ಅಪ್ಪು ಆದರ್ಶವನ್ನು ಈ ಪೀಳಿಗೆಯ ಯುವಕರು ಬೆಳಸಿಕೊಳ್ಳಬೇಕು : ಎನ್.ಗೋವಿಂದರಾಜು

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ರವರ 48ನೇ ಹುಟ್ಟುಹಬ್ಬವನ್ನು ತುಮಕೂರು ನಗರದ  ಕುವೆಂಪು ವೃತ್ತದಲ್ಲಿರುವ ನಾಗರಕಟ್ಟೆಯ ಬಳಿ ಸ್ಥಳೀಯರಿಂದ ಪುನೀತ್‌ ರಾಜ್‌ ಕುಮಾರ್‌ ಆದರ್ಶದಂತೆ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ದಾಸೋಹವನ್ನು ಸಹ ಏರ್ಪಡಿಸಲಾಗಿತ್ತು.

 

 

 

 

 

 

ಇನ್ನು ಹುಟ್ಟು ಹಬ್ಬದ ಆಚರಣೆ ವೇಳೆ ತುಮಕೂರು ನಗರ ಜೆಡಿಎಸ್‌ ಪಕ್ಷದ ಆಕಾಂಕ್ಷಿ ಎನ್.ಗೋವಿಂದರಾಜುರವರು ಅಚಾನಕ್‌ ಆಗಿ ಆಗಮಿಸಿ, ಆಗಮಿಸಿದ್ದ ಸಾರ್ವಜನಿಕರಿಗೆ ತಮ್ಮ ಸ್ವ ಹಸ್ತದಿಂದ ದಾಸೋಹವನ್ನು ಉಪಚರಿಸಿ, ಆಗಮಿಸಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಈಗಿನ ಪೀಳಿಗೆಯವರು ಬರೀ ಮೊಬೈಲ್‌, ಇಂಟರ್‌ ನೆಟ್ ಉಪಯೋಗಿಸುತ್ತಾ ಬಹಳಷ್ಟು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿರುವುದು ನೋಡುತ್ತಿದ್ದೇವೆ, ಅದನ್ನು ಬಿಟ್ಟು ಸಾರ್ವಜನಿಕವಾಗಿ ಒಬ್ಬರಿಗೊಬ್ಬರು ಸಹಾಯ ಮಾಡುವುದು, ಬಡವರಿಗೆ, ಅಶಕ್ತರಿಗೆ ಅಭಯ ಹಸ್ತವಾಗಿ, ತಮಗೆ ಸಾಧ್ಯವಾದಷ್ಟು ಸಹಾಯ, ಸಹಕಾರ ಮಾಡಲು ಮುಂದಾಗಬೇಕು ಎಂದರು.

 

 

 

 

 

 

 

 

ಇನ್ನುಳಿದಂತೆ ಪುನೀತ್‌ ರಾಜ್‌ ಕುಮಾರ್‌ ರವರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಸಮಾಜ ಸೇವೆಯನ್ನು ಮಾಡಿದ್ದಾರೆ, ಆದರೆ ಅವರು ಮಾಡಿರುವ ಸಮಾಜ ಸೇವೆ ಅವರ ಅಗಲಿದ ನಂತರ ನಮ್ಮಗಳಿಗೆ ತಿಳಿದು ಬಂದಿದ್ದು ಎಂದರಲ್ಲದೇ, ಪ್ರಸ್ತುತದ ಜೀವನದಲ್ಲಿ ಹಲವಾರು ಮಂದಿ ತಾವು ಏನೂ ಮಾಡದೇ ಸಮಾಜ ಸೇವಕರು ಎಂದು ಹೇಳಿಕೊಂಡು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

 

 

 

 

 

 

ಹಾಗಾಗಿ ಇಂದಿನ ಯುವ ಪೀಳಿಗೆಯ ಯುವಕರು ಅಪ್ಪು ರವರ ಆದರ್ಶವನ್ನು ಮೈಗೂಡಿಸಿಕೊಂಡು, ಅವರ ಆಶಯಂದತೆ ನಡೆದರೆ ಮುಂದಿನ ಪೀಳಿಗೆಯವರೂ ಸಹ ಅದನ್ನು ಪಾಲಿಸುವರು ಎಂದು ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರುಗಳಾದ ಆರ್.ತನುಜ್‌ ಕುಮಾರ್‌, ಪ್ರಸನ್ನ ಕುಮಾರ್‌ (ಪಚ್ಚಿ), ಶ್ರೀನಿವಾಸ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!