ತುಮಕೂರು : ಹಿಂದೊಂದಿತ್ತು ಕಾಲ ತುಮಕೂರು ನಗರದಲ್ಲಿ ಬಿಜೆಪಿ ಎಂದರೆ ಶಿವಣ್ಣ = ಶಿವಣ್ಣ ಎಂದರೆ ಬಿಜೆಪಿ ಹೌದು ಏಕೆಂದರೆ ಹಲವಾರು ಹೋರಾಟಗಳು ಹೇಮಾವತಿ ನೀರಿಗಾಗಿ ಹೋರಾಟ, ಕಾಂಗ್ರೆಸ್ ಸರ್ಕಾರದಲ್ಲಿ ವಿಧಿಸಲಾಗಿದ್ದ ಎಮರ್ಜೆನ್ಸಿ ಸಮಯದಲ್ಲಿ ಹೋರಾಟ ಮಾಡಿ ಜೈಲು ಸೇರಿದ್ದ ಎಸ್.ಶಿವಣ್ಣ @ ಸೊಗಡು ಶಿವಣ್ಣ, ಅಯೋಧ್ಯಯ ರಾಮ ಮಂದಿರ ನಿರ್ಮಾಣದ ಸಮಯದಲ್ಲಿ ತುಮಕೂರಿನಲ್ಲಿ ಹಲವಾರು ಯುವಕರನ್ನು ಸಂಘಟಿಸಿ ಅಯೋಧ್ಯೆಗೆ ಕರೆದುಕೊಂಡು ಹೋಗುವಲ್ಲಿ ಅವರೂ ಸಹ ಒಬ್ಬರಾಗಿದ್ದರು.
ಛಲ ಬಿಡದ ಹೋರಾಟಗಾರ ಎಂದು ಬಿಂಬಿತವಾಗಿದ್ದ ವ್ಯಕ್ತಿ ಪ್ರತಿನಿತ್ಯ ಒಂದಲ್ಲಾ ಒಂದು ಹೋರಾಟ, ಜನರಿಗಾಗಿ ಏನಾದರೂ ಮಾಡಬೇಕೆಂಬ ಛಲದಿಂದ ಜನರಿಗಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿ, ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದ್ದ ವ್ಯಕ್ತಿಯು 1993ನೇ ಸಾಲಿನಲ್ಲಿ ಪ್ರಪ್ರಥಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜಯವನ್ನು ಸಾಧಿಸಿದ್ದರು. ನಂತರದ ದಿನಗಳಲ್ಲಿ ಮೂರು ಭಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿ ಸೇವೆ ಸಲ್ಲಿಸಿದ್ದ ಎಸ್.ಶಿವಣ್ಣರವರು ಕಳೆದ 2018ನೇ ಸಾಲಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪರವರ ಮಾತಿಗೆ ಮತ್ತು ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಮಾತಿಗೆ ಮಣಿದು ಶಾಸಕ ಸ್ಥಾನಕ್ಕೆ ಅರ್ಜಿಯನ್ನು ಸಲ್ಲಿಸದೇ / ಬಂಡಾಯವಾಗಿ ಸ್ಪರ್ಧಿಸದೇ ತಟಸ್ಥ ನಿಲುವನ್ನು ಪಡೆದಿದ್ದರು.
ಇನ್ನುಳಿದಂತೆ ಈ ಭಾರಿ 2023ರ ಸಾರ್ವತ್ರಿಕ ಚುನಾವಣೆಯ ಬಿಜೆಪಿಯ ಶಾಸಕ ಸ್ಥಾನದ ಪಟ್ಟಿಯನ್ನು ಬಿಡುಗಡೆಗೊಳಿಸಿದ ಕೇಂದ್ರ ಬಿಜೆಪಿ ತಂಡವು ತೋರಿದ ನಿಲುವಿಗೆ ಬೇಸರಗೊಂಡ ಎಸ್.ಶಿವಣ್ಣ ತಮ್ಮ ಹೆಸರನ್ನು ಸೂಚಿಸದೇ ಇದ್ದ ಕಾರಣ ಅಸಮಧಾನಗೊಂಡು ಹಲವಾರು ಬಿಜೆಪಿ ನಾಯಕರು, ಕಾರ್ಯಕರ್ತರ ಬೃಹತ್ ಸಭೆಯೊಂದನ್ನು ಖಾಸಗಿ ಸ್ಥಳದಲ್ಲಿ ಮಾಡಿ ತಮ್ಮ ನಿರ್ಧಾರವನ್ನು ತಮ್ಮ ಅಪಾರ ಅಭಿಮಾನಿಗಳಿಗೆ ತಿಳಿಸಿದ್ದಾರೆ ಏನೆಂದರೆ ತಾನು ಇನ್ಮುಂದೆ ಯಾವುದೇ ಕಾರಣಕ್ಕೂ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಳ್ಳುವುದಿಲ್ಲ, ತಾನು ನಾಳೆಯೇ ತನ್ನ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿ, ತಾನು ಪಕ್ಷದಿಂದ ಮುಕ್ತನಾಗುತ್ತೇನೆಂದು ಬಹಿರಂಗವಾಗಿ ಹೇಳಿಕೆಯನ್ನು ನೀಡಿದ್ದಾರೆ.
