ತುಮಕೂರಿನಲ್ಲಿ ತಾನು ಜನ್ಮ ನೀಡಿದ ಮಗುವನ್ನೇ ಕೊಂದ ಪಾಪಿ ತಾಯಿ

ತಾನು ಜನ್ಮ ನೀಡಿದ ಮಗುವನ್ನೇ ಕೊಂದು ಪಾಪಿ ತಾಯಿ ; ತುಮಕೂರಿನಲ್ಲಿ ನಡೆಯಿತು ವಿದ್ರಾವಕ ಘಟನೆ

 

ತುಮಕೂರು : ಮಾನಸಿಕ ಅಸ್ವಸ್ಥ ತಾಯಿಯು ತಾನು ಜನ್ಮ ನೀಡಿದ ಮಗುವನ್ನೇ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಶಾಂತಿನಗರ ಬಡಾವಣೆಯಲ್ಲಿ  ನಡೆದಿದೆ.

 

 

 

ತುಮಕೂರಿನ ಬನಶಂಕರಿ ಬಳಿಯ ಖಾಸಗಿ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ತನ್ವಿತ (6) ಎಂಬ  ಪುಟ್ಟ ಬಾಲಕಿಯನ್ನು ಹೆತ್ತ ತಾಯಿಯಿಂದಲೇ  ಕೊಲೆ ಮಾಡಲಾಗಿದೆ.  ತನ್ನ ಮಗುವನ್ನ ಕೊಲೆ ಮಾಡಿರುವ ಮಹಾತಾಯಿ ಹೇಮಲತಾ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥೆಯಾಗಿದ್ದು ಹಲವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೃತಪಟ್ಟ ಮಗುವಿನ ತಂದೆ ಕುಮಾರ್ ತಿಳಿಸಿದ್ದಾರೆ.

 

 

 

 

 

 

 

ಮೃತ  ಮಗುವಿನ ತಂದೆ ಗುಬ್ಬಿ ತಾಲೂಕಿನಲ್ಲಿ ಶಿಕ್ಷಕನಾಗಿ  ಕೆಲಸ ನಿರ್ವಹಿಸುತ್ತಿದ್ದು ಎಂದಿನಂತೆ ಇಂದು ಕೆಲಸಕ್ಕೆ ತೆರಳಿದ್ದ ತಂದೆಗೆ ಕೊಲೆ ಮಾಡಿರುವ ತಾಯಿಯೇ ಗಂಡನಿಗೆ ಶೀಘ್ರ ಬರುವಂತೆ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಮಾರ್ ಸ್ನೇಹಿತರನ್ನು ಮನೆಗೆ ಕಳುಹಿಸಿದಾಗ  ಈ ಘಟನೆ ಬೆಳಕಿಗೆ ಬಂದಿದೆ.

 

 

 

ಇನ್ನು ಕೊಲೆ ಮಾಡಿರುವ ತಾಯಿ ಯಾವುದೇ ಪಶ್ಚಾತಾಪವಿಲ್ಲದೆ ಮಗುವನ್ನ ಕೊಲೆ ಮಾಡಿ ಮನೆಯಲ್ಲಿ ಮಲಗಿಸಿ ವಿಕೃತಿ ಮೆರೆದಿದ್ದು ಸ್ಥಳೀಯ ನಿವಾಸಿಗಳಲ್ಲೂ ತೀವ್ರ ಆಕ್ರೋಶ ತಂದೊಡ್ಡಿದ್ದೆ. ಘಟನೆ ತಿಳಿದ ಕೂಡಲೇ ತುಮಕೂರಿನ ಜಯನಗರ ಪೊಲೀಸ್ ಠಾಣಾ  ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಕೊಲೆ ಮಾಡಿರುವ ತಾಯಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು ತನಿಖೆಯನ್ನು ಆರಂಭಿಸಿದ್ದಾರೆ.

 

 

 

 

ಇನ್ನು ಪುಟ್ಟ ಮಗುವಿನ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಮನೆಯ ಮುಂದೆ ಜಮಾಯಿಸಿ, ಗುಸು ಗುಸು ಎಂದು ಬೇರೆ ಬೇರೆ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿರುವುದು ಕೇಳ ಬಂದಿದೆ, ಆದರೂ ಸತ್ಯಾಸತ್ಯತೆಯು ಪೊಲೀಸ್‌ ತನಿಖೆಯಿಂದಷ್ಟೆ ಹೊರ ಬರಬೇಕಾಗಿದೆ.

 

 

 

ಸ್ಥಳದಲ್ಲೇ ಭಾವುಕರಾದ ಆರಕ್ಷಕ ಸಿಬ್ಬಂದಿಗಳು.

 

 

ಪುಟ್ಟ ಮಗುವಿನ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಆರಕ್ಷಕ ಸಿಬ್ಬಂದಿಗಳು ಮಗುವಿನ ಸ್ಥಿತಿಯನ್ನು ಕಂಡು ಕಣ್ಣೀರು ಹಾಕಿದ ಘಟನೆ ಸಹ ಎದ್ದು ಎಲ್ಲರ ಮನಸ್ಸು ಕಲಕುವಂತಿತ್ತು.

 

 

ಮೃತ ಮಗುವಿನ ಪ್ರಾರ್ಥಿವ ಶರ್ವ ಶರೀರವನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!