ತುಮಕೂರಿನ ಪ್ರಖ್ಯಾತ ಉದ್ಯಮಿಗೆ ಐ.ಟಿ. ಶಾಖ್ ಅಪಾರ ಪ್ರಮಾಣದ ನಗದು ಮತ್ತು ದಾಖಲೆ ವಶ

ತುಮಕೂರು – ಚುನಾವಣಾ ನೀತಿ ಸಂಹಿತೆ ಜಾರಿ  ಇರವ ಹಿನ್ನೆಲೆಯಲ್ಲಿಯೇ ತುಮಕೂರಿನಲ್ಲಿ ಐಟಿ ಇಲಾಖೆ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ   ದಾಳಿ ನಡೆಸುವ ಮೂಲಕ ಅಕ್ರಮವಾಗಿ ಮನೆಯಲ್ಲಿ ಶೇಖರಣೆ ಮಾಡಿದ ಅಪಾರ ಪ್ರಮಾಣದ ಹಣ ಹಾಗೂ ಮಹತ್ತರ ದಾಖಲಾತಿಗಳನ್ನು ವಶಕ್ಕ.   ಪಡೆದಿದ್ದಾರೆ ಎನ್ನಲಾಗಿದೆ.

 

 

 

ತುಮಕೂರಿನ ಬಿ.ಎಚ್ ರಸ್ತೆಯಲ್ಲಿ ಇರುವ   ಸೆಲ್ಲೂಲರ್ ಪಾಯಿಂಟ್ ಮೊಬೈಲ್ ಅಂಗಡಿ ಹಾಗೂ ತುಮಕೂರಿನ ಗಾಂಧಿನಗರದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಸಂಪೂರ್ಣ ಜಾಲಾಡಿರುವ ಅಧಿಕಾರಿಗಳು ಯುವ ಉದ್ಯಮಿಗಳಿಗೆ ಬೃಹತ್ ಶಾಕ್ ನೀಡಿದ್ದಾರೆ.

 

 

 

ಬೆಂಗಳೂರಿನಿಂದ 3ಕ್ಕೂ ಹೆಚ್ಚು ವಾಹನದಲ್ಲಿ ಆಗಮಿಸಿದ 8ಕ್ಕೂ ಹೆಚ್ಚು ಅಧಿಕಾರಿಗಳ ತಂಡ ತಮ್ಮ ಸಿಬ್ಬಂದಿಗಳೊಂದಿಗೆ ಖಚಿತ ಮಾಹಿತಿ ಮೇರಿಗೆ ಗಾಂದಿನಗರದ  ಮನೆಯ ಮೇಲೆ ದಾಳಿ ನಡೆಸಿದ್ದಾರೆ.

 

 

ಸತತ 10ಗಂಟೆಗೂ ಹೆಚ್ಚು ಕಾಲ ಅಧಿಕಾರಿಗಳಿಂದ ಮನೆಯ ಮೊಬೈಲ್ ಅಂಗಡಿ, ವಾಚ್ ಅಂಗಡಿ ,ಇಂಚಿಂಚು ಬಿಡದೆ ತಪಾಸಣೆ ಮಾಡಲಾಗಿದ್ದು ತನಿಖೆಯ ನಂತರ ಮನೆಯಿಂದ ಹಲವು ದಾಖಲಾತಿಗಳು ಹಾಗೂ ಬ್ಯಾಗ್ ನಲ್ಲಿ ಬೃಹತ್ ಪ್ರಮಾಣದ ಹಣವನ್ನು ಅಧಿಕಾರಿಗಳ ತಮ್ಮ ಕಾರಿನಲ್ಲಿ ಕೊಂಡೊಯ್ದಿದ್ದಾರೆ ಎನ್ನಲಾಗಿದೆ ಮನೆಯಲ್ಲಿ ವಶಕ್ಕೆ ಪಡೆದಿರುವ ಹಣದ ಮೌಲ್ಯ ಎಷ್ಟು ಎನ್ನುವ ಮಾಹಿತಿ ತನಿಖೆಯ ನಂತರ ಅಧಿಕಾರಿಗಳಿಂದ ಲಭ್ಯವಾಗಬೇಕಿದೆ.