ತಮ್ಮ ಹೇಳಿಕೆಯನ್ನು ನೀಡುತ್ತಾ, ತಾನು ಅಧಿಕಾರದಲ್ಲಿದ್ದಾಗ ಮತ್ತು ಕಳೆದ ಎರಡು ಮೂರು ವರ್ಷಗಳಿಂದ ಹಲವಾರು ಪಕ್ಷಗಳ ಮುಖಂಡರು ತಮ್ಮ ತಮ್ಮ ಪಕ್ಷಗಳಿಗೆ ಬರುವಂತೆ ಆಹ್ವಾನಿಸಿದ್ದರು ಆದರೆ ನಾನು ಹುಟ್ಟು ಹೋರಾಟಗಾರ ಸ್ವಯಂ ಸೇವಾ ಸಂಘದ ಕಾರ್ಯಕರ್ತ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಟ್ಟು ಬರಲಾರೆನು ಎಂದು ಹೇಳಿಕೊಂಡರು.
ನನಗೆ ಯಾವುದೇ ಹೈಕಮಾಂಡ್ ಇಲ್ಲ ಇನ್ನು ನನ್ನ ಕ್ಷೇತ್ರದ ಎರಡು ಲಕ್ಷ ಮತದಾರರೇ ನನ್ನ ಹೈಕಮಾಂಡ್ ಎಂದ ಅವರು ನನಗೆ ಬೆಲೆ ಇಲ್ಲದ ಜಾಗದಲ್ಲಿ ನಾನು ಜಂಗ್ಲಿ ಆಗಲು ಇಷ್ಟಪಡುವುದಿಲ್ಲ ಒಮ್ಮೆ ಕಾಲನ್ನ ಆಚೆ ತೆಗೆದರೆ ಮತ್ತೊಮ್ಮೆ ಯಾವುದೇ ಕಾರಣಕ್ಕೂ ನನ್ನ ಕಾಲನ್ನು ಆ ಜಾಗಕ್ಕೆ ಇಡುವುದಿಲ್ಲ ಎನ್ನುವ ಮೂಲಕ ತಮ್ಮ ನೋವನ್ನು ಹಾಗೂ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಇನ್ನು ರಾಜೀನಾಮೆ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು ನನ್ನ ಪಕ್ಷದ ಹಿರಿಯ ಮುಖಂಡರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲ್ಲಿಸುತ್ತೇನೆ ಇನ್ನು ನಾನು ಪಕ್ಷದ ಕಚೇರಿಯ ಸಹ ತುಳಿಯಲು ಇಷ್ಟಪಡುವುದಿಲ್ಲ ಇನ್ನು ಪಕ್ಷದಲ್ಲಿ ನನಗೆ ಯಾವ ಸ್ಥಾನವನ್ನು ಇರುವುದಿಲ್ಲ ನಾಳೆ ನನ್ನ ರಾಜಿನಾಮೆ ಪತ್ರವನ್ನು ಸಲ್ಲಿಸುತ್ತಿದ್ದೇನೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಪಕ್ಷಕ್ಕೆ ಮೂಲ ಬಿಜೆಪಿಗರು ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಲು ಮುಂದಾಗಿದ್ದು ಇನ್ನು ಕಾರ್ಯಕರ್ತರ ರಾಜೀನಾಮೆ ನಿರ್ಧಾರ ಅವರಿಗೆ ಬಿಟ್ಟದ್ದು ಅದು ಅವರ ಸ್ವಂತಿಕೆ ನಿರ್ಧಾರ ಇನ್ನು ನನ್ ತುಮಕೂರು ಜಿಲ್ಲೆಯ ಹಲವು ಮೂಲ ಬಿಜೆಪಿಗರು ಸಹ ರಾಜೀನಾಮೆ ನೀಡಲು ಸಿದ್ದರಾಗಿದ್ದು ಮುಂದಿನ ದಿನದಲ್ಲಿ ರಾಜೀನಾಮೆ ನೀಡುವವರ ಸಂಖ್ಯೆಯು ಸಹ ಹೆಚ್ಚಾಗಲಿದೆ ಎಂದಿದ್ದಾರೆ.
ಯಾವುದು ಏನೇ ಆಗಲಿ ತುಮಕೂರು ನಗರಕ್ಕೆ ಹಿರಿಯ ಬಿಜೆಪಿ ಮುಖಂಡ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಸ್ವಯಂ ಸೇವಾ ಸಂಘದ ಕಟ್ಟಾಳು ರಾಜೀನಾಮೆ ನೀಡುತ್ತಿರುವುದು ಅತ್ಯಂತ ಬೇಸರವನ್ನುಂಟು ಮಾಡಿದೆಂದು ಅವರ ಅಭಿಮಾನಿಗಳು ಹಾಗೂ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರುಗಳು ಮಾತನಾಡಿಕೊಳ್ಳುತ್ತಿದ್ದಾರೆ.