ತುಮಕೂರಿನ ಗಾಂಧಿನಗರದಲ್ಲಿರುವ ವಿಶ್ವಗುರು ಸ್ಕಾನಿಂಗ್ ಅಂಡ್ ಡಯಾಗ್ನೋಸ್ಟಿಕ್ ಸೆಂಟರಿನ ವೈದ್ಯರಾದ ಡಾ.ಧ್ರುವ ರಾಜಗೋಪಾಲ್‌ರವರ ನೇತೃತ್ವದಲ್ಲಿ ಗರ್ಭದ ಒಳಗಿರುವ ಶಿಶುವಿನ ರಕ್ತನಾಳಕ್ಕೆ ರಕ್ತ ಹಾಕುವ ಪ್ರಕ್ರಿಯೆಯನ್ನು ಮಾಡಲಾಗಿತ್ತು.
ಆರ್.ಹೆಚ್. ಇನ್‌ಕೆಂಪಾಟಬಲ್ ಗರ್ಭಾವಸ್ಥೆ ಎಂದರೆ ತಾಯಿ ಮತ್ತು ಗರ್ಭದಲ್ಲಿರುವ ಶಿಶುವಿನ ರಕ್ತದ ಗುಂಪಿನಲ್ಲಿ ವ್ಯತ್ಯಾಸ ಇರುವಂತದ್ದು, ತಾಯಿಯ ರಕ್ತದ ಗುಂಪು ನೆಗೆಟಿವ್ ಆಗಿದ್ದು ಮತ್ತು ಶಿಶುವಿನ ರಕ್ತ ಪಾಸಿಟಿವ್ ಆಗಿದ್ದಲ್ಲಿ ಗರ್ಭಾವಸ್ಥೆಯ ಕಾಲದಲ್ಲಿಯೆ ಶಿಶುವಿನ ರಕ್ತ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. (ಇದನ್ನು ಫೀಟಲ್ ಅನೀಮಿಯಾ ಎನ್ನುತ್ತಾರೆ) ಇದರಿಂದ ಶಿಶುವಿಗೆ ಗರ್ಭಾವಸ್ಥೆಯಲ್ಲಿಯೇ ಪ್ರಾಣಾಪಾಯವಿರುತ್ತದೆ. ಈ ಪರಿಸ್ಥಿತಿಯನ್ನು ಪ್ರಸವ ಪೂರ್ವಕಾಲದಲ್ಲಿ ಅಲ್ಟಾçಸೌಂಡ್ ಮಾಡುವ ಮೂಲಕ ಪತ್ತೆ ಹಚ್ಚುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಹಾಗಾಗಿದ್ದಲ್ಲಿ ಗರ್ಭದ ಒಳಗಿರುವ ಶಿಶುವಿನ ರಕ್ತನಾಳಕ್ಕೆ ರಕ್ತ ಹಾಕುವ ಮೂಲಕ ಪ್ರಾಣಾಪಾಯವನ್ನು ತಪ್ಪಿಸಬಹುದು. ಇದನ್ನು ಇನ್ಟಾç ಯುಟ್ಟೆçöÊನ್ ಬ್ಲಡ್ ಟ್ರಾನ್ಸ್ಫ್ಯೂಜನ್ ಎಂದು ತುಮಕೂರಿನ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ವಿಶ್ವಗುರು ಸ್ಕಾö್ಯನಿಂಗ್ ಅಂಡ್ ಡಯಾಗ್ನೋಸ್ಟಿಕ್ ಸೆಂಟರಿನಲ್ಲಿ ಡಾ.ಧ್ರುವ ರಾಜಗೋಪಾಲ್‌ರವರ ನೇತೃತ್ವದಲ್ಲಿ ಮಾಡಲಾಗಿದೆ ಎಂದರು.
ಕುಣಿಗಲ್ ತಾಲ್ಲೂಕಿನ ಕೆ.ಆರ್.ಎಸ್. ಅಗ್ರಹಾರದಲ್ಲಿ ವಾಸವಾಗಿರುವ ಒಬ್ಬ ಮಹಿಳೆಗೆ ಆರ್. ಹೆಚ್. ಇನ್‌ಕಂಪ್ಯಾಟಿಬಿಲಿಟಿಯ ಕಾರಣದಿಂದ ಹಿಂದಿನ ಎರಡು ಶಿಶುಗಳು ಮರಣ ಹೊಂದಿದ್ದವು. ಈ ಬಾರಿ ಗರ್ಭಾವಸ್ಥೆಯ 32ನೇ ವಾರದಲ್ಲೇಯೇ ಗರ್ಭದಲ್ಲಿರುವ ಶಿಶುವಿನ ರಕ್ತನಾಳಕ್ಕೆ ರಕ್ತನಾಳಕ್ಕೆ ರಕ್ತಹಾಕಿದ ಕಾರಣದಿಂದ ಆರೋಗ್ಯವಾದ ಒಂದು ಹೆಣ್ಣು ಮಗುವಿನ ಜನನವಾಗಿದೆ. ಮತ್ತೊಂದು ವಿಶೇಷತೆ ಏನೆಂದರೆ ಶಿಶುವು ಗರ್ಭದಲ್ಲಿರುವಾಗಲೇ ಅದರ ರಕ್ತದ ಗುಂಪು ಪಾಸಿಟಿವ್ ಎಂದು ತಾಯಿಯ ರಕ್ತವನ್ನು ಪರೀಕ್ಷಿಸಿ ಕಂಡು ಹಿಡಿಯಲಾಗಿತ್ತು. ಈ ರೀತಿಯ ಹೊಸ ವಿನ್ಯಾಸದ ಪರೀಕ್ಷೆ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಕೈಗೊಳ್ಳಲಾಗಿದೆ. ಈ ರೀತಿಯಾದ ಪ್ರಕ್ರಿಯೆಯು ಸಾಕಷ್ಟು ಬಾರಿ ಬೆಂಗಳೂರು ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ನಡೆದಿದೆ. ಆದರೆ ತುಮಕೂರು ಜಿಲ್ಲೆಯಲ್ಲಿ ಪ್ರಪ್ರಥಮ ಇನ್ಟಾç ಯುಟ್ಟೆöÊನ್ ಬ್ಲಡ್ ಟ್ರಾನ್ಸ್ಫ್ಯೂಜನ್ ನಮ್ಮ ಸಂಸ್ಥೆಯಲ್ಲಿ ಆಗಿರುವುದು ನಮಗೆ ಒಂದು ಹೆಮ್ಮೆಯ ವಿಷಯವಾಗಿದೆ.
