ಯಾರಿಗೆ ಒಲಿಯಲಿದೆ ತುಮಕೂರು ನಗರದ ರಾಜಯೋಗ : ತುಮಕೂರು ಚುನಾವಣಾ ವಿಶ್ಲೇಷಣೆ

ತುಮಕೂರು : ನಗರ ಕ್ಷೇತ್ರದಲ್ಲಿ ಚುನಾವಣಾ ರಣ ಕಣ ರಂಗೇರುತ್ತಿದೆ. ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ತಮ್ಮ ಗೆಲುವಿಗಾಗಿ ಶ್ರಮಿಸಬೇಕಾದ ಅಭ್ಯರ್ಥಿ ಮತ್ತು ಕಾರ್ಯಕರ್ತರುಗಳು ಎದುರಳಿಗಳೊಂದಿಗೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿರುವುದು ಹುಬ್ಬೇರುವಂತೆ ಮಾಡಿದೆ.

 

 

 

 

 

 

 

ಕ್ಷೇತ್ರದ ಚಿತ್ರಣ ವಾರದಿಂದ ವಾರಕ್ಕೆ ಬದಲಾಗುತ್ತಿದೆ. ಹೊಸ ಬೆಳವಣಿಗೆಗಳು ನಡೆಯುತ್ತಿವೆ. ಎಲ್ಲ ಪಕ್ಷಗಳು ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮೇಲಿಂದ ಮೇಲೆ ರ್ಯಾಲಿಗಳನ್ನು ಮಾಡುತ್ತಿವೆ. ಕರ್ನಾಟಕ ರಾಷ್ಟ್ರ ಸಮಿತಿ, ಎಎಪಿ, ಸೋಶಿಯಲಿಸ್ಟ್, ಪ್ರಜಾಕೀಯದಂತಹ ಪಕ್ಷಗಳು ತಕ್ಕಷ್ಟು ಪ್ರಬಲ ಛಾಪನ್ನು ಮೂಡಿಸದೇ ಇರುವ ಕಾರಣ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಡುವೆಯೇ ಸ್ಪರ್ಧೆ ಏರ್ಪಡಲಿದೆ.

 

 

 

 

 

 

 

ಆಕಾಂಕ್ಷಿಗಳಲ್ಲಿ ಟಿಕೇಟ್ ಘೋಷಣೆಯಾಗುವ ಮೊದಲು ಉತ್ಸಾಹ ಘೋಷಣೆಯಾದ ನಂತರ ಕಡಿಮೆಯಾಗಿದೆ. ಟಿಕೇಟ್ ವಂಚಿತ ಅಭ್ಯರ್ಥಿಗಳು ಬಂಡಾಯವೆದ್ದು ಪಕ್ಷಾಂತರವಾಗುತ್ತಿದ್ದಾರೆ. ಈ ಪರಿಸ್ಥಿತಿ ಎಲ್ಲಾ ಪಕ್ಷ ಗಳಲ್ಲೂ ಇದೆ. ಈ ಬೆಳವಣಿಗೆಗಳು ಬದಲಾವಣೆಗೆ ಕಾರಣವಾಗಿದ್ದು, ನಿರೀಕ್ಷಿತ ಅಭ್ಯರ್ಥಿಗಳ ಗೆಲುವನ್ನು ಊಹಿಸುವುದು ಕಷ್ಟ.

 

 

 

 

 

 

ನಗರದಲ್ಲಿ ಪ್ರಬಲ ಅಭ್ಯರ್ಥಿಗಳು ಎಂದು ಗುರುತಿಸಬಹುದಾದವರು ಜೆಡಿಎಸ್ ನಿಂದ ಎನ್.ಗೋವಿಂದರಾಜು, ಕಾಂಗ್ರೆಸ್ ನಿಂದ ಇಕ್ಬಾಲ್ ಅಹ್ಮದ್, ಬಿಜೆಪಿಯಿಂದ ಜಿ.ಬಿ.ಜ್ಯೋತಿಗಣೇಶ್ ಇದ್ದಾರೆ. ಬಿಜೆಪಿಯಿಂದ ಬಂಡೆದ್ದ ಮಾಜಿ ಸಚಿವ ಸೊಗಡು ಶಿವಣ್ಣ ‘ರೋಡ್ ರೋಲರ್’ ಗುರುತಿನಿಂದ ಕಣಕ್ಕೆ ಧುಮುಕಿದ್ದು, ತಾನೊಬ್ಬ ‘ಗುಡ್ ರೂಲರ್’ ಎಂದು ಬಿಂಬಿಸಿಕೊಳ್ಳತೊಡಗಿದ್ದಾರೆ. ಕಾಂಗ್ರೆಸ್ ನ ಹಿರಿಯನಾಯಕ ಹಾಗೂ ಮಾಜಿ ಶಾಸಕ ಷಫಿ ಅಹ್ಮದ್ ತನ್ನ ಅಳಿಯ ರಫೀಕ್ ಅಹಮದ್ ಗೆ ಟಿಕೇಟ್ ದೊರೆಯದ ಕಾರಣ ಜೆಡಿಎಸ್ ಗೆ ಹೋಗುವುದಾಗಿ ತಿಳಿಸಿದ್ದಾರೆ ಮತ್ತು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹ್ಮದ್ ಕೂಡ ಟಿಕೇಟ್ ಲಾಭಿಯಲ್ಲಿ ತೊಡಗಿದ್ದರು. ಈಗ ಅವರೂ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

