ತುಮಕೂರು : ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ನಾಣ್ಣುಡಿಯಿದೆ, ಆದರೆ ಸವಿತಾ ಸಮಾಜದ ವಿಕಲಚೇತನೊಬ್ಬ ತನ್ನ ಕಾಲಮೇಲೆ ತಾನು ನಿಲ್ಲಬೇಕೆಂಬ ಛಲ ಆದರೆ ಆರ್ಥಿಕವಾಗಿ ಬಲವಿಲ್ಲ, ಇಂತಹ ಸಮಯದಲ್ಲಿ ಸವಿತಾ ಯುವ ಪಡೆಯು ವಿಕಲಚೇತನನಿಗೆ ಕ್ಷೌರಕುಟೀರ ನಿರ್ಮಿಸಿಕೊಟ್ಟ ಸ್ವಾಭಿಮಾನಿ ಜೀವನಕ್ಕೆ ದಾರಿಮಾಡಿಕೊಟ್ಟಿದೆ.
ತುಮಕೂರು ಜಿಲ್ಲಾ ಸವಿತಾ ಯುವಪಡೆಯ ವತಿಯಿಂದ, ಮಾನವ ಸಂಘ ಜೀವಿ ಪರಸ್ಪರ ಸಹಕಾರ ದಿಂದ ಜೀವನ ನಡೆಸಬೇಕಾಗಿರುವುದು ಸಮಾಜದ ನಿಯಮ, ಕೈಲಾಗದವರಿಗೆ ನೆರವು ನೀಡುವುದು, ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವುದು ಸಂಘ ಸಂಸ್ಥೆಗಳ ಧ್ಯೇಯ. ಅಸಹಾಯಕರಿಗೆ ಸರ್ಕಾರವೇ ನೆರವು ನೀಡಲಿ ಎಂದು ಕಾಯುವವರ ಮಧ್ಯೆ ಕ?ದಲ್ಲಿ ಇದ್ದ ವ್ಯಕ್ತಿಗೆ ತುಮಕೂರಿನ ಜಿಲ್ಲಾ ಸವಿತಾ ಯುವ ಪಡೆ ವತಿಯಿಂದ ಕ್ಷೌರ ಕುಟೀರ ನಿರ್ಮಿಸಿ ಕೊಟ್ಟು, ಇಡೀ ರಾಜ್ಯಕ್ಕೆ ಮಾದರಿಯಾದ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರ ವಾಗಿದೆ. ಸ್ವಾಸ್ಥ ಸಮಾಜಕ್ಕೆ ಸವಿತಾ ಸಮಾಜದ ಕ್ಷೌರಿಕರ ಸೇವೆ ಅಗತ್ಯವಾಗಿ ಬೇಕಾಗಿದ್ದು, ಸ್ವಾವಲಂಭಿ ಜೀವನ ನಡೆಸಲು ಸ್ವಯಂ ಉದ್ಯೋಗ ಕೈಗೊಳ್ಳಲು ಬಂಡವಾಳದ ಕೊರತೆ ಇರುವ ಅಸಹಾಯಕ ಸ್ಥಿತಿಯಲ್ಲಿರುವವರಿಗೆ ಸರ್ಕಾರಗಳು ನೆರವು ನೀಡಬೇಕು, ಆದರೆ ಸರ್ಕಾರ ನೆರವು ನೀಡದ್ದಿರೂ ಮಾನವೀಯತೆ ಆಧಾರದ ಮೇಲೆ ನೆರವು ನೀಡಬಹುದು ಎಂದು ಯುವಜನತೆ ರುಜುವಾತುಪಡಿಸಿದ ಪ್ರಕರಣ ಒಂದು ಜಿಲ್ಲೆಯಲ್ಲಿ ಜರುಗಿದೆ. ತುಮಕೂರಿನ ಕಾತ್ಯಸಂದ್ರದ ಸುಭಾ? ನಗರದ ವಾಸಿ ಲೋಕೇಶ್ ವಿಕಲಚೇತನ, ತಂದೆ ಮರಣ ನಂತರ ಕುಲ ವೃತ್ತಿಯಾದ ಕ್ಷೌರಿಕ ವೃತ್ತಿಯನ್ನು ಕಲಿತು, ತಂದೆ ಬಿಟ್ಟು ಕೊಟ್ಟಿದ್ದ ಪೆಟ್ಟಿಗೆ ಅಂಗಡಿಯಲ್ಲಿ ಬದುಕಿನ ಬಂಡಿ ಸಾಗಿಸತೊಡಗಿದ್ದ.
