ದಲಿತ ವಿರೋಧಿ ಬಿಜೆಪಿಯನ್ನು ಮನೆಗೆ ಕಳುಹಿಸಿ; ಗುರುಪ್ರಸಾದ್ ಕೆರೆಗೋಡು

ತುಮಕೂರು ನಗರದ ಪತ್ರಿಕಾ ಭವನದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ವತಿಯಿಂದ ಬಿಜೆಪಿ ಮತ್ತು ಮೋದಿ ಸರ್ಕಾರ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಮಾಡಿರುವ ಅನ್ಯಾಯದ ವಿರುದ್ಧ ಪತ್ರಿಕಾ ಗೋಷ್ಠಿ ನಡೆಸಿ ಗುರುಪ್ರಸಾದ್ ಕೆರೆಗೋಡು ಅವರು ಮಾತನಾಡುತ್ತಾ.

 

 

 

 

 


ಭಾರತದ ನೆಲ ಕಂಡಂತಹ ಅತ್ಯಂತ ಸಮರ್ಥ ಜನ ಚಳವಳಿಗಳಲ್ಲಿ ದಲಿತ ಸಂಘರ್ಷ ಸಮಿತಿಯು ವಿಶಿಷ್ಠವಾಗಿ ನಿಲ್ಲುತ್ತದೆ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ನಮ್ಮ ದಲಿತ ಸಂಘರ್ಷ ಸಮಿತಿಯ ಜೀವಾಳ ಮತ್ತು ಮನೋಸ್ಥೆರ್ಯ ಅಂಬೇಡ್ಕರ್ ಸಿದ್ಧಾಂತವೇ ನಮ್ಮ ಸಿದ್ಧಾಂತ. ‘ಎಲ್ಲಾ ಜಾತಿಯ ಬಡವರೂ ದಲಿತರು’ ಎಂಬ ಧೈಯ ವಾಕ್ಯದೊಂದಿಗೆ 1970 ರ ದಶಕದ ಮಧ್ಯ ಭಾಗದಲ್ಲಿ ಕರ್ನಾಟಕದಲ್ಲಿ ಆರಂಭವಾದ ದಲಿತ ಸಂಘರ್ಷ ಸಮಿತಿಯು ಅಸ್ಪೃಶ್ಯತೆ ಮತ್ತು ದಲಿತರ ಮೇಲಿನ ದೌರ್ಜನ್ಯಗಳನ್ನು ಸಮರ್ಥವಾಗಿ ಪ್ರಶ್ನಿಸಿತು ಹಾಗೂ ಅದರ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿತುಜೊತೆಗೆ ಹಿಂದುಳಿದ ಜಾತಿಗಳ ಮತ್ತು ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧವೂ ಬೀದಿಗಿಳಿದು ಹೋರಾಡಿತು. ಸ್ವತಃ ಹಿಂದುಳಿದ ಜಾತಿಗಳಿಗೆ ಮಂಡಲ್ ವರದಿ ಆಧಾರಿತ ಮೀಸಲಾತಿ ಜಾರಿಯ ಬಗ್ಗೆ ಸ್ಪಷ್ಟತ ಇಲ್ಲದಿದ್ದ ಆ ಕಾಲದಲ್ಲೇ ದಲಿತ ಸಂಘರ್ಷ ಸಮಿತಿಯು ಮಂಡಲ್ ವರದಿ ಜಾರಿಗಾಗಿ ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡಿತು. ಕರ್ನಾಟಕದ ಹಲವು ಸರ್ಕಾರಗಳ ವಿರುದ್ಧ ವಿರೋಧ ಪಕ್ಷದ ರೀತಿಯಲ್ಲೇ ಕೆಲಸ ಮಾಡಿಕೊಂಡು ಬಂದಿರುವುದು ದಲಿತ ಸಂಘರ್ಷ ಸಮಿತಿಯ ಇತಿಹಾಸವೆಂದು ಹೇಳಿದರು.

