ತುಮಕೂರು ನಗರಕ್ಕೇ ನಾನೇ ಬಿಜೆಪಿ ಅಭ್ಯರ್ಥಿ ಇದರಲ್ಲಿ ಯಾವುದೇ ಅನುಮಾನ ಬೇಡ : ಸೊಗಡು ಶಿವಣ್ಣ

ಕಳೆದ ಚುನಾವಣೆಯಲ್ಲಿ ನಾನು ಯಡಿಯೂರಪ್ಪ ಮಾತು ಕೇಳಿ ಚುನಾವಣೆ ಇಂದ ದೂರ ಉಳಿದಿದೆದ್ದೆ ಆದರೆ ಈ ಭಾರಿ ನನ್ನ ಸ್ಪರ್ಧೆ ಖಚಿತ

 

 

ತುಮಕೂರು : ನೂರಕೆ ನೂರು ಪಾಲು ತುಮಕೂರು ನಗರಕ್ಕೆ ನನಗೆ ಬಿಜೆಪಿ ಟಿಕೆಟ್ ಸಿಗುತದೆ ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಖಾಸಗಿ ಹೋಟೆಲ್‌ ಒಂದರಲ್ಲಿ ಸುದ್ಧಿಗೋಷ್ಠಿ ನಡೆಸಿ ಹೇಳಿಕೆಯನ್ನು ನೀಡಿದ್ದಾರೆ.

 

 

 

 

ಬಿಜೆಪಿ ಕಾರ್ಯಕರ್ತರು ದಯಮಾಡಿ ಯಾವುದೇ ಗೊಂದಲ ಪಡಬೇಕಾಗಿಲ್ಲ, ನಾನು ಹುಟ್ಟ ಹೋರಾಟಗಾರ ನನ್ನ ಶಾಲಾ ದಿನಗಳಿಂದ ಹಿಡಿದು ಆರ್.ಎಸ್.ಎಸ್, ಎಮರ್ಜೆನ್ಸಿ ಸಮಯದಲ್ಲಿ, ಹೇಮಾವತಿ ನೀರಿನ ಹೋರಾಟದಲ್ಲಿ,  ಹೀಗೆ ಹತ್ತು ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಂತವ ನಾನು, ನನ್ನ ಜೀವವನ್ನು ಬಿಜೆಪಿ ಪಕ್ಷದ ರಾಜಕೀಯ ಜೀವನಕ್ಕೆ ಮಾತ್ರ ಮುಡುಪಾಗಿಟ್ಟಿರುವೆ, ನಾನು ಹಲವಾರು ಸಮಾಜಿಕ ಹೋರಾಟಗಾರನಾಗಿದ್ದೇನೆ, ನನಗೆ ಹಲವಾರು ರಾಜಕೀಯ ಪಕ್ಷದವರು ಆಮಿಷ ಹೊಡ್ದಿದರೂ ಸಹ ನಾನು ಪಕ್ಷ ನಿಷ್ಠೆಯಿಂದ ಕೆಲಸ ಮಾಡಿಕೊಂಡು ಬರ್ತಾ ಇದ್ದೀನಿ, ಅಂತಹದರಲ್ಲಿ ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಪ್ರಮೇಯವೇ ಇಲ್ಲ ಎಂದು ಹೇಳಿದರು.

 

 

 

 

 

 

 

ನಾನು ಕಳೆದ 40 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿಯೇ ರಾಜಕೀಯ ಮಾಡಿಕೊಂಡು ಬರ್ತಾ ಇದ್ದು, ತುಮಕೂರು ನಗರದ ಎಲ್ಲಾ ಬಡಾವಣೆಗಳಲ್ಲಿನ ಜನರ ಸಂಪರ್ಕ ನನಗೆ ಚೆನ್ನಾಗಿದೆ ಅದೂ ಅಲ್ಲದೇ ಬಹುತೇಕ ಎಲ್ಲಾ ಸಮುದಾಯಗಳ ಮುಖಂಡರು ಮತ್ತು ಜನರ ಸಂಪರ್ಕ ನನಗಿದೆ ಎಂದು ಹೇಳಿದರಲ್ಲದೇ.

 

 

 

 

 

ಕಳೆದ ಕರೋನಾ ಸಮಯದಲ್ಲೂ ಸಹ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ ಜೊತೆಗೆ ಕರೋನ ದಿಂದ ಮೃತ ಪಟ್ಟವರ ಹಾಸ್ತಿಗಳನ್ನು ವಿಸರ್ಜಿಸಿ ಅವರಿಗೆ ಮುಕ್ತಿ ಕೊಡಿಸುವಂತ ಕೆಲಸ ಮಾಡಿದ್ದೇನೆ. ನನ್ನ ಹಿರಿಯರು ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರು ನನ್ನ ಬೆಂಬಲಕ್ಕೆ ಇದ್ದಾರೆ ಅವರೆಲ್ಲ ಬೆಂಬಲದಿಂದ ನಾನು ಈ ಬರಿ ನಾಮಿನೇಷನ್ ಹಾಕುತ್ತಿದ್ದೇನೆ. ಎಲ್ಲ ಸಮುದಾಯದ ಬೆಂಬಲದೊಂದಿಗೆ ನಾನು ಈ ಬರಿ ಚುನಾವಣೆಯಲ್ಲಿ ಗೆಲ್ಲುತೇನೆ.

 

 

 

 

 

 

 

ಯಾರಾದ್ರೂ ಪ್ರಜಾಪ್ರಭುತ್ವ ಉಳಿಸುವ ಮನಸು ಇದ್ದಾರೆ ನನ್ನ ಜೊತೆ ಬಂದು ಚುನಾವಣೆಯಲ್ಲಿ ಪ್ರಚಾರ ಮಾಡಲಿ ಮುಕ್ತ ಅವಕಾಶ ನೀಡುತ್ತೆನೆ ಚುನಾವಣೆಗೆ ನಾಮಿನೇಷನ್ ಮಾಡಲು ನಾನು ಸಕಲ ವ್ಯವಸ್ಥೆ ಮಾಡಿಕೊಂಡಿದ್ದೇನೆ ಶುಭ ಮುಹೂರ್ತ ಮತ್ತು ಗಳಿಗೆಯಲ್ಲಿಯೇ ನಾನು ನಾಮಿನೇಷನ್ ಸಲ್ಲಿಸುತ್ತೆನೆ. ಜೋಳಿಗೆಯಲ್ಲಿ ಸಂಗ್ರಹವಾದ ಹಣದಿಂದಲೇ ನಾನು ಚುನಾವಣೆಯ ಠೇವಣಿ ಮಾಡುತೇನೆ ಎಂದರು.

 

 

 

 

 

 

ಇನ್ನು ಈ ಸುದ್ಧಿಗೋಷ್ಠಿಯಲ್ಲಿ ಮುಖಂಡರುಗಳಾದ ಧನೀಯಾ ಕುಮಾರ್‌, ಜಯಸಿಂಹ, ನರಸಿಂಹಮೂರ್ತಿ, ಚೌಡಪ್ಪ, ತರಕಾರಿ ಮಹೇಶ್‌ ಹಾಗೂ ಇನ್ನಿತರರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!