ಅಟ್ಟಿಕಾ ಬಾಬುಗೆ ಕೈ ಕೊಟ್ಟ ತುಮಕೂರು ನಗರ ಕಾಂಗ್ರೆಸ್‌ ಟಿಕೇಟ್

ತುಮಕೂರು : 2023 ಸಾರ್ವತ್ರಿಕ ವಿಧಾನ ಸಭಾ ಚುನಾವಣೆ ಹಿನ್ನೆಲೆ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮುಖಂಡ ಅತಿಕ್ ಅಹಮದ್ ರವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈ ಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ.‌

 

 

 

ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಹಲವಾರು ಆಕಾಂಕ್ಷಿಗಳು ತೀವ್ರ ಪೈಪೋಟಿ ನಡೆಸಿದ್ದರು ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅತಿಕ್ ಅಹಮದ್ ಗೆ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿದೆ ಎಂದು ಎಐಸಿಸಿಯಿಂದ ಮಾಹಿತಿ ಲಭ್ಯವಾಗಿದೆ.

 

 

 

 

 

 

 

 

ಇನ್ನು ಹಲವಾರು ಕೋಟಿಗಳ ಸರದಾರ  ಆಟಿಕಾ ಗೋಲ್ಡ್ ಕಂಪನಿಯ ಮಾಲೀಕ ಬೊಮ್ಮನಹಳ್ಳಿ ಬಾಬು  @ ಅಟ್ಟಿಕಾ ಬಾಬು ಅವರು ತುಮಕೂರು ನಗರಕ್ಕೆ ಈಗಾಗಲೇ ತಾನು ಜೆಡಿಎಸ್‌ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡಿದರು, ಆದರೆ ಅವರ ಬದಲು ಎನ್.ಗೋವಿಂದರಾಜು ಅವರಿಗೆ ಜೆಡಿಎಸ್‌ ಟಿಕೇಟ್‌ ಘೋಷಣೆ ಆಯಿತು. ತದನಂತರ ಕೆಲ ದಿನಗಳು ತುಮಕೂರಿನಿಂದ ನಾಪತ್ತೆಯಾಗಿ ತಾನು ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿಯುವುದಾಗಿ ಹೇಳಿಕೊಂಡು ಹಲವಾರು ಕೋಟಿಗಳ ಹಣವನ್ನು ತುಮಕೂರಿನಲ್ಲಿ ಸುರಿದಿದ್ದಾರೆ ಎನ್ನಲಾಗಿದೆ, ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ಕುಕ್ಕರ್‌, ಸೀರೆ ಹಂಚಿಕೆ, ಯುಗಾದಿ ಹಬ್ಬದ ಕಿಟ್‌ ಗಳ ವಿತರಣೆ, ಹಲವಾರು ದೇವಸ್ಥಾನ, ಮಸೀದಿಗಳಿಗೆ ಲಕ್ಷಾಂತರ ರೂಪಾಯಿಗಳ ಧೇಣಿಗೆ, ಇನ್ನೂ ಮುಂದುವರೆದು ಕೆಲವು ಸಂಘ ಸಂಸ್ಥೆಗಳಿಂದ ಆಯೋಜಿಸಿದ್ದ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಧನ ಹೀಗೆ ನಾನಾ ವಿಧದಲ್ಲಿ ತಮ್ಮ ಬಂಡವಾಳವನ್ನು ಹೂಡಿದ್ದರು, ಆದರೆ ಅವೆಲ್ಲವೂ ಇದೀಗ ನಿಶ್ಪಪ್ರಯೋಜಕವಾಗಿದೆ ಎನ್ನಲಾಗಿದೆ.

 

 

 

 

 

 

 

ಇನ್ನುಳಿದಂತೆ ತುಮಕೂರು ನಗರ ಮಾಜಿ ಶಾಸಕ ರಫೀಕ್ ಅಹಮದ್, ಇಕ್ಬಾಲ್ ಅಹಮದ್, ಫರ್ಹಾನ ಬೇಗಂ ,ಶಶಿ ಹುಲಿಕುಂಟೆ ಸೇರಿದಂತೆ ಹಲವು ಮುಖಂಡರ  ಹೆಸರುಗಳು ಶಾಸಕ ಸ್ಥಾನದ ಅಭ್ಯರ್ಥಿಗಳ ರೇಸ್‌ ನಲ್ಲಿ ಕೇಳಿ ಬಂದಿತ್ತು ಆದರೆ ಕೊನೆ ಕ್ಷಣದಲ್ಲಿ ಅಚ್ಚರಿ ಎಂಬಂತೆ ಅತಿಕ್ ಅಹಮದ್ ರವರಿಗೆ ಟಿಕೆಟ್ ಲಭಿಸಿದೆ ಎಂದು ಕಾಂಗ್ರೆಸ್ ಪಕ್ಷದ  ಉನ್ನತ ಮೂಲಗಳಿಂದ ತಿಳಿದು ಬಂದಿದೆ.

 

 

 

 

 

 

 

 

 

 

ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಹಲವು ಕಾರ್ಯಕರ್ಮಗಳನ್ನ ನಿರ್ವಹಿಸಿದ ಕೀರ್ತಿ ಅತಿಕ್ ಅಹಮದ್ ರವರಿಗೆ  ಸಲ್ಲುತ್ತದೆ. ಇನ್ನು ತುಮಕೂರು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿದ್ದ ಅತಿಕ್ ರವರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನ ಜನತೆಗೆ ತಲುಪಿಸಲು ಪ್ರಮುಖ ಪಾತ್ರ ವಹಿಸಿದ್ದರು.

 

 

 

 

 

ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ರವರ ಆಪ್ತ ಬಣ್ಣದಲ್ಲಿ ಗುರುತಿಸಿಕೊಂಡಿದ್ದ ಅತಿಕ್ ಮಹಮ್ಮದ್ ರವರಿಗೆ dr ಜಿ. ಪರಮೇಶ್ವರ್, ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸಹ ಅತಿಕ್ ಅಹಮದ್ ಗೆ  ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ.

 

 

 

 

 

 

ಇನ್ನು ಅಧಿಕೃತವಾಗಿ ಯುಗಾದಿ ಹಬ್ಬದ ದಿನದಂದು ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ .

Leave a Reply

Your email address will not be published. Required fields are marked *

error: Content is protected !!