 

 

ಕಳೆದ 2014 ರಲ್ಲಿ ಆರ್.ಎಸ್.ಎಸ್-ಬಿಜೆಪಿ ಕೃತಕವಾಗಿ ಸೃಷ್ಟಿಸಿದ್ದ ಕೋಮುದ್ವೇಷದ ‘ಗುಜರಾತ್ ಮಾಡಲ್ ಭಾಗವಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೆಹಲಿಯ ಗದ್ದುಗೆ ಏರಿತುಅಲ್ಲಿಂದ ಸತತವಾಗಿ ಭಾರತದ ಜನಸಾಮಾನ್ಯರ ರಕ್ತ ಹೀರುತ್ತಲೆ ಬಂದಿದೆ ನೋಟು ರದ್ಧತಿ, ಜಿ.ಎಸ್.ಟಿ, ಕೋವಿಡ್ ಲಾನ್, ಶ್ರೀಮಂತರ ತೆರಿಗೆ ಕಡಿತಖಾಸಗೀಕರಣದ ಭರಾಟೆಸಾರ್ವಜನಿಕ ಉದ್ದಿಮೆಗಳ ಮಾರಾಟಬೆಲೆ ಏರಿಕೆ ಕೋಮುದಳ್ಳುರಿ ಗೋಭಯೋತ್ಪಾದನೆ ವಿಪರೀತ ಜಾತಿದೌರ್ಜನ್ಯಗಳು ಒಂದೇ ಎರಡೇ, ಕಳೆದ 9 ವರ್ಷಗಳಲ್ಲಿ ಭಾರತದ ಜನಸಾಮಾನ್ಯರು ನರಕ ನೋಡಿದ್ದಾರೆಅದರಲ್ಲಿ ದಲಿತರು ರೌರವ ನರಕ ಅನುಭವಿಸಿದ್ದಾರೆಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕುಸಿದು ಬಿದ್ದು ನೈತಿಕ ಪೊಲೀಸ್ ಗಿರಿ ರಾರಾಜಿಸುತ್ತಿದೆ ಕಾರ್ಯಾಂಗದಲ್ಲಿ ಸಂಘ ಪರಿವಾರದ ಮನಸ್ಥಿತಿಗಳು ಸ್ವಜನ ಪಕ್ಷಪಾತಿಗಳಾಗಿದ್ದಾರೆ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳೆಲ್ಲವೂ ಆಡಳಿತ ಬಿಜೆಪಿ ಸರ್ಕಾರದ ಅಣತಿಯಂತೆ ವರ್ತಿಸುತ್ತಿವೆ ನರೇಂದ್ರ ಮೋದಿ ಸರ್ಕಾರದ ಮಂತ್ರಿಗಳು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನ ಆಡುತ್ತಿದ್ದಾರೆ ಪಠ್ಯಪುಸ್ತಕಗಳಲ್ಲಿ ಪುರಾಣದ ಕತೆಗಳನ್ನೂ ಹಾಗೂ ಸಂಘ ಪರಿವಾರದ ಸುಳ್ಳುಗಳನ್ನು ಸೇರಿಸಲಾಗುತ್ತಿದೆ ಹಾಗಾಗಿ ಭಾರತ ದೇಶದಲ್ಲೀಗ ಸರ್ವಾಧಿಕಾರ ಜಾರಿಯಲ್ಲಿದೆ ಎಂದು ಹೇಳಿದರು.

 

 

 

 

ಮುಂದುವರೆದು ಮಾತನಾಡುತ್ತಾ ಈ ಸರ್ವಾಧಿಕಾರದ ಗರ್ಭದೊಳಗೆ ಕುಡಿಯೊಡೆದಿರುವ ಸರ್ಕಾರವೇ ಇಂದು ಕರ್ನಾಟಕವನ್ನು ಆಳುತ್ತಿರುವ ಬಸವರಾಜ್‌ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ‘ಅಪರೇಷನ್ ಕಮಲ’ಎಂಬ ಅನೈತಿಕ ಹಾಗೂ ಅಸಂವಿಧಾನಿಕ ದಾರಿಯಿಂದ ಸರ್ಕಾರ ರಚಿಸಿದ ಬಿಜೆಪಿಯು ತದನಂತರಲ್ಲಿ ಉತ್ತರ ಭಾರತದ ಕೋಮುದ್ವೇಷವನ್ನು ಕರ್ನಾಟಕದಲ್ಲೂ ಬಿತ್ತಲು ಆರಂಭಿಸಿತು ಕನ್ನಡದ ಮನವು ಅವರೆಗೆ ಕಂಡಿರದ ಕೋಮುದೃವೀಕರಣ ಕ್ರಿಯೆಗೆ ಒಳಗಾಗುವಂತಾಯಿತು ಧರ್ಮ-ಧರ್ಮಗಳ ನಡುವೆ ಜಾತಿ-ಜಾತಿಗಳ ನಡುವೆ ಬಿರುಕು ಮೂಡಿಸಲಾಯಿತು ಭ್ರಷ್ಟಾಚಾರವೆಂಬುದು ಬೊಮ್ಮಾಯಿ ಸರ್ಕಾರದ ಕಿರೀಟವಾಯಿತು

