ಹೊರೆ ಇಳಿಸಿ ಕಮಲ ಹಿಡಿದ ಬೆಳ್ಳಿ ಲೋಕೇಶ್

ಸುದೀರ್ಘ ವರ್ಷಗಳ ನಂತರ ತಮ್ಮ ಮಾತೃಪಕ್ಷಕ್ಕೆ ಮರಳಿದ ಬೆಳ್ಳಿಲೋಕೇಶ್

 

 

ತುಮಕೂರು – ಇತ್ತೀಚೆಗೆ ಜೆಡಿಎಸ್ ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಬೇಸರ ವ್ಯಕ್ತಪಡಿಸಿ ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದ ತುಮಕೂರಿನ ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್ ರವರು ಇಂದು ಅಧಿಕೃತವಾಗಿ ತುಮಕೂರಿನಲ್ಲಿ ಬಿಜೆಪಿ ಪಕ್ಷವನ್ನ ಸೇರಿದ್ದಾರೆ.

 

 

 

 

 

 

 

 

 

ತುಮಕೂರಿನ ಬಿಜೆಪಿ ಕಚೇರಿಯಲ್ಲಿ ತುಮಕೂರು ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್, ತುಮಕೂರು ಸಂಸದ ಜಿಎಸ್ ಬಸವರಾಜು ಹಾಗೂ ತುಮಕೂರು ಶಾಸಕ ಜಿ.ಬಿ ಜ್ಯೋತಿ ಗಣೇಶ್ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಬಾವುಟವನ್ನು ಹಿಡಿಯುವ ಮೂಲಕ ಕಮಲ ಪಕ್ಷಕ್ಕೆ ಸೇರ್ಪಡೆಯಾದರು.

 

 

 

 

 

ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೆಳ್ಳಿ ಲೋಕೇಶ್ ಸೇರಿದಂತೆ ಕೆಲವು ಸ್ಥಳೀಯ ಮುಖಂಡರು ಬೆಳ್ಳಿ ಲೋಕೇಶ್ ರವರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.‌ ನಂತರ ಮಾತನಾಡಿದ ಬೆಳ್ಳಿಲೋಕೇಶ್‌ ತಾವು ಈ ಹಿಂದೆ ವಿದ್ಯಾರ್ಥಿ ದೆಸೆ (ಕಾಲೇಜು) ದಿನಗಳಲ್ಲಿ ನಂತರ ವ್ಯಾಸಂಗ ಮುಗಿಸಿದ ನಂತರ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದೆ, ತದನಂತರ ಮಾಜಿ ಪ್ರಧಾನಮಂತ್ರಿ ದೇವೇಗೌಡರ ತತ್ವ ಸಿದ್ಧಾಂತಗಳನ್ನು ನಂಬಿ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಸುಮಾರು 15 ವರ್ಷಗಳ ಕಾಲ ಆ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿರುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದ ಕೆಲ ಮುಖಂಡರು ನನ್ನನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ ನಾನು ಮನನೊಂದು ಜೆಡಿಎಸ್‌ ಪಕ್ಷವನ್ನು ಬಿಟ್ಟಿದ್ದೇನೆಂದರು.

 

 

 

 

 

 

ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ರವರು  ಬೆಳ್ಳಿ ಲೋಕೇಶ್ ರವರನ್ನು ಬಿಜೆಪಿ ಪಕ್ಷಕ್ಕೆ ಬರಲು ಹಲವು ಬಾರಿ ಮನವಿ ಮಾಡಿದ್ದು ಈಗ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ತುಮಕೂರು ನಗರ ಸೇರಿದಂತೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಲೋಕೇಶ್‌ ರವರು ಬಲ ತುಂಬುತ್ತಾರೆಂಬ ವಿಶ್ವಾಸ ನನ್ನಲ್ಲಿದೆ ಎಂದು ಹೇಳಿದರು.

 

 

 

 

 

 

ಇದೇ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು ಹನುಮಂತರಾಜು ಸೇರಿದಂತೆ ಸ್ಥಳೀಯ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!