ಕರ್ನಾಟಕದಲ್ಲಿ 2023 ರ ಸಾರ್ವತ್ರಿಕ ಚುನಾವಣೆಯು ಮೇ 10 ರಂದು ಚುನಾವಣೆಯನ್ನು ಘೋಷಣೆಯಾಗಿದೆ
ಚುನಾವಣೆ ದಿನಾಂಕ :
ಚುನಾವಣೆ ಅಧಿಸೂಚನೆ ಏಪ್ರಿಲ್ 13 ರಂದು ಹೊರಡಿಸಲಾಗುತ್ತದೆ. ನಾಮಪತ್ರ ಪರಿಶೀಲನೆ ಎಪ್ರಿಲ್ 21ರಂದು ನಡೆಯಲಿದೆ ನಾಮಪತ್ರ ಹಿಂಬಡೆಯಲು ಏಪ್ರಿಲ್ 24 ಕೊನೆಯ ದಿನ.
ಮತ ಎಣಿಕೆ ಮೇ 13 ರಂದು ನಡೆಯಲಿದೆ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ.
ಮೇ 10 ರಂದು ಚುನಾವಣೆ ನಡೆಯಲಿದೆ
ಇಂದಿನಿಂದ ನೀತಿ ಸಂಹಿತೆ ಜಾರಿಯಾಗಿದೆ. 224 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ಜರುಗಲಿದೆ. ಕರ್ನಾಟಕದ ಚುನಾವಣಾ ಸಿದ್ಧತೆ ಎಲ್ಲವೂ ಮುಗಿದಿದೆ.
5,21,73, 579 ಮತದಾರರು ಮತ ಚಲಾಯಿಸಲಿದ್ದಾರೆ. 80+ಮತದಾರರಿಗೆ ಮೊದಲ ಬಾರಿ ಮನೆಯಿಂದ ಮತ ಚಲಾಯಿಸುವ ಹಕ್ಕು ನೀಡಲಾಗಿದೆ. ನಗರ ಹಾಗೂ ಗ್ರಾಮೀಣ ಸೇರಿ 58,282 ಮತಗಟ್ಟೆ ಮಾಡಲಾಗಿದೆ. ಮುಕ್ತ ನ್ಯಾಯಸಮ್ಮತ ಚುನಾವಣೆ ನಮ್ಮದಾಗಿದೆ ಎಂದರು.
ಅಕ್ರಮ ತಡೆಗೆ 2400 ತಂಡ ರಚಿಸಲಾಗಿದೆ. ಮೇ 24 ಕ್ಕೆ ಕರ್ನಾಟಕ ವಿಧಾನಸಭೆಯ ಅವಧಿ ಮುಕ್ತಾಯವಾಗುತ್ತಿದೆ. ಚುನಾವಣೆ ನಡೆಯಲಿದೆ ಈ ಮೂಲಕ ಕರುನಾಡ ಜನತೆಯ ಕೌತುಕಕ್ಕೆ ತೆರೆ ಎಳೆದಿದೆ.