ತುಮಕೂರಿಗೆ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಪ್ರಕೃತಿದತ್ತವಾಗಿ ಕೊಡುತ್ತಿರುವ ಊರಿನ ಹೊರಭಾಗದಲ್ಲಿರುವ ಮೈದಾಳ ಕೆರೆಯ ನೀರು ಸಾರ್ವಜನಿಕರ ಮೋಜು-ಮಸ್ತಿಗೆ ಬಲಿಯಾಗಿ ಕುಡಿಯುವ ನೀರು ಕಲ್ಮಶವಾಗುತ್ತಿರುವ ದೃಶ್ಯಗಳು ಚಿತ್ರಗಳ
ಸಾರ್ವತ್ರಿಕ ರಜಾ ದಿನಗಳಲ್ಲಿ ಹಾಗೂ ಬೇಸಿಗೆ ಮತ್ತು ದಸರಾ ರಜೆಗಳಲ್ಲಿ ಹೆಚ್ಚಿನ ಜನ ಮೋಜು ಮಸ್ತಿಗೆ ಈ ಮೈದಾಳ ಕೆರೆ ಆಗಮಿಸುತ್ತಾರೆ.
ಈ ಮೈದಾಳ ಕೆರೆಗೆ ಯಾವುದೇ ರೀತಿಯ ಪೆನ್ಸಿಂಗ್ ಆಗಲಿ ವಾಟರ್ ಮ್ಯಾನ್ ಗಳಾಗಲಿ ವಾಟರ್ ಸೂಪರ್ವೈಸರ್ಗಳಾಗಲಿ ಕವಲುಗಾರರಾಗಲಿ ಇಲ್ಲದೆ ಕೆರೆಯಲ್ಲಿ ಈಜುವುದು ಶಾಂಪೂ ಹಾಕಿ ಸ್ನಾನ ಮಾಡುವುದು ಬಟ್ಟೆ ತೊಳೆಯುವುದು ಆಟೋ ಮತ್ತು ವಾಹನಗಳನ್ನು ತೊಳೆಯುವುದು ಕುಡಿಯುವ ನೀರಿಗೆ ಶಾಂಪೂ ಪ್ಯಾಕೆಟ್ ಪ್ಲಾಸ್ಟಿಕ್ ಕವರ್ ಗಳು ಕುರುಕುಲು ತಿಂಡಿಯ ಕವರ್ ಗಳು ಇತರೆ ಅನೇಕ ರೀತಿಯ ಕಸಗಳನ್ನು ಹಾಕಿ ಕಲ್ಮಶಗೊಳಿಸುತ್ತಿದ್ದಾರೆ.
ತುಮಕೂರಿನ ಜನಕ್ಕೆ ಹಲವಾರು ದಶಕಗಳಿಂದ ಕುಡಿಯುವ ನೀರಿಗೆ ಆಧಾರವಾಗಿರುವ ಮೈದಾಳ ಕೆರೆಯ ನೀರಿನ ರಕ್ಷಣೆ ತುರ್ತಾಗಿ ನೀಡಬೇಕೆಂದು ಮಹಾನಗರ ಪಾಲಿಕೆಯ ಮಾಜಿ ಸದಸ್ಯನಾಗಿ ವಿನಂತಿಸಿಕೊಳ್ಳುತ್ತೇನೆ ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಗಮನ ಹರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