ಚುನಾವಣೆಯಲ್ಲಿ ರಾಜಕೀಯ ಶಕ್ತಿ ನೀಡುವವರು ದಲಿತರೇ, ಅಂಬೇಡ್ಕರ್ ಅವರು ದಲಿತರಿಗೆ ಮಾಡಿದ ಕಾನೂನುಗಳು ದುರ್ಬಳಕೆಯಾಗುತ್ತಿವೆ, ತುಮಕೂರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಿದೆ – ವೈ.ಹೆಚ್.ಹುಚ್ಚಯ್ಯ ಕಳವಳ

 

ತುಮಕೂರು :- ಭಾರತ ದೇಶದಲ್ಲಿ ಸಂವಿಧಾನ ರಚನೆ ಮಾಡಿ ದೌರ್ಜನ್ಯಕ್ಕೊಳಗಾದ ಅಸ್ಪೃಶ್ಯರಿಗೆ ಕಾನೂನುಗಳನ್ನ ರೂಪಿಸಿ ಕಟ್ಟುನಿಟ್ಟಿನ ಕಾನೂನುಗಳ ಅಡಿಯಲ್ಲಿ ದೇಶ ಮುನ್ನಡೆಯಲು ಡಾ. ಬಿಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿದ್ದು ದಲಿತರಿಗೆ ಮೀಸಲಾಗಿರುವಂತಹ ಕಾನೂನುಗಳು ಇಂದು ದುರ್ಬಳಕೆ ಯಾಗುತ್ತಿವೆ ಎಂದು ಜಿ. ಪಂ. ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ವೈ.ಹೆಚ್. ಹುಚ್ಚಯ್ಯ ಅವರು ಕಳವಳ ವ್ಯಕ್ತಪಡಿಸಿದ್ದರು.

 

 

 

 

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಗುಂಚಿ ವೃತ್ತದಲ್ಲಿ ಜಿಲ್ಲಾ ದಲಿತ ಜಲಾಂದೋಲನ ಸಮಿತಿಯವರು ಹಮ್ಮಿಕೊಂಡಿದ್ದ ಡಾ. ಬಿಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

 

 

 

 

ಬಸವ ಬುದ್ಧ ಕನಕದಾಸ ಸೇರಿದಂತೆ ಮಹನೀಯರ ಜಯಂತಿಗಳು ಮಾಡುವಾಗ ಕೇವಲ ಅವರ ಸಮುದಾಯದವರು ಮಾತ್ರ ಸೇರುತ್ತಾರೆ ಅದೇ ರೀತಿಯಾಗಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಜಯಂತೋತ್ಸವಕ್ಕೆ ಕೇವಲ ದಲಿತರು ಶೋಷಿತರು ಮಾತ್ರ ಇರುತ್ತಾರೆ ಆದರೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಕಟ್ಟಳೆಗಳ ಅಡಿಯಲ್ಲಿ ಎಲ್ಲರೂ ಬದುಕುತ್ತಿದ್ದಾರೆ ಅವರ ಜಯಂತಿಗಳು ಆದರ್ಶಗಳನ್ನು ಯಾರು ಪಾಲನೆ ಮಾಡದಿರುವುದು ದುರಂತವೇ ಸರಿ ಅಂಬೇಡ್ಕರ್ ಅವರು ವಿಶ್ವಜ್ಞಾನಿ ಇಂತಹ ತತ್ತಾದರ್ಶ ಪುರುಷರ ವಿಚಾರಗಳು ಹೊರಹೊಮ್ಮುವ ಜಯಂತಿಗಳಿಗೆ ಎಲ್ಲಾ ಸೇರುವುದು ಆದ್ಯ ಕರ್ತವ್ಯ ಎಂದರು.

 

 

 

 

 

ಶೋಷಿತರ ಧ್ವನಿಯಾಗಿರುವ ಅಂಬೇಡ್ಕರ್ ಬಾಬು ಜಜ್ವಾನ್ ರಾಮ ಅವರುಗಳ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದವರು ಒಗ್ಗೂಡುವಂತಹ ಕೆಲಸ ರಾಜಕೀಯ ನಾಯಕರುಗಳು ಹಾಗೂ ಅಧಿಕಾರಿಗಳು ಮಾಡಬೇಕಾಗಿದ್ದು 22ನೇ ಶತಮಾನದ ಜಾಗತಿಕ ಯುಗಕ್ಕೆ ಕಾಲಿಟ್ಟಿದ್ದು ದಲಿತರ ಮೇಲಿನ ದಬ್ಬಾಳಿಕೆಗಳು ದೌರ್ಜನ್ಯಗಳು ಗ್ರಾಮೀಣ ಭಾಗದಲ್ಲಿ ಇನ್ನೂ ಜೀವಂತವಾಗಿದ್ದು ಈಗಲೂ ಕೆಲವರಿಗೆ ಇರಲು ಸೂರಿಲ್ಲ ಬೆಳೆದು ತಿನ್ನಲು ಜಮೀನುಗಳಿಲ್ಲದ ಪರಿಸ್ಥಿತಿಗಳಿದ್ದು ಸತ್ತ ಸಂದರ್ಭದಲ್ಲಿ ದಲಿತರನ್ನ ಹೊಳಲು ಕೂಡಾ ಸ್ಮಶಾನಕ್ಕೆ ಜಾಗವಿಲ್ಲ, ಈಗಲೂ ಕೂಡಾ ಸವರ್ಣಿಯರು ಕೆಳಜಾತಿ ದಲಿತರನ್ನು ಬಳಸಿಕೊಂಡು ವಿವಾಹದ ನೇಪದಲ್ಲಿ ಕೊಲೆ ದೌರ್ಜನ್ಯ ಶೋಷಣೆಗಳು ನಡೆತ್ತಿವೆ ಎಂದರು.

