ಜಂಟಿ ಪತ್ರಿಕಾಗೋಷ್ಠಿ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಮತ್ತು ಜೆಡಿಯು ಪಕ್ಷದ ಮುಖಂಡರು ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ನಡೆಸಿದರು.
ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ ಅದರಂತೆ ಸಮಾಜದ ನವ ನಿರ್ಮಾಣಕ್ಕಾಗಿ ಸೊಗಡು ಶಿವಣ್ಣ ಹೋರಾಡುತ್ತಿದ್ದಾರೆ ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡುತಿದ್ದೇವೆ ನಮ್ಮ ಪಕ್ಷದ ವತಿಯಿಂದ ಹಲವಾರು ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ನಿಲ್ಲುಸಿದ್ದೇವೆ ನಾನು ಜೆ ಹೆಚ್ ಪಟೇಲ್ ರವರ ಮಗನಾಗಿ ತುಮಕೂರು ಜನತೆಗೆ ಮಹಿಮಾ ಪಟೇಲ್ ಮನವಿ ಮಾಡುವುದೇನೆಂದರೆ ಈ ಭಾರಿ ಅತೀ ಹೆಚ್ಚಿನ ಸಂಖ್ಯೆಯ ಅಂತರದಲ್ಲಿ ಗೆಲ್ಲಿಸುವುದರೊಂದಿಗೆ ನಾವು ಅವರಿಗೆ ಬೆಂಬಲಕ್ಕೆ ಸುಚಿಸುತ್ತಿದ್ದೇವೆ ಮತ್ತು ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ನಮ್ಮ ಬೆಂಬಲಿಗರು ಇವರಿಗೆ ಸಹಕಾರ ನೀಡುತ್ತಿದ್ದೇವೆ ಎಂದರು.
ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಜೆ ಹೆಚ್ ಪಟೇಲ್ ಮತ್ತು ರಾಮಕೃಷ್ಣ ಹೆಗ್ಗಡೆ ಅವರುಗಳು ಆಶಯದಂತೆ ಸೊಗಡು ಶಿವಣ್ಣರವರ ರಾಜಕೀಯ ಚಿಂತನೆ ನಮಗೆ ತುಂಬಾ ಇಷ್ಟವಾಗಿದೆ ಅದರ ಪ್ರಯುಕ್ತವೇ ನಾವು ಈ ಭಾರಿ ಜೆಡಿಯು ಪಕ್ಷದಿಂದ ಸಂಪೂರ್ಣ ಸಹಕಾರವನ್ನು ಸ್ವಾಭಿಮಾನಿ ಸೊಗಡು ಶಿವಣ್ಣರವರಿಗೆ ಬೆಂಬಲ ಸುಚಿಸುತ್ತಿದ್ದೇವೆ ಎಂದರು.
ಇನ್ನು ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣರವರು ಮಾತನಾಡುತ್ತಾ ನಾನು ಸ್ವಜನ ಪಕ್ಷಪಾತ ಮಾಡದೆ ನಡೆದುಕೊಂಡಿದ್ದರ ಪರಿಣಾಮವಾಗಿ ಜೆ ಹೆಚ್ ಪಟೆಲ್ ರವರ ಮಗ ಮಹಿಮಾ ಪಟೇಲ್ ಅವರು ಇಂದು ತುಮಕೂರಿಗೆ ಬಂದು ನನ್ನ ಪರವಾಗಿ ಬೆಂಬಲಕ್ಕೆ ಬಂದಿರುವುದಕ್ಕೆ ನಾನು ಎಂದೆದಿಗೂ ಋಣಿಯಗಿರುತ್ತೇನೆ ಎಂದರು ಅಲ್ಲದೆ ನಾನು ಸರಿಯಾದ ರೀತಿಯಲ್ಲಿ ರಾಜಕೀಯ ಮಾಡಿಕೊಂಡು ಬಂದಿರುವುದಕ್ಕಾಗಿಯೇ ದೂರದ ಊರಿಂದ ಬಂದು ನನಗೆ ಬೆಂಬಲ ಸೂಚಿಸಿರುತ್ತಿರುವುದಕ್ಕೆ ಸಾಕ್ಷಿ ಎಂದರು ನನಗೆ ನನ್ನ ಮತದಾರರೆ ನನಗೆ ಹೈ ಕಮಾಂಡ್ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಬರುವಂತೆ ನಡೆದುಕೊಂಡಿಲ್ಲ ಆ ರೀತಿಯಾದದ್ದು ಏನಾದರೂ ಇದ್ದಾರೆ ತೋರಿಸಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸೊಗಡು ಶಿವಣ್ಣ, ಜೆಡಿಯು ಪಕ್ಷದ ಮಹಿಮಾ ಪಟೇಲ್ ಹಾಗೂ ಇತರರು ಭಾವಹಿಸಿದ್ದರು.