 

 

 

 

 

 

 

ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಮುಖನೋಡಿ ಓಟ್ ಮಾಡುವವರಿಗಿಂತ ಜೆಡಿಎಸ್ ಗೆ ಓಟ್ ಮಾಡುವವರ ಸಂಖ್ಯೆ ಹೆಚ್ಚಿದೆ. 2018ರಲ್ಲಿ ಗೋವಿಂದರಾಜು 55128 ಮತಗಳನ್ನು ಪಡೆದುಕೊಂಡು ಎರಡನೇ ಸ್ಥಾನಕ್ಕೆ ಬಂದಿದ್ದರೆ, 60421 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಮೊದಲ ಸ್ಥಾನ ಪಡೆಯುವ ಮೂಲಕ ವಿಜಯ ಸಾಧಿಸಿದ್ದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಡಾ.ರಫೀಕ್ ಅಹಮದ್ 51219 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ಬಂದಿದ್ದರು.

 

 

 

 

 

ಪ್ರಸ್ತುತ ರಫೀಕ್ ಅವರ ಮಾವ ಷಫಿ ಜೆಡಿಎಸ್ ಸೇರ್ಪಡೆಯಾಗುವುದರಿಂದ ತಮ್ಮ‌ ವರ್ಚಸ್ಸಿನಿಂದ ಗಳಿಕೆಯಾದ ಮತಗಳು ಸೇರಿದಂತೆ ಕಾಂಗ್ರೆಸ್ ಮತಗಳೂ ಕೂಡ ಶಿಫ್ಟ್ ಆಗಲಿವೆ.‌ ಇದಕ್ಕೆ ರಫೀಕ್ ಅವರ ಪರೋಕ್ಷ ಬೆಂಬಲವೂ ಇದೆ.

 

 

 

 

 

ಸೊಗಡು ಶಿವಣ್ಣ ಪಕ್ಷೇತರವಾಗಿ ಕಣಕ್ಕಿಳಿದಿರುವುದರಿಂದ ಜ್ಯೋತಿಗಣೇಶ್ ಗೆ ಭೀತಿ ಶುರುವಾಹಿದ್ದು, ಶಿವಣ್ಣರನ್ನು ನಿಭಾಯಿಸಲು ವರಿಷ್ಠರಿಗೆ ಬಿಟ್ಟಿದ್ದೇವೆ ಎನ್ನುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡಿದ್ದಾರೆ. ನಗರದಲ್ಲಿ ಸೊಗಡು ಜೋಳಿಗೆಯಲ್ಲಿ ಅಂದಾಜು 10-15 ಸಾವಿರ ಮತಗಳಿವೆ. ಇವರಿಂದ ಬಿಜೆಪಿ ಮತಗಳು ಕಿತ್ತು ಬಂದು, ಕಾಂಗ್ರೆಸ್ ನಿಂದ ಬಂದ ಮುಖಂಡರ ಮತಗಳು ಜೆಡಿಎಸ್ ಬುಟ್ಟಿಗೆ ಬಿದ್ದರೆ ಗೋವಿಂದರಾಜು ಗೆಲ್ಲುವ ಸಾಧ್ಯತೆಯಿದೆ.

