ತುಮಕೂರು:ಮಧುಗಿರಿ ಕ್ಷೇತ್ರದಿಂದ ಹಿಂದುಳಿದ ವರ್ಗದ ನಾಯಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಎನ್.ರಾಜಣ್ಣ ಅವರ ವಿರುದ್ದ ನಾಯಕ ಸಮುದಾಯದ ಎಲ್.ಸಿ.ನಾಗರಾಜು ಅವರಿಗೆ ಟಿಕೇಟ್ ನೀಡುವ ನೀಡುವ ಮೂಲಕ ಕೆ.ಎನ್.ಆರ್.ಅವರನ್ನು ಸೋಲಿಸುವುದರ ಜೊತೆಗೆ, ನಾಯಕ ಸಮುದಾಯವನ್ನು ಒಡೆಯುವ ಕೆಲಸವನ್ನು ಕಾಣದ ಕೈಗಳು ಮಾಡುತ್ತಿದ್ದು, ನಾಯಕ ಸಮುದಾಯದವರು ಜಾಗೃತರಾಗಿ ಮತದಾನ ಮಾಡುವಂತೆ ವಾಲ್ಮೀಕಿ ಸಮಾಜದ ಯುವ ಮುಖಂಡ ಕುಪ್ಪೂರು ಶ್ರೀಧರನಾಯಕ್ ಮನವಿ ಮಾಡಿದ್ದಾರೆ.
ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ನಾಯಕ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಧುಗಿರಿ ಕ್ಷೇತ್ರದಿಂದ ಎಲ್.ಸಿ.ನಾಗರಾಜು ಸ್ಪರ್ಧೆ ಸಮಾಜ ಒಡೆಯುವ ಕುತಂತ್ರವಷ್ಟೇ. ಹಾಗಾಗಿ ಮಧುಗಿರಿ ಕ್ಷೇತ್ರದ ನಾಯಕ ಸಮುದಾಯಕ್ಕೆ ಸೇರಿದ ಪ್ರತಿಯೊಬ್ಬ ಮತದಾರರು ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.
ಕ್ಷೇತ್ರದಲ್ಲಿ ಪ್ರಚಾರ ನಡೆಸುವ ವೇಳೆ ಬಿಜೆಪಿ ಅಭ್ಯರ್ಥಿಯಾಗಿರುವ ಎಲ್.ಸಿ.ನಾಗರಾಜು ಅವರ ಮಕ್ಕಳು ನಮ್ಮ ತಾಯಿಯ ಸಾವಿಗೆ ಕೆ.ಎನ್.ರಾಜಣ್ಣ ಅವರ ಕಾರಣ ಎಂಬ ಸುಳ್ಳು ಸುದ್ದಿಯನ್ನು ಹರಡುತ್ತಾ,ಜನರಲ್ಲಿ ಕೆ.ಎನ್.ರಾಜಣ್ಣ ಅವರ ವಿರುದ್ದ ಅಕ್ರೋಶ ಉಂಟಾಗುವAತೆ ಮಾಡಲು ಪ್ರಯತ್ನಿಸುತಿದ್ದಾರೆ.ಆದರೆ ಇದು ಸುಳ್ಳು ಸುದ್ದಿ,ಎಲ್.ಸಿ.ನಾಗರಾಜು ಅವರ ಪತ್ನಿ ಸಾವಿಗೆ ಕೌಟುಂಬಿಕ ಕಲಹವೇ ಕಾರಣ.ಕೌಟುಂಬಿಕ ಕಲಹದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಸಾವನ್ನಾಪಿದ್ದಾರೆ.ಈ ಬಗ್ಗೆ ವೈದ್ಯಕೀಯ ದಾಖಲೆಗಳನ್ನು ಮತದಾರರ ಮುಂದೆ ಬಹಿರಂಗ ಪಡಿಸಲಿ ಎಂದು ಕುಪ್ಪೂರು ಶ್ರೀಧರನಾಯಕ್ ಒತ್ತಾಯಿಸಿದರು.
