ತುಮಕೂರು ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ತೆಲಂಗಾಣದಿಂದ ಆಗಮಿಸಿದ ತುಳ ವೀರೇಂದ್ರ ಗೌಡ ಮಾತನಾಡುತ್ತಾ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಅದರ ಪ್ರಯುಕ್ತ ನಮ್ಮ ಬಿಜೆಪಿ ಪಕ್ಷವು ರಾಜ್ಯದಲ್ಲಿ ಅತ್ಯಧಿಕಾ ಬಹುಮತದಿಂದ ಬರಲು ಶ್ರಮಿಸುತ್ತಿದ್ದೇವೆ ಅಂತಹದ್ರಲ್ಲಿ ಕಾಂಗ್ರೆಸ್ ರಾಷ್ಟ್ರಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಮತ್ತು ನಮ್ಮ ಪಕ್ಷದ ಕುರಿತು ತುಂಬಾ ಹಗುರವಾಗಿ ಮಾತನಾಡುತ್ತಿರುವುದು ತುಂಬಾ ಶೋಚನಿಯ ಸಂಗತಿ.
ಒಬ್ಬ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಈ ರೀತಿಯಾಗಿ ಮಾತನಾಡುವುದು ತರವಲ್ಲ ಎಂದು ಹೇಳಿದರು.
ಮತ್ತೊಬ್ಬ ತೆಲಂಗಾಣ ಮುಖಂಡರು ಮಾತನಾಡುತ್ತ ನಮ್ಮ ಪಕ್ಷಕ್ಕೆ ಬಹುಮತ ಬರುವುದನ್ನು ಸಹಿಸದೆ ಈ ರೀತಿಯಾದ ಅವಹೇಳನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ ಎಂದರು ಅಲ್ಲದೆ ಜನರು ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ನಮ್ಮ ಪಕ್ಷಕ್ಕೆ ಸಂಪೂರ್ಣ ಸಹಕಾರ ಅತ್ಯಧಿಕಾ ಮತಗಳನ್ನ ನೀಡಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡ ಬೇಕೆಂದು ಕೋರಿದರು.
ಇನ್ನು ಮೋದಿ ಅವರ ರಾಜ್ಯ ಪ್ರವಾಸ ಕುರಿತು ಮಾತನಾಡುತ್ತ ಅವರ ಪ್ರವಾಸದ ವಿವರಗಳನ್ನು ಅತೀ ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಮತ್ತೊಬ್ಬ ತೆಲಂಗಾಣ ಮುಖಂಡರಾದ ವೀರೇಂದ್ರ ಅವರು ಹೇಳಿದರು ಅಲ್ಲದೆ ಕರ್ನಾಟಕದಲ್ಲಿ ಮತ್ತೆ ಡಬಲ್ ಇಂಜಿನ್ ಸರ್ಕಾರ ಬರುವುದರಲ್ಲಿ ಯಾವುದೇ ಸಂಶಯವಿಲ್ಲಾ ನಾವು ನೀಡಿರುವ ಜಾತಿವಾರು ಮೀಸಲಾತಿ ಮತ್ತು ಅಭಿವೃದ್ಧಿಪರ ಮಾಡಿರುವ ಕೆಲಸಗಳು ಜನತೆಗೆ ಗೊತ್ತಿದೆ ಅದನ್ನು ಮನವರಿಕೆ ಮಾಡುವ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮನೋಹರ್ ರೆಡ್ಡಿ, ವೀರೇಂದ್ರ ಗೌಡ, ಹೆಬ್ಬಾಕ ರವಿಶಂಕರ್, ಸದಾಶಿವಯ್ಯ, ಹಾಗೂ ಇತರರು ಉಪಸ್ಥಿತರಿದ್ದರು.