 

 

ಕೋಟ್ಯಂತರ ರೂಪಾಯಿ ಮೌಲ್ಯದ ಹಣ ವಶ…..???

 

 

ಐ.ಟಿ ಅಧಿಕಾರಿಗಳು ಗಾಂಧಿನಗರದ ನಿವಾಸದ ಮೇಲೆ ದಾಳಿ ನಡೆಸುತ್ತಿದ್ದಂತೆ ಸಾರ್ವಜನಿಕರು ಬೆಚ್ಚಿಬಿದ್ದಿದ್ದು ದಾಳಿ ನಡೆಸಿದ ನಿವಾಸದಿಂದ ಬೃಹತ್ ಪ್ರಮಾಣದ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನುವ ವಿಷಯ ಸಾರ್ವಜನಿಕರ ಬಾಯಲ್ಲಿ ಹರಿದಾಡುತ್ತಿತ್ತು.

 

ಇನ್ನು ಐ.ಟಿ.ದಾಳಿಗೆ ಒಳಗಾದ ನಿವಾಸದ ಕೂದಳೆಲೆ ಅಂತರದಲ್ಲಿಯೇ ಹಾಲಿ ಶಾಸಕರ ನಿವಾಸವೂ ಇದ್ದು ಕೆಲವರಿಗೆ ಈ ಕುರಿತು ಸಾಕಷ್ಟು ಅನುಮಾನಗಳು ಸಹ ಮೂಡಿದ್ದು ದಾಳಿಗೆಗೂಳಗಾದ ನಿವಾಸದ ಬಳಿ ಕೆಲವರು ಪಿಸು ಪಿಸು ಮಾತನಾಡಿಕೂಳ್ಳುತ್ತಿದ್ದರು.

 

 

ಐ ಟಿ ದಾಳಿ ಬೆನ್ನಲ್ಲೇ ಎಚ್ಚೆತ್ತು ಚಾಣಾಕ್ಷತನ ಮೆರೆದ ಉದ್ಯಮಿಗಳು…..????

 

ಒಂದೆಡೆ ಗಾಂಧಿನಗರದ ನಿವಾಸದ ಮೇಲೆ ಬೃಹತ್ ಪ್ರಮಾಣದ ಅಧಿಕಾರಿಗಳು ದಾಳಿ ನಡೆಸಿದ ಬೆನ್ನಲ್ಲೇ ದಾಳಿಯ ಸೂಕ್ಷ್ಮವನ್ನು ಅರಿತ ಅಂಗಡಿ ಮಾಲಿಕ ತನ್ನ ಮತ್ತೊಂದು ಕಾರಿನಲ್ಲಿ ತನ್ನ ಮೊಬೈಲ್ ಅಂಗಡಿ ಇಂದ ನಾಲ್ಕು ಬೃಹತ್ ಬಾಕ್ಸ್ ಗಳಲ್ಲಿ ಮೊಬೈಲ್ಗಳು ಹಾಗೂ ಹಣವನ್ನು ತನ್ನ ಅಂಗಡಿಯಿಂದ ಸಿಯಜ್ ಕಾರಿನಲ್ಲಿ ಸಾಗಿಸುವಲ್ಲಿ ಸಫಲರಾಗಿದ್ದಾರೆ ಎನ್ನುವ ಮಾಹಿತಿ ಸಹ ಸಾರ್ವಜನಿಕರ ಬಾಯಲ್ಲಿ ಹರಿದಾಡುತ್ತಿತ್ತು.

Leave a Reply

Your email address will not be published. Required fields are marked *

error: Content is protected !!