ಡಾ ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಒತ್ತಾಯ : ಅಗಳಕೋಟೆ ನರಸಿಂಹರಾಜು

ಸುಮಾರು 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತರಾಗಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಾಗೂ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಡಾಕ್ಟರ್ ಜಿ ಪರಮೇಶ್ವರ್ ರವರಿಗೆ ಈ ಬಾರಿಯಾದರೂ ಮುಖ್ಯಮಂತ್ರಿ ಸ್ಥಾನ ನೀಡಿ ಕಾಂಗ್ರೆಸ್ ಪಕ್ಷ ದಲಿತರ ಪರವಾಗಿದೆ ಎಂದು ಖಚಿತಪಡಿಸಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಗಳಕೋಟೆ ನರಸಿಂಹರಾಜು ತಿಳಿಸಿದರು.

 

 

 

 

 

 

ಮುಂದುವರೆದಂತೆ ಡಾ. ಜಿ ಪರಮೇಶ್ವರ್ ಅವರು ಎಂಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಎರಡು ಬಾರಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರಣರಾಗಿದ್ದಾರೆ. ಹಾಗೆಯೇ ಈ ಬಾರಿಯೂ ಪ್ರಣಾಳಿಕೆ ಅಧ್ಯಕ್ಷರಾಗಿ ಗ್ಯಾರಂಟಿ ಭಾಗ್ಯಗಳನ್ನು ಹಾಗೂ ಉತ್ತಮ ಪ್ರಣಾಳಿಕೆಯನ್ನು ನೀಡಿ ಪಕ್ಷ ಅಭೂತಪೂರ್ವ ಯಶಸ್ಸನ್ನು ಕಾಣಲು ಕಾರಣಕರ್ತರಾಗಿದ್ದಾರೆ. ಹಾಗಾಗಿ ಡಾ. ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ದರೆ ಮುಂಬರುವ ಲೋಕಸಭಾ ಚುನಾವಣೆಗೆ ಅನುಕೂಲವಾಗಲಿದೆ. ಹಾಗೂ ದಲಿತರಲ್ಲರು ಯಾವಾಗಲೂ ಕೂಡ ಕಾಂಗ್ರೆಸ್ ಪಕ್ಷದ ಜೊತೆ ಇರುತ್ತಾರೆ. ಕರ್ನಾಟಕ ರಾಜ್ಯದಲ್ಲಿ ದಲಿತರ ಸಂಖ್ಯೆ ಸುಮಾರು 25 ಭಾಗದಷ್ಟು ಜನಸಂಖ್ಯೆ ಇದೆ ಸ್ವತಂತ್ರ ಬಂದು 75 ವರ್ಷಗಳು ಕಳೆದರು ಸಹ ಇನ್ನೂ ಕೂಡ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಅನ್ನುವುದು ಮರಿಚಿಕೆಯಾಗಿ ಉಳಿದಿದೆ.

 

 

 

 

 

ಈಗ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಯವರಿಗೂ ಸಹ ಮುಖ್ಯಮಂತ್ರಿ ಸ್ಥಾನ ತಪ್ಪಿಸಿ ಅವರನ್ನು ಕೇಂದ್ರಕ್ಕೆ ಕಳಿಸಲಾಯಿತು. ಈ ಬಾರಿ ಕರ್ನಾಟಕದಲ್ಲಿ ಸುಮಾರು 135ಕ್ಕೂ ಹೆಚ್ಚು ಶಾಸಕರಾಗಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಈ ಗೆಲುವಿನಲ್ಲಿ ಡಾ. ಜಿ ಪರಮೇಶ್ವರ್ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಪಾತ್ರವು ಬಹುದೊಡ್ಡದಿದೆ. ಹಾಗಾಗಿ ದಲಿತ ನಾಯಕ ಡಾಕ್ಟರ್ ಜಿ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಎಲ್ಲಾ ದಲಿತರು ಹಾಗೂ ಹಿಂದುಳಿದವರ ಕೂಗಾಗಿದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದೇ ಫಲಿತಾಂಶ ಮರುಕಳಿಸಲು ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಈ ವಿಚಾರವನ್ನು ಲಘುವಾಗಿ ಪರಿಗಣಿಸಿದರೆ ಬಾರಿ ತಲೆದಂಡ ತರಬೇಕಾಗುತ್ತದೆ ಎಂದು ಈ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

 

 

 

 

ಈ ಪ್ರತಿಭಟನೆಯಲ್ಲಿ ನರಸಿಂಹಮೂರ್ತಿ ಭೀಮಸಂದ್ರ, ರಜನಿಕಾಂತ್, ಗಿರಿ ಸ್ವಾಮಿ ,ಗೋವಿಂದರಾಜು,ರಾಜಣ್ಣ,ಜೆಬಿ ಹಾಗೂ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!