ಮಧುಗಿರಿ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೆ.ಎನ್.ರಾಜಣ್ಣ ಹಣ,ಹೆಂಡ ಹಂಚಿ ರಾತ್ರೋರಾತ್ರಿ ನಾಯಕರಾದವರಲ್ಲ. ರೈತ ಪರ,ಜನಪರ, ದೀನದಲಿತ ಹಾಗೂ ಹಿಂದುಳಿದ ಅಲ್ಪಸಂಖ್ಯಾತರ ಪರ ದನಿ ಎತ್ತಿ ಹೋರಾಟಗಳ ಮೂಲಕ ಜನ ನಾಯಕ ಎನಿಸಿಕೊಂಡವರು.ಆದ್ದರಿAದಲೇ ಕೆ.ಎನ್.ರಾಜಣ್ಣ ಪರಿಶಿಷ್ಟ ವರ್ಗಕ್ಕೆ ಸೇರಿದ್ದರೂ ಸಹ ಸರ್ವಜನಾಂಗದ ಜನರ ಅಭಿಲಾಷೆಯಂತೆ ಮಧುಗಿರಿ ವಿಧಾನಸಭಾ ಕ್ಷೇತ್ರದ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ೨ ಬಾರಿ ಶಾಸಕರಾಗಿ ಜನಪ್ರಿಯ ನಾಯಕನೆನಿಸಿಕೊಂಡಿದ್ದಾರೆ.ಯಾರಿಗೂ ಮುಖ ಪರಿಚಯವಿಲ್ಲದ ಯಾರೆಂದೂ ಗೊತ್ತಿರದ,ಅಧಿಕಾರಿಯಾಗಿದ್ದ ಎಲ್.ಸಿ ನಾಗರಾಜ್‌ರನ್ನು ಕೆಲ ರಾಜಕೀಯ ಪಕ್ಷಗಳು ಹಾಗೂ ಕಾಣದ ಕೈಗಳು ಕೆ.ಎನ್.ರಾಜಣ್ಣ ಮೇಲಿನ ವೈಯುಕ್ತಿಕ ಸೇಡಿಗಾಗಿ ಎಲ್ ಸಿ.ನಾಗರಾಜ್ ರಾಜೀನಾಮೆ ನೀಡಿಸಿ,ಅವರ ಮೂಲಕ ಮುಗ್ಧ ಜನರಿಗೆ ಇಲ್ಲಸಲ್ಲದ ಆಸೆ ಆಮಿಷಗಳನ್ನು ಒಡ್ಡಿ ವಾಲ್ಮೀಕಿ ಸಮಾಜದ ಯುವಕರನ್ನು ದಾರಿ ತಪ್ಪಿಸಲು ಹೊರಟಿರುವುದು ಸರಿಯಲ್ಲ ಎಂದರು.
ಬಿಜೆಪಿ ಅಭ್ಯರ್ಥಿಯಾಗಿರುವ ಎಲ್.ಸಿ.ನಾಗರಾಜು ಮತ್ತು ಅವರ ಮಕ್ಕಳು ಪ್ರಚಾರಕ್ಕೆ ಹೊದ ಕಡೆಯಲೆಲ್ಲಾ ಕೆ.ಎನ್.ರಾಜಣ್ಣ ರವರ ಬಗ್ಗೆ ತಳ,ಬುಡ ಇಲ್ಲದ ಆರೋಪಗಳನ್ನು ಮಾಡಿಕೊಂಡು ಓಡಾಡುತ್ತಿರುವುದು ಸಮುದಾಯಕ್ಕೆ ನೋವು ತಂದಿದೆ.ರಾಜಣ್ಣ ಅವರ ವಿರುದ್ದ ಸ್ಪರ್ಧಿಸಿ ಗೆಲ್ಲುವುದು ಕಷ್ಟ ಎಂದು ಗೊತ್ತಿದ್ದರೂ ಅವರ ಜನಾಂಗದ ಮತಗಳನ್ನು ಡಿವೈಡ್ ಮಾಡುವ ಉದ್ದೇಶದಿಂದ ಎಲ್.ಸಿ.ನಾಗರಾಜು ಅವರನ್ನು ಕಣಕ್ಕೆ ಇಳಿಸಲಾಗಿದೆ. ಕಳೆದ ಎಂ.ಎಲ್.ಸಿ. ಚುನಾವಣೆಯ ವೇಳೆಯೂ ಇದೇ ರೀತಿ ಹುನ್ನಾರವನ್ನು ಕೆಲವರು ಮಾಡಿದ್ದರು. ಇದರ ಬಗ್ಗೆ ವಾಲ್ಮೀಕಿ ಸಮುದಾಯದ ಮತದಾರರು ಎಚ್ಚೆತ್ತುಕೊಳ್ಳಬೇಕೆಂದು ಯುವ ಮುಖಂಡ ಕುಪ್ಪೂರು ಶ್ರೀಧರನಾಯಕ ಮನವಿ ಮಾಡಿದ್ದಾರೆ.
ಈ ವೇಳೆ ವಾಲ್ಮೀಕಿ ಸಮಾಜದ ಹಿರಿಯ ಮುಖಂಡರಾದ ದೊಡ್ಡ ಓಬಳಯ್ಯ,ಮರಳೂರು ಆರ್.ನಾಗರಾಜು, ಮಾರಣ್ಣ ಪಾಳ್ಳೇಗಾರ್, ಕೃಷ್ಣಪ್ಪ ದೇವಲಾಪುರ, ಆರ್.ರಂಗಸ್ವಾಮಯ್ಯ, ಬುಗುಡನಹಳ್ಳಿ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.