ತುಮಕೂರು: ಖಾಸಗಿ ಶಾಲಾ ಆಡಳಿತ ಮಂಡಳಿಗಳು 2023-24ನೇ ಸಾಲಿಗೆ ಹೊಸದಾಗಿ ಶಾಶ್ವತ ಅನುದಾನ ರಹಿತ ಪೂರ್ವ ಪ್ರಾಥಮಿಕ/ಪ್ರಾಥಮಿಕ/ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಆನ್‌ಲೈನ್ ಮೂಲಕ ಪ್ರಸ್ತಾವನೆ ಸಲ್ಲಿಸಿ, ಇಲಾಖಾ ನಿಯಮಾನುಸಾರ ಅಗತ್ಯ ಮಾನದಂಡಗಳನ್ನು ಪೂರೈಸಿಲ್ಲದ ಕಾರಣ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮೇ.29ರಂದು ಶಾಲೆಗಳ ಪಟ್ಟಿಯನ್ನು ಪತ್ರಿಕೆಗಳ ಮೂಲಕ ಪ್ರಕಟಿಸಿತು ಇದಕ್ಕೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕಿನ ಅಜಪ್ಪನಹಳ್ಳಿ ವ್ಯಾಪ್ತಿಯಲ್ಲಿ ಯಲ್ಲಾಪುರದಲ್ಲಿ ಕಾರ್ಯನಿರ್ವಹಿಸುತ್ತಿರುವ ವನಿತಾ ವಿದ್ಯಾಕೇಂದ್ರವು ನರ್ಸರಿ ಯಿಂದ 8ನೇ ತರಗತಿಯವರೆಗೆ ಶಿಕ್ಷಣ ಇಲಾಖೆಯ ನಿಯಮಾನುಸಾರ ಶಾಲೆ ನಡೆಯುತ್ತಿದ್ದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ನಮ್ಮ ಶಾಲೆಯು ನಮೂದು ಆಗಿದ್ದು ಪೋಷಕರು ಪತ್ರಿಕೆಗಳಲ್ಲಿ ಬಂದ ಸುದ್ದಿಗೆ ಆತಂಕ ಪಡುವ ಅಗತ್ಯವಿಲ್ಲ ಧೈರ್ಯವಾಗಿ ನಮ್ಮ ಶಾಲೆಗೆ 8ನೇ ತರಗತಿವರೆಗೂ ದಾಖಲಿಸಬಹುದಾಗಿದೆ ಎಂದು ಯಲ್ಲಾಪುರ ವನಿತಾ ವಿದ್ಯಾಕೇಂದ್ರದ ಮುಖ್ಯ ಶಿಕ್ಷಕರಾದ ಸುಜಾತ ಅವರು ಸ್ಪಷ್ಟನೆ ನೀಡಿದರು.
ಜೊತೆಗೆ ಜಿಲ್ಲಾ ಉಪನಿರ್ದೇಶಕರ ಕಚೇರಿಯಿಂದ ಆದ ಕಣ್ತಪ್ಪಿನಿಂದ ಈ ರೀತಿಯಾಗಿ ಸುದ್ದಿ ಪ್ರಕಟಗೊಂಡಿದ್ದು, ಮಾನ್ಯ ಉಪನಿರ್ದೇಶಕರಿಗೆ (ಡಿಡಿಪಿಐ) ಅವರಿಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದೇವೆ, ಅಲ್ಲದೇ ಅವರೂ ಸಹ ಈ ಕುರಿತು ನಮಗೆ ಸ್ಪಷ್ಟನೆ ನೀಡಿದ್ದು, ಅಧಿಕಾರಿಗಳ ಕಣ್ತಪ್ಪಿನಿಂದ ಆಗಿದ್ದು, ನಾನು ಪುನರ್ ಪ್ರಕಟಣೆಯನ್ನು ಈ ಕೂಡಲೇ ಹೊರಡಿಸಿ ತಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆಂದು ಈ ಮೂಲಕ ಹೇಳಿಕೆಯನ್ನು ನೀಡಿರುವುದಲ್ಲದೇ ವಾರ್ತಾ ಇಲಾಖೆಗೆ ಮರು ಪ್ರಕಟಣೆಯ ಕುರಿತಾದ ಪತ್ರವನ್ನು ಸಹ ನೀಡಿರುವುದಾಗಿ ತಿಳಿಸಿದ್ದಾರೆ.