 

 

 

 

 

 

 

ಜೆಡಿಎಸ್ ನಿಂದ ಬಂಡಾಯವೆದ್ದಿರುವ ಮುಖಂಡ ನರಸೇಗೌಡರ ಸ್ಪರ್ಧೆ ಪರಿಣಾಮವೇನೂ ಬೀರದು ಎನ್ನುವಂತಿದೆ.
ಕಾಂಗ್ರೆಸ್ ಒಳ ಬೇಗುದಿ ಮತ್ತು ಮ್ಯಾಚ್ ಫಿಕ್ಸಿಂಗ್ : ಡಾ.ರಫೀಕ್ ಅಹಮದ್ ಸಿದ್ದರಾಮಯ್ಯರ ಫಾಲೋವರ್ ಆದ್ದರಿಂದ ಅವರಿಗೆ ಟಿಕೇಟ್ ತಪ್ಪಿಸಿ ಡಾ.ಜಿ.ಪರಮೇಶ್ವರ್ ಅವರ ಶಿಷ್ಯ ಇಕ್ಬಾಲ್ ಅಹಮದ್ ಅವರಿಗೆ ಟಿಕೇಟ್ ನೀಡಲಾಗಿದೆ. ಇದರಿಂದ ಸಿದ್ದರಾಮಯ್ಯ ಫಾಲೋವರ್ಸ್ ಸಪೋರ್ಟ್ ಇಕ್ಬಾಲ್ ಅವರಿಗೆ ಸಿಗದಿರುವ ಚಾನ್ಸ್ ಇದೆ. ನಗರದಲ್ಲಿ ಮುಸ್ಲಿಂ ಮತಗಳು 60 ಸಾವಿದಷ್ಟಿದ್ದು, ಈ ಮತಗಳನ್ನು ಸಾಂಪ್ರದಾಯಕವಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಹಂಚಿಕೊಂಡು ಬರುತ್ತಿವೆ. ಈ ನಡುವೆ ಕಾಂಗ್ರೆಸ್ ನ ಒಳ ಬೇಗುದಿಯ ಕಿತ್ತಾಟಗಳು ಜೆಡಿಎಸ್ ಗೆ ವರವಾಗಲಿದೆ ಎನ್ನುವ ಚರ್ಚೆ ನಡೆಯುತ್ತಿದೆ.

 

 

 

 

 

 

 

ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಇರುವ ಅವಕಾಶಗಳೇನು?
ಟಿಕೇಟ್ ಸಿಗದೆ ಬೇಸರಗೊಂಡಿದ್ದ ಅತೀಕ್ ಅಹಮದ್ ನಂತವರ ಮನೆಗೆ ಕಾಂಗ್ರೆಸ್ ನಾಯಕರು ಸೌಜನ್ಯಕ್ಕಾದರೂ ಭೇಟಿ ನೀಡಿ ಸಮಾಧಾನಪಡಿಸಬಹುದಿತ್ತು. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರನ್ನು ಕ್ಷೇತ್ರಕ್ಕೆ ಕರೆತರುವ ಮೂಲಕ ಮುಸ್ಲಿಂ ಮತಗಳನ್ನು ಛಿದ್ರಗೊಳಿಸುವ ಗೊಳಿಸುವ ಕೆಲಸ ಮಾಡಲಾಗಿದೆ. ಅದನ್ನು ಬ್ರೇಕ್ ಮಾಡಲು ಕಾಂಗ್ರೆಸ್ ನಲ್ಲಿರುವ ಮುಸ್ಲಿಂ ನಾಯಕರ ಕ್ಷೇತ್ರ ಭೇಟಿ ಮತ್ತು ಅವರ ಮಧ್ಯಸ್ಥಿಕೆಯಲ್ಲಿ ಅಸಮಾಧಾನಿತರ ನಡುವೆ ಸಮನ್ವಯ ಸಾಧಿಸಿ ಮನವೊಲಿಸಿ ಪಕ್ಷಕ್ಕೆ ನಿಷ್ಠರಾಗಿರುವಂತೆ ನೋಡಿಕೊಳ್ಳಬಹುದು. ಗೋವಿಂದರಾಜು ಅವರಿಗೆಟಿಕೇಟ್ ತಪ್ಪಿಸಲೆಂದೇ ಗ್ರಾಮಾಂತರ ಜೆಡಿಎಸ್ ಶಾಸಕ ಅಟ್ಟಿಕಾ ಬಾಬು ಅವರನ್ನು ಕರೆತಂದಾಗ ಅದನ್ನೇ ದಾಳವಾಗಿ ಪರಿವರ್ತಿಸಿಕೊಂಡು ಓಟ್ ಬ್ಯಾಂಕ್ ಮಾಡುವ ಅವಕಾಶ ಕಾಂಗ್ರೆಸ್ ಗೆ ಇತ್ತು. ಆದರೆ ಈಗಲೂ ಕಾಲ ಮಿಂಚಿಲ್ಲ.

Leave a Reply

Your email address will not be published. Required fields are marked *

error: Content is protected !!