ಆರ್ಥಿಕವಾಗಿ ಸಧೃಡರಾಗಿಲ್ಲದ ಲೋಕೇಶ್ ರವರ ಅಂಗಡಿ ಮಳೆ, ಗಾಳಿಗೆ ಸಂಪೂರ್ಣ ಶಿಥಿಲಗೊಂಡಿರುವ ವಿ?ಯ ತುಮಕೂರು ತಾಲ್ಲೂಕು ಹಾಗೂ ನಗರ ಸವಿತಾ ಸಮಾಜದ ಅಧ್ಯಕ್ಷ, ಜಿಲ್ಲಾ ಸವಿತಾ ಯುವ ಪಡೆಯ ಮುಖ್ಯಸ್ಥ ಕಟ್ವೆಲ್ ರಂಗನಾಥ್ ಅವರಿಗೆ ತಿಳಿದು, ಸ್ವಾವಲಂಬಿ ಜೀವನ ನಡೆಸಲು ಸ್ವಯಂ ಉದ್ಯೋಗ ಕೈಗೊಳ್ಳಲು ಬಂಡವಾಳದ ಕೊರತೆ ಇರುವ ಲೋಕೇಶ್ ರವರಿಗೆ ಪರಸ್ಪರ ಸಹಾಯದಿಂದ ನೆರವು ನೀಡಲು ಚಿಂತಿಸಿದರು.
ಈ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯಲ್ಲಿ ರಚನೆ ಯಾಗಿರುವ ಸವಿತಾ ಸಮಾಜ ಯುವ ಪಡೆಯ ವತಿಯಿಂದ ಅಸಹಾಯಕರಿಗೆ ನೆರವು ನೀಡುವ ಕ್ರಿಯಾ ಯೋಜನೆ ರೂಪಿಸಿದ ರಂಗನಾಥ್, ಜಿಲ್ಲೆಯ ಎಲ್ಲಾ ಯುವಕರ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಆರ್ಥಿಕ ಸಹಾಯ ಪಡೆದರು. ಜಿಲ್ಲಾ ಯುವ ಪಡೆಯಿಂದ ಶ್ರೀ ವಿರೇಶಾನಂದ ಸ್ವಾಮಿಗಳ ಆರ್ಶೀವಾದದಿಂದ ಸಲೂನ್ ಸ್ವಚ್ಛತಾ ಅಭಿಯಾನ ಯೋಜನೆಯ ಅಡಿಯಲ್ಲಿ ಒಂದು ಉತ್ತಮ ಕ್ಷೌರಕುಟೀರ ನಿರ್ಮಾಣ ಮಾಡಿ, ದಿನಾಂಕ 31-03-2023 ರ ಶುಕ್ರವಾರ ಕ್ಷೌರ ಸೇವೆ ಪುನರ್ ಆರಂಭಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಲೋಕೇಶ್ರವರ ಕುಟುಂಬ ನೆಮ್ಮದಿಯ ಜೀವನ ನಡೆಸುವಂತಾಗಿರುವುದು ಸಂತಸದ ಸಂಗತಿ. ಇದೇ ರೀತಿ ಇತರ ಸಮಾಜಗಳು ಸರ್ಕಾರದ ನೆರವನ್ನು ನಿರೀಕ್ಷಿಸದೇ ತಮ್ಮ ಸಮಾಜಸೇರಿದಂತೆ ಇತರೆ ಹಿಂದುಳಿದ ವರ್ಗವದರಿಗೆ ಮಾದರಿಯಾಗಿ, ಎಲ್ಲರೂ ಇದೇ ರೀತಿ ಕೆಲಸಮಾಡಿದರೆ ವಸುದೈವ ಕುಟುಂಬಕಂ ಎಂಬ ಮಾತು ಸಾಧ್ಯವಾಗುತ್ತದೆ.