ಪಾವಗಡ : ಪೊಲೀಸ್ ಇಲಾಖೆ ಹಾಗೂ ಆಟೋ ಚಾಲಕರು ಉತ್ತಮ ಬಾಂದವ್ಯ ಹೊಂದಿದಾಗ ಮಾತ್ರ ಕಾನೂನು ಸುವ್ಯವಸ್ಥೆ ತಡೆಗಟ್ಟಲು ಮಾತ್ರ ಸಾಧ್ಯ ಎಂದು ಮಧುಗಿರಿ ಡಿ ವೈ ಎಸ್ ಪಿ ರಾಮಕೃಷ್ಣ ಕರೆ ನೀಡಿದರು.
ಪಾವಗಡ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆ ಹಾಗೂ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ವತಿಯಿಂದ ಆಟೋ ಚಾಲಕರಿಗೆ ಡಿ. ಎಲ್ ವಿತರಿಸಿ ಮಧುಗಿರಿ ಡಿ.ವೈ.ಎಸ್. ಪಿ.ರಾಮಕೃಷ್ಣ ರವರು ಮಾತನಾಡುತ್ತ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಪಾವಗಡ ಪಟ್ಟಣದಲ್ಲಿ ಆಟೋ ದಾಖಲಾತಿಗಳ ನವೀಕರಣ ಗೊಳಿಸುವ ಶಿಬಿರವನ್ನು ಏರ್ಪಡಿಸಲು ಸಾರಿಗೆ ಇಲಾಖೆ ಯೊಂದಿಗೆ ಚರ್ಚಿಸಿ ಅನುಕೂಲ ಮಾಡಿಕೊಡುವಾಗಿ ತಿಳಿಸಿದರು.
ಪಾವಗಡ ಆರಕ್ಷಕ ವೃತ್ತ ನೀರಿಕ್ಷಕರಾದ ಲಕ್ಷ್ಮಿಕಾಂತ್ ರವರು ಮಾತನಾಡುತ್ತ ಪಾವಗಡ ಪಟ್ಟಣದ ಆಟೋ ನಿಲ್ದಾಣಗಳ ಸರಥಿ ಸಾಲಿನ ವ್ಯವಸ್ಥೆಗಾಗಿ ಬ್ಯಾರಿಕೆಡ್ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಹಾಗೂ ಆಟೋ ಚಾಲಕರು ಕಡ್ಡಾಯವಾಗಿ ದಾಖಲಾತಿಗಳನ್ನು ಹೊಂದಿ ಪೊಲೀಸ್ ಇಲಾಖೆ ವತಿಯಿಂದ ಡಿಸ್ ಪ್ಲೇ ಕಾರ್ಡ್ ನೀಡುವುದಾಗಿ ತಿಳಿಸಿದರು.
ಸಮಾಜ ಸೇವಕರು ನೇರಳಕುಂಟೆ ನಾಗೇಂದ್ರಕುಮಾರ್ ಮಾತನಾಡುತ್ತ ಆಟೋ ಚಾಲಕರು ಕಷ್ಟದಲ್ಲಿದ್ದರು ಸಹ ಲಾಕ್ ಡೌನ್ ಸಂಕಷ್ಟದಲ್ಲಿ ಭಾಗಿಯಾಗಿ ಪ್ರತಿನಿತ್ಯ ಉಪಹಾರ ನೀಡುರುವುದನ್ನು ಶ್ಲಾಘೀಸುತತ್ತಾ , ವಾಲ್ಮೀಕಿ ಆಟೋ ನಿಲ್ದಾಣದ ಕನ್ನಡ ಧ್ವಜ ಸ್ಥoಭದ ಕಾಮಗಾರಿಯನ್ನು ಆಗಸ್ಟ್ 15 ರೊಳಗೆ ಪೂರ್ಣಗೊಳಿಸಿ ಧ್ವಜಾರೋಹಣ ಮಾಡುವುದಾಗಿ ಹಾಗೂ ವಾಲ್ಮೀಕಿ ಆಟೋ ನಿಲ್ದಾಣ ಒಂದು ಭಾಗದ ಬ್ಯಾರಿಕೆಡ್ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ತಿಳಿಸಿದರು. ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನಂ ಶಶಿಕಿರಣ್ ಮಾತನಾಡುತ್ತ ಆಟೋ ಚಾಲಕರು ಸಂಯಮದಿಂದ ಆಟೋ ಚಾಲನೆ ಮಾಡಿಕೊಂಡು ಕಾನೂನು ಪಾಲಿಸಿ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಕರೆ ನೀಡಿದರು.ಮುಂದಿನ ದಿನಗಳಲ್ಲಿ ಆಟೋ ಚಾಲಕರ ಕಷ್ಟದಲ್ಲಿ ಭಾಗಿಯಾಗುವುದಾಗಿ ತಿಳಿಸಿದರು.
ನೂತನ ರೋಟರಿ ಅಧ್ಯಕ್ಷರಾದ ಶ್ರೀಧರ್ ಗುಪ್ತ ರವರು ಕಾರ್ಮಿಕ ಇಲಾಖೆ ಹಾಗೂ ರೋಟರಿ ಸಂಸ್ಥೆ ವತಿಯಿಂದ ಕಾರ್ಮಿಕ ಕಾರ್ಡ್ ಉಚಿತವಾಗಿ ನೀಡುವುದಾಗಿ ತಿಳಿಸಿದರು. ಆಟೋ ಚಾಲಕರ ಕೋರಿಕೆಯ ಮೇರೆಗೆ ಪಾವಗಡ ತಾಲ್ಲೂಕು ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಮಾರ್ಗದರ್ಶಕರು ಹಾಗೂ ಸಮಾಜ ಸೇವಕರು ಚಿಕ್ಕಜಾಳ ಆರಕ್ಷಕ ವೃತ್ತ ನೀರಿಕ್ಷಕರಾದ ಎಸ್. ಆರ್. ರಾಘವೇಂದ್ರ ರವರು ಪಾವಗಡದ ಸುಮಾರು 250 ಚಾಲಕರಿಗೆ ಸ್ವಾತಂತ್ರೋತ್ಸವದ ಅಂಗವಾಗಿ ಸಮವಸ್ತ್ರ ವಿತರಣೆ ಮಾಡುವ ಬರವಸೆಯನ್ನು ಆಟೋ ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜ್ ರವರಿಗೆ ನೀಡಿರುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷರಾದ ನಾಗರಾಜ್ ಕಾರ್ಯಕ್ರಮವನ್ನು ನೀರೂಪಿಸಿ ಎಲ್ಲಾ ಅತಿಥಿಗಳಿಗೆ ಆಟೋ ಚಾಲಕರ ಸಂಘದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿದರು.