ತುಮಕೂರು : ನಗರದ ಮಂಡಿಪೇಟೆ ಸಮೀಪದಲ್ಲಿರುವ ಪಾಂಡುರಂಗನಗರದ ಶ್ರೀ ರೇಣುಕಾ ಯಲ್ಲಮದೇವಿ ದೇವಸ್ಥಾನದಲ್ಲಿ ಭಕ್ತರ ಸೋಗಿನಲ್ಲಿ ಬಂದ ಇಬ್ಬರು ಕಳ್ಳರು ಅರ್ಚಕರ ಗಮನ ಬೆರೆಡೆ ಸೆಳೆದು ಕಣ್ಣಿಗೆ ಮಂಕುಬೂದಿ ಎರಚಿ ದೇವರಿಗೆ ಹಾಕಲಾಗಿದ್ದ ಬೆಳ್ಳಿ ಕಿರೀಟಿ, ನಾಗಾಭರಣ, ಚಿನ್ನದ ಒಡವೆಗಳನ್ನು ಹಾಡುಹಗಲೇ ಕದ್ದೊಯ್ದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್ನು ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಕಳೆದ ೩ ವರ್ಷಗಳ ಹಿಂದೆ ದೇವರಿಗೆ ನೂತನವಾಗಿ ಸುಮಾರು ೭೫೦ ಗ್ರಾಂ ತೂಕದ ಬೆಳ್ಳಿ ಕಿರೀಟವನ್ನು ಮಾಡಿಸಲಾಗಿತ್ತು, ಇನ್ನು ಕಳೆದ ೩೫ ವರ್ಷಗಳಿಂದಲೂ ನಮ್ಮ ಕುಟುಂಬದವರು ಪೂಜೆ ನೆರವೇರಿಸಿಕೊಂಡು ಬರುತ್ತಿದ್ದು, ಇದುವರೆವಿಗೂ ಯಾವುದೇ ಅಹಿತಕರ ಘಟನೆ ಹಾಗೂ ಕಳ್ಳತನ ಆಗಿರಲಿಲ್ಲ ಎಂದು ತಿಳಿಸಿದರು.
ಕಳೆದ ವಾರ ಭಕ್ತರ ಸೋಗಿನಲ್ಲಿ ಕಪ್ಪು ಬಣ್ಣದ ವಾಹನದಲ್ಲಿ ಬಂದಂತಹ ಇಬ್ಬರು ಅನಾಮಿಕರು ದೇವಸ್ಥಾನದ ಅರ್ಚಕರು ಇಲ್ಲದೇ ಇರುವ ಸಮಯದಲ್ಲಿ ದೇವಸ್ಥಾನದ ಮುಂದೆಯೇ ಇರುವ ಅವರ ಮನೆಯ ಬಾಗಿಲು ತಟ್ಟಿ ತಮ್ಮ ಮಗುವಿಗೆ ಅಮ್ಮಾ ಆಗಿದೆ, ದಯಮಾಡಿ ದೇವರಿಗೆ ಪೂಜೆ ಮಾಡಿ ಪ್ರಸಾದ ಕೊಡಿ ಎಂದು ಪರಿಪರಿಯಾಗಿ ಅರ್ಚಕರ ಪತ್ನಿಯೊಂದಿಗೆ ಗೊಳಾಡುತ್ತಾರೆ, ಆಗ ಅವರು ನನ್ನ ಪತಿಯವರು ಪೂಜೆ ಮಾಡಿ ಎಲ್ಲೋ ಹೋಗಿದ್ದಾರೆ ಎಂದು ಹೇಳಿದಾಗ್ಯೂ ಅವರು ಕೇಳದೇ ಇಲ್ಲಾ ನೀವೇ ಬಂದು ಪ್ರಸಾದ, ತೀರ್ಥ ಕೊಡಿ ಎಂದು ಕೇಳಿದ ಹಿನ್ನಲೆಯಲ್ಲಿ ದೇವಾಲಯದ ಬಾಗಿಲು ತೆಗೆಯುತ್ತಿದ್ದಂತೆ ಮುಖಕ್ಕೆ ಮತ್ತು ಬರುವ ಔಷಧಿ ಎರಚಿ ಕ್ಷಣಾರ್ಥದಲ್ಲೇ ದೇವಾಲಯದ ಆಭರಣ ಕದ್ದು ಪರಾರಿಯಾಗಿರುವ ಘಟನೆ ಸಂಬಂಧ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ. ಅದೇನೇ ಇರಲಿ ಹಾಡು ಹಗಲೇ ಇಂತಹ ಘಟನೆ ನಡೆದಿದ್ದು, ಸ್ಥಳೀಯರಿಗೂ ಚಿಂತೆಗೀಡು ಮಾಡಿದ್ದು, ಪೊಲೀಸರು ಇನ್ನಾದರೂ ಎಡೆಮೂರಿ ಕಟ್ಟಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.