ಕೊರಟಗೆರೆಯ ಕಾಂಗ್ರೆಸ್ ಸಮಾವೇಶದಲ್ಲಿ ಪರಮೇಶ್ವರ್ ಅವರು ಮಾತನಾಡುತ್ತಾ ಶೋಷಿತ ಸಮುದಾಯದವರಿಗೆ ಆಶಾ ಕಿರಣರಾದ ಸಿದ್ದರಾಮಯ್ಯರವರು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ್ದ ಕಾರ್ಯಗಳನ್ನು ನೆನೆಸಿಕೊಂಡು ತಮ್ಮ ತಾಯಿಯ ತವರು ಕೊರಟಗೆರೆಆಗಿದ್ದು ನನ್ನ ಬಾಲ್ಯದ ಸಮಯವನ್ನು ನೆನೆಸಿಕೊಂಡರು.
ಮುಂದುವರೆದು ಮಾತನಾಡುತ್ತ ಈ ಭಾರಿ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದಾರೆ ಬಿಜೆಪಿ ಕಿತ್ತು ಹಾಕಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಡಬೇಕು ಎನ್ನುವ ಜನರ ಅಭಿಲಾಷೆ ನಮಗೆ ಕಾಣಿತ್ತಿದೆ ಎಂದರು. ಅಲ್ಲದೆ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಅಗ್ತಾ ಇದೆ ಯಾಕೆ ಅಂದರೆ ಅದಕ್ಕೆ ಕಾರಣವಾಗಿದ್ದು ಬಿಜೆಪಿ ಪಕ್ಷ ಜೊತೆಗೆ 40% ಕಮಿಷನ್ ಪಡೆದು ಸರ್ಕಾರ ನಡೆಸುತ್ತಿರುವ ಕುಖ್ಯಾತಿ ಇಂದಿನ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರೆ ತಪ್ಪಾಲಗಾರದು ಎಂದರು.
ನಮ್ಮ ರಾಜ್ಯಕ್ಕೆ ಅನ್ನ ಭಾಗ್ಯ ನೀಡಿ ಬಡವರ ಹೊಟ್ಟೆ ಹಸಿವನ್ನು ನೀಗಿಸಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಆದರೆ ಇಂದಿನ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು ಅವರಿಗೆ ಹಸಿವಿನ ಚಿಂತೆಯೇ ಇಲ್ಲ ಅಂತಹವಾರನ್ನು ದೂರವಿಡುವ ಸಂದರ್ಭ ಬಂದಿದೆ ಅದುವೇ ಬಿಜೆಪಿ ಸರ್ಕಾರ ದೂರವಿಟ್ಟು ಕಾಂಗ್ರೆಸ್ ಸರ್ಕಾರ ಬರುವಂತೆ ಜನರು ಮಾಡಬೇಕಿದೆ ಎಂದರು.
ಎತ್ತಿನಂಹೊಳೆ ಯೋಜನೆಗೆ ಬೊಮ್ಮಾಯಿ ಸರ್ಕಾರ ಅನುದಾನ ನೀಡಿಲ್ಲ ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಅದನ್ನು ಈಡೇರಿಸಿ ಕೊರಟಗೆರೆಯಲ್ಲಿರುವ 119 ಕೆರೆಗೆಗಳಿಗೆ ನೀರು ತರುವ ಕಾರ್ಯ ನಮ್ಮ ಕಾಂಗ್ರೆಸ್ ಸರ್ಕಾರ ಬಂದ ನಂತರ ಮಾಡಲಿದ್ದೇವೆ ಎಂದರು.
ನಾನು ಈ ಕ್ಷೇತ್ರಕ್ಕೆ ಕಳೆದ ಐದು ವರ್ಷಗಳಲ್ಲಿ 2500 ಕೋಟಿ ಅನುದಾನ ತಂದಿದ್ದೇನೆ ಹಲವಾರು ಶಾಲೆಗಳನ್ನು ನಾನು ಉನ್ನತ ದರ್ಜೆಗೆ ಏರಿಸಲು ಶ್ರಮಿಸಿದ್ದೇನೆ ಎಂದರು ಇಲ್ಲಿನ ವಿದ್ಯಾರ್ಥಿಗಳು ನೀರವಾಗಿ ಐ ಐ ಟಿ ಗೆ ಸೆಲೆಕ್ಟ್ ಆಗಿದ್ದಾರೆ ಅಂದರೆ ಕೊರಟಗೆರೆಯ ಕೀರ್ತಿ ಎಂತಹದು ಎಂದು ಬಿಜೆಪಿ ಸರ್ಕಾರ ತಿಳಿದುಕೊಳ್ಳಬೇಕು ಎಂದರು.