 

 

 

 

ಸರ್ಕಾರಿ ಕಚೇರಿಗಳಲ್ಲಿ ದಲಿತ ಅಧಿಕಾರಿಗಳು ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಸೃಷ್ಟಿ ಮಾಡಿಕೊಂಡು ದಲಿತರಿಗೆ ಸಿಗಬೇಕಾದ ಉದ್ಯೋಗಾವಕಾಶಗಳನ್ನು ತಪ್ಪಿಸಿ ದಲಿತರಿಗೆ ದೀನ ದುರ್ಬಲರಿಗೆ ಸೌಲಭ್ಯಗಳನ್ನು ತಪ್ಪಿಸುತ್ತಿದ್ದು ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವವರಿಗೂ ಮಾಡಿಸಿಕೊಳ್ಳುವವರಿಗೂ ತಕ್ಕ ಶಿಕ್ಷೆಯಾಗಬೇಕು ಎಂದರು.

 

 

 

 

 

ಪ್ರತಿ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳಿಗೆ ರಾಜಕೀಯ ಶಕ್ತಿ ನೀಡುವವರು ದಲಿತರೆ ಹೆಚ್ಚು ಪ್ರಾಮಾಣಿಕವಾಗಿ ಹೋರಾಟ ಮಾಡಿ ದುಡಿದು, ರಾಜಕೀಯ ನಾಯಕನ ಪರವಾಗಿ ನಿಂತು ಕೆಲಸ ಮಾಡುವುದು ದಲಿತರು ಆದರೆ ರಾಜಕೀಯ ನಾಯಕರು ಚುನಾವಣೆಯ ನಂತರ ಕಷ್ಟಪಟ್ಟ ದಲಿತರನ್ನು ಕೈಬಿಟ್ಟು ಮೂಲೆಗುಂಪು ಮಾಡುತ್ತಿದ್ದಾರೆ ಹೀಗಾಗಿ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ಶಾಸಕರುಗಳು ವಿಧಾನ ಪರಿಷತ್ ಸದಸ್ಯರು ಮೂರು ಸಂಸದರುಗಳು ಪ್ರಾಮಾಣಿಕವಾಗಿ ಚುನಾವಣೆಯಲ್ಲಿ ದುಡಿದ ದಲಿತರನ್ನು ಪರಿಗಣಿಸಿ ಅವರ ಅಭಿವೃದ್ಧಿಗೆ ಅವರ ಪ್ರಗತಿಗೆ ಹೆಚ್ಚು ಹೊತ್ತು ಕೊಡಬೇಕು ಎಂದು ಒತ್ತಾಯಿಸಿದರು.

 

 

 

 

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರಾ ಟಿಸಿ ರಾಮಯ್ಯ. ಸಿದ್ದೇಶ್. ನೇಗಲಾಲ. ಯೋಗೀಶ್ ಎಂ. ಎಚ್. ರಂಗನಾಥ್ ಮದಕರಿ.ಅಮರ್. ಮಾರುತಿ, ಟೀ ಅಂಗಡಿ ರಮೇಶ. ನರಸಿಂಹಮೂರ್ತಿ. ರಾಜಣ್ಣ ಗೂಳೂರು. ರಘು. ರಾಮಮೂರ್ತಿ. ಆನಂದ್. ವಿಶ್ವ ಆದಿಜಾಂಭವ ಮಹಾಸಭಾದ ತುಮಕೂರು ಜಿಲ್ಲಾಧ್ಯಕ್ಷ ಯಳನಾಡು ದೇವರಾಜು,ಪ್ರಧಾನ ಕಾರ್ಯದರ್ಶಿ ರವಿ, ಶಂಕರ್ ಸೇರಿದಂತೆ ದಲಿತ ಆಂದೋಲನ ಸಮಿತಿ ಕಾರ್ಯಕರ್ತರು ಭಾಗವಹಿಸಿದ್ದರು.

 

 

 

 

 

 

ಕಾರ್ಯಕ್ರಮಕ್ಕೂ ಮುನ್ನ ದಲಿತ ಜನಾಂದೋಲನ ಸಮಿತಿಯ ಕಾರ್ಯಕರ್ತರು ಟೌನ್ ಹಾಲ್ ವೃತ್ತದಿಂದ ವಿವಿಧ ಕಲಾತಂಡಗಳೊಂದಿಗೆ ಎಂ ಜಿ ರಸ್ತೆಯ ಮಾರ್ಗವಾಗಿ ಗುಂಚಿ ಸರ್ಕಲ್ ವರೆಗೆ ಮೆರವಣಿಗೆಯಲ್ಲಿ ಬೆಳ್ಳಿ ರಥದಲ್ಲಿ ತಮಟೆವಾಧ್ಯಗಳೊಂದಿಗೆ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಅವರ ಭಾವಚಿತ್ರ ಹೊತ್ತು ಸಾಗಿ ಬಂದಿದ್ದು ಎಲ್ಲರ ಗಮನ ಸೆಳೆಯಿತು.

Leave a Reply

Your email address will not be published. Required fields are marked *

error: Content is protected !!