೇಮಂತ್‌, ತಿಮ್ಮರಾಜು, ಮಹಬೂಪಾಷ, ವಿರೇಂದ್ರ ಇವರುಗಳು ಕೆರೆ ಸೇತುವೆ ಮೇಲಿದ್ದ ಗುಂಡಿಗಳಿಗೆ ಸೀಮೆಂಟ್‌ ಹಾಕಿ ಮುಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

 

 

 

 

ಇಂತಹ ಯುವಕರ ತಂಡ ಸ್ಥಳೀಯ ಅಧಿಕಾರಿಗಳಿಗೆ ಸೇರಿದಂತೆ ಚುನಾಯಿತ ಪ್ರತಿನಿಧಿಗಳಿಗೆ ಮಾದರಿಯಾಗುವಂತಹ ಕೆಲಸ ಮಾಡಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ, ಇವರುಗಳಿಗೆ ಸಾರಥಿಯಾಗಿ ಮುಂದೆ ನಿಂತಿದ್ದ ಪತ್ರಕರ್ತ, ಯುವ ಮುಖಂಡ ಹೇಮಂತ್‌ ಕುಮಾರ್‌ರವರ ಕಾರ್ಯ ಶ್ಲಾಘನೆಯನ್ನು ಸ್ಥಳೀಯ ನಾಗರೀಕರು ಸೇರಿದಂತೆ ಗ್ರಾಮಸ್ಥರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!