ಕೆ ಎನ್ ರಾಜಣ್ಣ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಸಿದ್ದರಾಮಯ್ಯನವರು ಬಡವರು ಖಂಡಾಂತಹ ಧೀಮಂತ ನಾಯಕ ಎಂದಾರಲ್ಲದೆ ಅವರು ಬಡವರ ಪರವಾಗಿ ನಿಂತ ಏಕೈಕ ವ್ಯಕ್ತಿ ಎಂದರು. ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಜೆಡಿಎಸ್ ಪಕ್ಷ ಎಂದಾರಲ್ಲದೆ ಬಿಜೆಪಿ ಭ್ರಷ್ಟರ ಪಕ್ಷ ಇನ್ನು ಜೆಡಿಎಸ್ ಜಾತಿ ಅತೀತರ ಪಕ್ಷ ಎಂದು ವ್ಯಂಗ್ಯವಾಗಿ ಹೇಳಿದರು ಅಲ್ಲದೆ ತುಮಕೂರು ಜಿಲ್ಲೆಗೆ ಪರಮೇಶ್ವರ್ ಕೊಡುಗೆ ಅಪಾರ ಅದನ್ನು ಬಣ್ಣಿಸಲು ನಾಲ್ಕು ಸಾಲು ಸಾಲದು ಅವರ ಬಗ್ಗೆ ಚರಿತ್ರೆಯೇ ಬರೀಬೇಕು ಅಷ್ಟು ಇದೆ ಎಂದರು.
ಪರಮೇಶ್ವರ್ ಅವರಿಗೆ ತಲೆಗೆ ಪೆಟ್ಟು ಬಿದ್ದಾಗ ಜೆಡಿಎಸ್ ಪಕ್ಷದ ವರಿಷ್ಟರು ಆ ಕುರಿತು ಸಣ್ಣತನದಿಂದ ಮಾತನಾಡಿರುವುದು ಎಷ್ಟು ಸಮಂಜಸ ಅಲ್ಲವೇ. ನಾನು ದೇವೇಗೌಡ್ರು ಅವರರನ್ನು ಸೋಲಿಸಿದ್ದಕೆ ನಮ್ಮ ಕಾಂಗ್ರೆಸ್ ಪಕ್ಷ ಇಂದಿಗೂ ಜಿಲ್ಲೆಯಲ್ಲಿ ಅಸ್ತಿತ್ವ ಉಳಿದಿರುವುದು ಎಂದರು ಅಲ್ಲದೆ ಅವರು ಈ ಜಿಲ್ಲೆಯಲ್ಲಿ ಅವರು ಬಂದು ಮೊಸಳೆ ಕಣ್ಣೀರು ಹಾಕುವುದರಿಂದ ಏನು ಪ್ರಯೋಜನವೊ ಗೊತ್ತಿಲ್ಲ ಎಂದರು.
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು ಮಾತನಾಡುತ್ತಾ ಕಾರ್ಮಿಕರ ದಿನಾಚರಣೆಯ ಶುಭಾಶಯಗಳನ್ನು ರಾಜ್ಯದ ಎಲ್ಲಾ ಕಾರ್ಮಿಕ ಸಹೋದರರಿಗೆ ತಿಳಿಸಿದರು, ಕಾರ್ಮಿಕರ ಕಾರ್ಯಗಳನ್ನು ಸ್ಮರಿಸುತ್ತಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಾನು ಪರಮೇಶ್ವರ್ ಪಕ್ಷದಲ್ಲಿ ಬಹಳಷ್ಟು ಕೆಲಸ ಮಾಡಿದ್ದೇವೆ ನಮ್ಮ ಇಬ್ಬರಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲಾ ಅದೆಲ್ಲ ವಿರೋಧ ಪಕ್ಷದವರು ಮಾಡಿದ ಅಪಪ್ರಚಾರ ಎಂದರು.