ಶಿಶುವಿನ ರಕ್ತದ ಗುಂಪು ಗರ್ಭಾವಸ್ಥೆಯ ಹನ್ನೆರಡನೇ ವಾರದಲ್ಲಿಯೇ ತಿಳಿದುಕೊಳ್ಳುವ ಹೊಸ ನಿನ್ಯಾಸದ ಪರೀಕ್ಷೆಯನ್ನು ಮೆಡ್‌ಜಿನೋಮ್ ಲ್ಯಾಬ್ ಪ್ರೆöÊವೇಟ್ ಲಿಮಿಟೆಡ್‌ರವರು ನಮಗೆ ಒದಗಿಸಿದ್ದಾರೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಿಂದ ಶಿಶುವಿಗೆ ಹಾಕುವ ವಿಶೇಷವಾದ ರಕ್ತವನ್ನು ಒದಗಿಸಲಾಗಿತ್ತು. ಇದಕ್ಕೆ ಡಾ.ಮಹೇಶ್ ರಾಜಶೇಖರಯ್ಯ ಮತ್ತು ಡಾ.ಬಾಲಾ ಬಾಸ್ಕರ್‌ರವರು ಮಹತ್ವವಾದ ಸಹಾಯವನ್ನು ಮಾಡಿದ್ದಾರೆ.
ತಾಯಿಯ ಪ್ರಸವವನ್ನು ಶಸ್ತçಚಿಕಿತ್ಸೆಯ ಮೂಲಕ ಪ್ರಸಿದ್ದ ತುಮಕೂರಿನ ಸಿದ್ಧರಾಮಣ್ಣ ಆಸ್ಪತ್ರೆಯ ಪ್ರಖ್ಯಾತ ಪ್ರಸ್ತೂತಿ ಮತ್ತು ಸ್ತಿçÃರೋಗ ತಜ್ಞರಾದ ಡಾ.ಶುಭಾದ್ವಾರಕ್‌ರವರು ಈ ಶಸ್ತçಚಿಕಿತ್ಸೆಯಲ್ಲಿ ಪ್ರಸಿದ್ಧ ಅರವಳಿಕೆ ತಜ್ಞರಾದ ಡಾ.ಪ್ರೇಮ್‌ಕುಮಾರ್‌ರವರು ಭಾಗವಹಿಸಿದ್ದರು. ಶಿಶುವಿನ ಜನ್ಮದ ನಂತರ ಡಬ್ಬಲ್ ವ್ಯಾಲ್ಯೂಮ್ ಎಕ್ಸ್ಚೇಂಜ್ ಟ್ರಾನ್ಸ್ಫ್ಯೂಜನ್ ಅನ್ನು ತುಮಕೂರಿನ ಪ್ರಖ್ಯಾತ ನವಜಾತ ಶಿಶು ತಜ್ಞರಾದ ಡಾ.ಈಶ್ವರ್.ಎ.ಮಾಕಮ್‌ರವರು ಮಾಡಿದ್ದಾರೆ. ಪ್ರಸ್ತುತ ಮಗು ಆರೋಗ್ಯವಾಗಿದ್ದು, ನಮ್ಮ ಅನುಕರಣೆಯಲ್ಲಿದೆ. ಮಗುವಿಗೆ ಪೋಷಕರು ನಮ್ಮ ಮೇಲಿಟ್ಟ ನಂಬಿಕೆಗೆ ನಾವು ಸದಾ ಕೃತಜ್ಞರಾಗಿರುತ್ತೇವೆ.ಈ ಪ್ರಕ್ರಿಯೆಯಲ್ಲಿ ಸಹಬ್ವಾಗಿತ್ವಯಾಗಿದ್ದವರಿಗೆ ನನ್ನ ಹೃತ್ಪೂರ್ವಕ ನಮನಗಳು ಮತ್ತು ಅಭಿನಂದನೆಗಳು ಎಂದು ವಿಶ್ವಗುರು ಸ್ಕಾö್ಯನಿಂಗ್ ಮತ್ತು ಡಯಾಗ್ನೋಸ್ಟಿಕ್ ಸೆಂಟರಿನ ಮಾಲೀಕರಾದ ಡಾ.ಧ್ರುವ ರಾಜಗೋಪಾಲ್‌ರವರ ಪತ್ರಿಕೆಯಲ್ಲಿ ತಿಳಿಸಿದ್ದಾರೆ.