ತುಮಕೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಿ.ಹೆಚ್.ಷಣ್ಮುಖಪ್ಪರವರು ಕೆಲವು ಪತ್ರಕರ್ತರೊಂದಿಗೆ ಮಾತನಾಡುತ್ತಾ ನಾನು ಈಗಾಗಲೇ ಗೆದಿದ್ದೇನೆ ಚುನಾವಣೆಯ ಜನಾದೇಶವೊಂದೇ ಬಾಕಿ, ನನಗೆ ಯಾವುದೇ ರೀತಿಯಾದ ಅಬ್ಬರದ ಪ್ರಚಾರ, ಅಪಾರ ಕಾರ್ಯಕರ್ತರ ಸಮಾವೇಶವೇನೂ ಬೇಕಿಲ್ಲ, ನಾನು ಮನೆಯಲ್ಲಿಯೇ ಇದ್ದು ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇನೆಂದರು.
ಇತ್ತೀಚೆಗೆ ಷಣ್ಮುಖಪ್ಪರವರು ರಂಜಾನ್ ಪ್ರಯುಕ್ತ ಹಲವಾರು ಮಸೀದಿಗಳಿಗೆ ತೆರಳಿ ಮುಸ್ಲಿಂ ಬಾಂಧವರ ಮತ ವಿಶ್ವಾಸವನ್ನು ಕೋರಿದ್ದರು, ಕೆಲವು ಅಹಿಂದ ಮತಗಳನ್ನು ಸೆಳೆಯುವ ಸಾಧ್ಯತೆಗಳು ನನ್ನಲ್ಲಿವೆ ಎಂದು ಸಹ ಹೇಳಿಕೊಂಡಿದ್ದರು, ಅದರ ಬೆನ್ನಲ್ಲೇ ಅವರು ಇತ್ತೀಚೆಗೆ ಯಾವುದೇ ರೀತಿಯಾದ ಪ್ರಚಾರ ಕಾರ್ಯಗಳಿಗೆ ತೊಡಗದೇ ತಮ್ಮ ಕುವೆಂಪು ನಗರದ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವುದನ್ನು ಗಮನಿಸಿ ಅವರನ್ನು ವಿಚಾರಿಸಿದ ಕೆಲ ಪತ್ರಕರ್ತರು ಈ ರೀತಿಯಾಗಿ ಹೇಳಿದರು.
ನೋಡಿ, ಎಲ್ಲರೂ ಚುನಾವಣೆಯನ್ನು ನಡೆಸಿ ವಿಶ್ರಾಂತಿ ಪಡೆಯುತ್ತಾರೆ, ನಾನು ಇದೀಗ ವಿಶ್ರಾಂತಿ ಪಡೆಯುತ್ತಿದ್ದೇನೆ ಏಕೆಂದರೆ ನಾನು ಈಗಾಗಲೇ ಜನಾಶೀರ್ವಾದ ಪಡೆದಿದ್ದೇನೆ, ನನಗೆ ನನ್ನದೇ ಆದ ಕಾಂಗ್ರೆಸ್ ಮತಗಳು ಲಭಿಸುತ್ತವೆ, ಅಲ್ಲದೇ ನನಗೆ ಕಾಂಗ್ರೆಸ್‌ನ ಕೆಲ ಗ್ರಾಮಾಂತರ ಮುಖಂಡರ ನಿಕಟ ಸಂಪರ್ಕವಿದೆ, ಜೊತೆಗೆ ನಾನು ಇಲ್ಲಿ ಹರಸಾಹಸ ಪಟ್ಟು ಚುನಾವಣೆಯನ್ನು ಎದುರಿಸುವ ಪ್ರಮೇಯವೇ ಇಲ್ಲ, ಯಾಕೆ ಚಿಂತಿಸಬೇಕು, ಅಲ್ಲವೇ ಚಿಂತಿಯಿಂದ ನಾನಾ ರೋಗಗಳು ಬರುತ್ತವೆ, ಹಾಗಾಗಿ ನಾನು ನಿಶ್ಚಂತೆಯಿಂದ ಇದ್ದೇನೆ, ನಾನು ನನ್ನದೇ ಆದ ತಂತ್ರಗಾರಿಕೆಯನ್ನು ರೂಪಿಸಿದ್ದೇನೆ, ಅದರ ಪರಿಣಾಮವಾಗಿ ನಾನು ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲುವುದನ್ನು ನೀವುಗಳು ನೋಡಲಿದ್ದೀರಿ ಮೇ 13ರಂದು ನಾನು ಇಂದು ಹೇಳಿರುವುದು ನೆನಪಾಗುತ್ತದೆ ಅಲ್ಲಿಯವರೆಗೂ ಕಾದು ನೋಡಿ ಎಂದೇಳಿದರು.
ಇನ್ನು ನನ್ನ ಪರವಾಗಿ ಚುನಾವಣಾ ಪ್ರಚಾರಕ್ಕೆ ಮಾನ್ಯ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ನಾಯಕರ ಆಗಮನದ ನಿರೀಕ್ಷೆಯಲ್ಲಿದ್ದೇನೆ ನಾನೊಬ್ಬ ನಿವೃತ್ತ ಅಧಿಕಾರಿ ಒಬ್ಬ ಇಂಜಿನಿಯರ್ ಪದವೀಧರನಾಗಿದ್ದು ನಾನು ಚುನಾವಣೆಯನ್ನು ನಿರಾಯಾಸಮಾನವಾಗಿ ಹಾಗೂ ಸಮರ್ಥವಾಗಿ ನಿಭಾಯಿಸುತ್ತೇನೆಂದು ತಿಳಿಸಿದರು.