ವಿದ್ಯೋದಯ ಕಾನೂನು ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕ ತುಮಕೂರು,
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ , ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ತುಮಕೂರು, ಇವರುಗಳ ಸಹಯೋಗದೊಂದಿಗೆ ಅಮೃತ ಗ್ರಾಮ ಪಂಚಾಯಿತಿ ಯೋಜನೆ ಅಡಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಗಳ ಹಳ್ಳಿಯ ಜನರ ಕಾನೂನು ಅರಿವು ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಸೌಲಭ್ಯಗಳ ಮಾಹಿತಿ ಸಂಗ್ರಹಿಸುವ ಕಾರ್ಯಕ್ರಮವನ್ನು ತುಮಕೂರಿನ ಮೈದಾಳ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಲಾಯಿತು.
ಈ ಕಾರ್ಯಕ್ರಮವನ್ನು ತುಮಕೂರಿನ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಶ್ರೀಮತಿ. ನೂರುನ್ನೀಸ ಉದ್ಘಾಟಿಸಿ ಈ ರೀತಿ ಸರ್ಕಾರದ ಸೌಲಭ್ಯಗಳು ಹಾಗೂ ಕಾನೂನಿನ ಅರಿವು ಗ್ರಾಮೀಣ ಜನರಲ್ಲಿ ಯಾವ ಮಟ್ಟಿಗೆ ಇದೆ ಎಂಬುದನ್ನು ಅರಿಯಲು ಸರ್ಕಾರ ಕಾಲೇಜು ಎನ್ಎಸ್ಎಸ್ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿರುವುದು ತುಂಬಾ ಒಳ್ಳೆಯ ಮಾರ್ಗವಾಗಿದೆ ಈ ರೀತಿ ವಿದ್ಯಾರ್ಥಿಗಳು ಗ್ರಾಮೀಣ ಜನರ ಕಷ್ಟಗಳನ್ನು ಮತ್ತು ಕಾನೂನಿನ ಅರಿವಿನ ಬಗ್ಗೆ ನೇರವಾಗಿ ತಿಳಿಯಲು ಸಹಕಾರವಾಗಿದೆ ಎಂದು ತಿಳಿಸಿದರು.
ಈ ಒಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಾಲಾ ಮಂಜುನಾಥ್ ರವರು , ಮುಖ್ಯ ಅತಿಥಿಗಳಾಗಿ ಉಪಾಧ್ಯಕ್ಷರು ನರಸಿಂಹಮೂರ್ತಿ, ಪಿಡಿಒ ಶ್ರೀ ಮೋಹನ್, ಮೈದಾಳ ಗ್ರಾಮದ ವಕೀಲರಾದ ಶ್ರೀ ಕಿರಣ್ ರವರು, ಕಾಲೇಜು ಎನ್ಎಸ್ಎಸ್ ಕಾರ್ಯಕ್ರಮಾ ಅಧಿಕಾರಿಗಳಾದ ಡಾ. ಕಿಶೋರ್ ವಿ, ಶ್ರೀಮತಿ ರೂಪ, ಶ್ರೀಮತಿ ಪುಷ್ಪ, ಡಾ. ಮುದ್ದುರಾಜು, ಹಾಗೂ ಕಾನೂನು ಕಾಲೇಜಿನ ಎಲ್ಲಾ ಎನ್ಎಸ್ಎಸ್ ಸ್ವಯಂ ಸೇವಕರು ಭಾಗವಹಿಸಿ ಮೈದಾಳ ಗ್ರಾಮ ಪಂಚಾಯಿತಿಯ ಅಡಿಯಲ್ಲಿ ಬರುವ ಮೈದಾಳ ಹಾಗೂ ಮಾದಗೊಂಡನಹಳ್ಳಿ, ಕೊಂಡ ನಾಯಕನಹಳ್ಳಿ ಗ್ರಾಮದ ಕಾನೂನು ಅರಿವು ಮತ್ತು ಸರ್ಕಾರದ ಸೌಲಭ್ಯಗಳ ಕುರಿತು ಸಮೀಕ್ಷೆಯನ್ನು ಮಾಡಲಾಯಿತು.