 

 

 

ಹಾಗಾಗಿ ಸದಾ ಕಾಲ ಸಮಾನತ-ಸಾಮರಸ್ಯವನ್ನೇ ಬಯಸುವ ದಸಂಸದೇಶ ಮತ್ತು ರಾಜ್ಯದಲ್ಲಿ ಜಾರಿಯಲ್ಲಿರುವ ಸರ್ವಾಧಿಕಾರಿ-ಜನವಿರೋಧಿ ಆಡಳಿತವನ್ನು ಕಿತ್ತೊಗೆಯಲು ನಿರ್ಧರಿಸಿತು ಈ ಹಿನ್ನೆಲೆಯಲ್ಲಿಯೇ ವಿವಿಧ ಗುಂಪುಗಳಾಗಿ ಹಂಚಿಹೋಗಿದ್ದ ಸಮಾನ ಮನಸ್ಕ ದಲಿತ ಸಂಘರ್ಷ ಸಮಿತಿಗಳ ಹತ್ತು ಬಣಗಳನ್ನ ಒಂದುಗೂಡಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವಾದ ಡಿಸೆಂಬರ್ 6, 2022 ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ‘ದಲಿತ ಸಾಂಸ್ಕೃತಿಕ ಸಮಾವೇಶ ಆಯೋಜಿಸಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಪಣತೊಡಲಾಗಿತ್ತು. ಕೋಮುವಾದಿ ಆರ್.ಎಸ್.ಎಸ್-ಬಿ.ಜೆ.ಪಿ ಆಡಳಿತಕ್ಕೆ ಕೊನೆ ಹಾಡಲು ಅಂದೇ ನಿರ್ಧರಿಸಲಾಗಿತ್ತು. ಅಂದಿನ ಸಮಾವೇಶದಲ್ಲಿ ದಲಿತ ಸಮುದಾಯದ ಜೊತೆ ಹಿಂದುಳಿದವರು, ಆದಿವಾಸಿಗಳು, ಅಲೆಮಾರಿಗಳುವಿದ್ಯಾರ್ಥಿ ಯುವಜನರೂ ಸೇರಿದಂತೆ ಲಕ್ಷಾಂತರ ಜನರು ಭಾಗವಹಿಸಿ ಇತಿಹಾಸವನ್ನೇ ನಿರ್ಮಿಸಿದ್ದರು ಇದರ ಮುಂದುವರೆದ ಭಾಗವಾಗಿ ಮೇ 102023 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಮತ್ತು ಜನ ದ್ರೋಹಿ ಆರ್.ಎಸ್.ಎಸ್-ಬಿಜೆಪಿಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ‘ಷರತ್ತುಬದ್ಧ ಬೆಂಬಲ’ನೀಡಲು ‘ಕರ್ನಾಟಕ ರಾಜ್ಯ ದ.ಸಂ.ಸ ಚಾಲನಾ ಸಮಿತಿ’ ತೀರ್ಮಾನಿಸಿದೆಮುಂದೆ ಆಯ್ಕೆಯಾಗಿ ಸರ್ಕಾರ ರಚಿಸಿದನಂತರ ಜನಪರ ಆಡಳಿತ ಐಕ್ಯ ಹೋರಾಟ ನೀಡುವುದರೊಂದಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯಬೇಕೆಂದು ಆಗ್ರಹಪಡಿಸುತ್ತದೆ. ಕಾಂಗ್ರೆಸ್ ಪಕ್ಷ, ದಲಿತ ಸಂಘರ್ಷ ಸಮಿತಿ ಆಯ್ಕೆ ಮಾಡಿಕೊಂಡ ಈ ಹೊತ್ತಿನ ಅನಿವಾರ್ಯ ಚುನಾವಣಾ ಆಯ್ಕೆಯೇ ಹೊರತುರಾಜಕೀಯ ಪರ್ಯಾಯವಲ್ಲ ಎಂಬುದನ್ನೂ ಇಲ್ಲಿ ಸ್ಪಷ್ಟಪಡಿಸಬಯಸುತ್ತದೆ.

 

 

 

ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಅಭ್ಯರ್ಥಿಗಳ ಗೆಲುವಿಗಾಗಿ ‘ಕರ್ನಾಟಕ ರಾಜ್ಯ ದ.ಸಂ.ಸ ಐಕ್ಯ ಹೋರಾಟ ಚಾಲನಾ ಸಮಿತಿಕೆಲಸ ಮಾಡಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!