ಸೊಗಡು ಶಿವಣ್ಣ ಅನುಯಾಯಿ ಜೆಡಿಎಸ್‌ ಸೇರ್ಪಡೆ : ಶೀಘ್ರದಲ್ಲಿಯೇ ಶಿವಣ್ಣರವರು ಬರುತ್ತಾರೆ ಊರುಕೆರೆ ನಂಜುಂಡಪ್ಪ

ತುಮಕೂರು : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ಹಾಗೂ ಎಸ್.ಶಿವಣ್ಣ (ಸೊಗಡು ಶಿವಣ್ಣ)ರವರ ಅಭಿಮಾನಿಗಳ ಗುಂಪಿನಲ್ಲಿ ಪ್ರಮುಖರೂ ಆಗಿದ್ದ, ಸೊಗಡು ಶಿವಣ್ಣರವರು ಅಪ್ಪಟ ಅನುಯಾಯಿಗಳಾಗಿದ್ದ ಊರುಕೆರೆ ನಂಜುಂಡಪ್ಪರವರು ಇಂದು ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್‌ ರವರ ನಿವಾಸದಲ್ಲಿ ಜೆ.ಡಿ.ಎಸ್.‌ ಪಕ್ಷಕ್ಕೆ ಸೇರ್ಪಡೆಯಾದರು.

 

 

 

 

 

ಇನ್ನು ಹತ್ತು ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಗುರತಿಸಿಕೊಂಡಿದ್ದರಲ್ಲದೇ ಸೊಗಡು ಶಿವಣ್ಣರವರ ಅಪ್ಪಟ ಅಭಿಮಾನಿ ಹಾಗೂ ಅನುಯಾಯಿಗಳು ಆಗಿದ್ದರು, ಇನ್ನು ತುಮಕೂರು ನಗರ ಕ್ಷೇತ್ರದಿಂದ ಸೊಗಡು ಶಿವಣ್ಣರವರಿಗೆ ಬಿಜೆಪಿ ಟಿಕೇಟ್‌ ಸಿಗದೇ ಇರುವ ಕಾರಣ ಬುಧವಾರ ತುಮಕೂರು ನಗರದ ಕಲ್ಯಾಣಮಂಟಪವೊಂದರಲ್ಲಿ ಬೃಹತ್‌ ಸಮಾವೇಶ ನಡೆಸಿದ್ದರು.

 

 

 

 

 

ಈ ಸಮಾವೇಶದಲ್ಲಿ ಸುಮಾರು 800ಕ್ಕೂ ಅಧಿಕ ಮಂದಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನೂ ಸಹ ನೀಡಿದ್ದರು, ಅದರಲ್ಲಿ ಊರುಕೆರೆ ನಂಜುಂಡಪ್ಪರವರೂ ಸಹ ಒಬ್ಬರಾಗಿದ್ದರು. ಇದರ ಬೆನ್ನಲ್ಲೇ ಊರುಕೆರೆ ನಂಜುಂಡಪ್ಪರವರು ಬೆಳಗುಂಬ ಹರೀಶ್‌, ಜಿ.ಪಾಲನೇತ್ರಯ್ಯ, ಹಾಲನೂರು ಅನಂತ್‌ ಸೇರಿದಂತೆ ಹಲವಾರು ಜೆಡಿಎಸ್‌ ಪಕ್ಷದ ಕಾರ್ಯಕರ್ತರ ಸಹಯೋಗದೊಂದಿಗೆ ಬಿಜೆಪಿಗೆ ಗುಡ್‌ ಬೈ ಹೇಳಿ ಜೆಡಿಎಸ್‌ ಗೆ ಹಾಯ್‌ ಹಾಯ್‌ ಹೇಳಿದ್ದಾರೆ.

 

 

 

 

 

 

ಇನ್ನು ಜೆಡಿಎಸ್‌ ಸೇರ್ಪಡೆಯಾದ ಬೆನ್ನಲ್ಲಿಯೇ ಇನ್ನೊಂದೆರಡು ದಿನಗಳಲ್ಲಿ ಈ ಭಾಗದ ಹಲವಾರು ಬಿಜೆಪಿ ಕಾರ್ಯಕರ್ತರು ಜೆಡಿಎಸ್‌ ಸೇರ್ಪಡೆಯನ್ನು ತಮ್ಮ ಮುಂದಾಳತ್ವದಲ್ಲಿ ಮಾಡಿಸಲಾಗುವುದೆಂದು ತಿಳಿಸ್ದಾರೆ. ಅಲ್ಲದೇ ಸೊಗಡು ಶಿವಣ್ಣರವರೂ ಸಹ ಜೆಡಿಎಸ್‌ ಪಕ್ಷಕ್ಕೆ ಬರುವ ಇಂಗಿತವನ್ನು ವ್ಯಕ್ತಪಡಿಸಿದ್ದು ಅತೀ ಶೀಘ್ರದಲ್ಲಿಯೇ ಬಹಿರಂಗವಾಗಿ ಘೋಷಣೆ ಮಾಡುವುದಲ್ಲದೇ, ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆಂದು ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!