ಇನ್ನು ತಾವು ಮುಖ್ಯಮಂತ್ರಿ ಆಗಿದ್ದಾಗ ಪರಮೇಶ್ವರ್ ಎಂ ಎಲ್ ಸಿ ಆಗಿ ಆಯ್ಕೆ ಆಗಿ ಪ್ರಾಮಾಣಿಕ ಕೆಲಸ ಮಾಡಿರುವ ಬುದ್ದಿವಂತ ನಾಯಕ ಎಂದರೆ ಪರಮೇಶ್ವರ್ ಅಲ್ಲದೆ ಈ ಭಾರಿಯ ಕಾಂಗ್ರೆಸ್ ಪ್ರಣಾಳಿಕೆ ಅಧ್ಯಕ್ಷರು ಆಗಿರುವ ಪರಮೇಶ್ವರ್ ನಾಳೆ ಬಿಡುಗಡೆ ಮಾಡಲಿದ್ದು ನಾನು ಸೇರಿದಂತೆ ಶಿವಕುಮಾರ್ ಹಾಗೂ ಪರಮೇಶ್ವರ್ ಬಿಡುಗಡೆ ಗೊಳಿಸುತ್ತೇವೆ ಎಂದರು.
ಪರಮೇಶ್ವರ್ ಗೆಲುವು ರಾಜ್ಯದ ಎಲ್ಲಾ ಶೋಷಿತ ವರ್ಗದವರ ಗೆಲುವಾಗಿರುತ್ತದೆ ಎಂದರು ಅವರು ಉಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ದಕ್ಷತೆ ಇಂದ ಕೆಲಸ ಮಾಡಿದ್ದಾರೆ ಅವರು ಈ ಕ್ಷೇತ್ರದಲ್ಲಿ ಸೂರ್ಯ ಚಂದ್ರರು ಎಷ್ಟು ಸತ್ಯವೋ ಪರಮೇಶ್ವರ್ ಗೆಲವು ಅಷ್ಟೇ ಸತ್ಯ ಎಂದು ಹೇಳಿದರು.
ಪ್ರಸ್ತುತವಿರುವ ಬಿಜಿಪಿಯಲ್ಲಿರುವ ಭ್ರಷ್ಟಾಚಾರ ಯಾವ ಸಮಯದಲ್ಲೂ ಯಾವಾ ಸರ್ಕಾರವಿದ್ದಾಗಲೂ ಇರಲಿಲ್ಲ ನಾನು ಕಂಡಂತಹ ಅತೀ ಭ್ರಷ್ಟ ಸರ್ಕಾರ ಎಂದರೆ ಬಿಜೆಪಿ ಸರ್ಕಾರ ವಿಧಾನಸೌಧದಲ್ಲಿರುವ ಪ್ರತಿಯೊಂದು ಕಂಬವು ಇವರ ಭ್ರಷ್ಟಾತನ ಸಾರಿ ಹೇಳುತ್ತಿದೆ ನಮ್ಮ ಕೆಂಗಲ್ ಹನುಮಂತಯ್ಯ ಕಟ್ಟೋಸಿರುವ ಭವ್ಯ ಭಾವನಕ್ಕೆ ಅವಮಾನ ಮಾಡಿದ್ದಾರೆ ಎಂದರು. ಪ್ರಜಾಪ್ರಭುತ್ವ ಉಳಿಬೇಕು ಎಂದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದಳಿದರು.
ವೇದಿಕೆಯಲ್ಲಿ ಸಿದ್ದರಾಮಯ್ಯ, ಪರಮೇಶ್ವರ್, ಕೆ ಎನ್ ರಾಜಣ್ಣ, ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ, ರಾಯಸಂದ್ರ ರವಿ, ಆಂಧ್ರಪ್ರದೇಶ ಕಾಂಗ್ರೆಸ್ ಮುಖಂಡರು ರಘುವೀರ ರೆಡ್ಡಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಭಾಗವಹಿಸಿದ್ದರು.