ತುಮಕೂರು : ತುಮಕೂರಿನ ಶ್ರೀ ವೀರಭದ್ರೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ನಿರ್ವಿಘ್ನವಾಗಿ ನೇರವೇರಿತು.
ಈ ಸಭೆಯನ್ನು ಜ್ಞಾನ ಬುತ್ತಿ ಸತ್ಸಂಗದ ನಿರ್ದೇಶಕರಾದ
ಶ್ರೀ . ನಾಡಿಗ್ ರಾಘವೇಂದ್ರ ಪ್ರಸಾದ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ . ಮೋಹನ್ ಗೌಡ ಇವರು ಸಭೆಯ ಉದ್ಘಾಟನೆಯನ್ನು ಮಾಡಿದರು.
ಮೂರು ಸಾರಿ ರಾಮಸ್ಮರಣೆ ಮಾಡಿದರೆ 1 ಸಾವಿರ ಸಾರಿ ಸ್ಮರಣೆ ಮಾಡಿದ ಲಾಭ ಆಗುತ್ತದೆ – ಶ್ರೀ ನಾಡಿಗ್ ರಾಘವೇಂದ್ರ ಪ್ರಸಾದ್ , ಜ್ಞಾನ ಬುತ್ತಿ ಸತ್ಸಂಗದ ನಿರ್ದೇಶಕರು .
ನಮಗೆ ಹಿಂದೂ ಎನ್ನುವುದು ಜೀವನಶೈಲಿ ಆಗಬೇಕು ಆದರೆ ಅದು ಸದ್ಯದ ಸ್ಥಿತಿಯಲ್ಲಿ ಧರ್ಮದ ಗ್ರಂಥಕ್ಕೆ ಮಾತ್ರ ಸೀಮಿತವಾಗಿದೆ.
ಇದೇ ತರಹ ಬಸವಣ್ಣರ ವಚನಗಳ ಮೂಲಕ ಉದಾರಣೆಯನ್ನು ಕೊಡುತ್ತಾ ಎಲ್ಲ ಧರ್ಮ ಪ್ರೇಮಿಗಳಲ್ಲಿ ಧಾರ್ಮಿಕ ಮಹತ್ವ ವನ್ನು ಮೂಡಿಸುತ್ತಿದ್ದರು ಇಂದಿನ ಸಮಾಜದಲ್ಲಿ ಧರ್ಮಚರಣೆಯು ಅಭಾವವಿದೆ ಎಂದು ವಿಷಾದವನ್ನು ವ್ಯಕ್ತಪಡಿಸಿದರು.
ಹಿಂದೂಗಳೇ, 2025 ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ಇಂದಿನಿಂದಲೇ ಕೃತಿಶೀಲರಾಗಿ – ಹಿಂದೂ ಜನಜಾಗೃತಿ ಸಮಿತಿಯ ಶ್ರೀ . ಮೋಹನ್ ಗೌಡ
ಹಿಂದುತ್ವದ ವ್ಯಾಪಕ ಸಂಕಲ್ಪನೆ ಹೇಳುತ್ತಾ ನಮ್ಮ ಮೇರುತಂತ್ರವೆಂಬ ಧರ್ಮಗ್ರಂಥದಲ್ಲಿ ‘ಹೀನಂ ದೂಷಯತಿ ಇತಿ ಹಿಂದೂಃ’ ಈ ರೀತಿಯಲ್ಲಿ ಹಿಂದೂ ಶಬ್ದದ ವ್ಯಾಖ್ಯೆಯನ್ನು ನೀಡಲಾಗಿದೆ. ಇದರ ಅರ್ಥ, ಯಾರು ತನ್ನಲ್ಲಿನ ಹೀನ ಅಥವಾ ಕನಿಷ್ಠವಾದ ರಜ-ತಮ ಗುಣಗಳನ್ನು ನಾಶ ಮಾಡುತ್ತಾನೊ, ಅವನೇ ಹಿಂದೂ. ಆದರೆ ಇಂದು ದೇಶದಲ್ಲಿರುವ ಹಿಂದೂ ಗಳ ಮೇಲಿನ ಆಘಾತಗಳು ನಿಂತಿಲ್ಲ. ಅನೇಕ ಹಿಂದೂ ಯುವತಿಯರು ಲವ್ ಜಿಹಾದ್ ಗೆ ಬಳಿ ಆಗುತ್ತಿದ್ದಾರೆ ದೆಹಲಿಯ ಜಿಹಾದಿ ಅಪ್ತಾಭ್ ಹಿಂದೂ ಯುವತಿ ಶ್ರದ್ಧಾಳನ್ನು ಬರ್ಬರವಾಗಿ ಹತ್ಯೆ ಮಾಡಿದಂತೆ ರಾಜಗಯದಲ್ಲಿ ಸಹ ಹೆಚ್ಚು ಲವ್ ಜಿಹಾದ್ ಘಟನೆಗಳು ನಡೆಯುತ್ತಿದೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಇದ್ದರೂ ಸಹ ವ್ಯಾಪಕವಾಗಿ ಲವ್ ಜಿಹಾದ್’ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಘಟನೆಗಳು ಹೆಚ್ಚಾಗಿದೆ.ಹಲಾಲ್’ ಕೇವಲ ಧರ್ಮಕ್ಕೆ ಸಂಬಂಧಿಸಿರದೇ ಇಂದು ಇಸ್ಲಾಮಿ ಆರ್ಥಿಕ ವ್ಯವಸ್ಥೆಯಾಗುತ್ತಿದೆ. ಹಲಾಲ್ ಮೂಲಕ ವಿಶ್ವದ ಮೇಲೆ ಸಂಪೂರ್ಣ ನಿಯಂತ್ರಣ ಮಾಡುವ ಪ್ರಯತ್ನವಾಗಿದೆ. ಭಾರತದಲ್ಲಿ ಪರ್ಯಾಯ ಸಮಾನಾಂತರ ಅರ್ಥವ್ಯವಸ್ಥೆಯನ್ನು ನಿರ್ಮಾಣ ಮಾಡುವುದಾಗಿದೆ. ಮಾಂಸದಿಂದ ಪ್ರಾರಂಭವಾದ ಹಲಾಲ್ ಇಂದು ಔಷಧಿ, ಕಟ್ಟಡ, ಬಟ್ಟೆ, ಪ್ರವಾಸೊದ್ಯಮ, ಸ್ಟಾಕ್ ಮಾರ್ಕೆಟ್, ಹೀಗೆ ಎಲ್ಲ ಕ್ಷೇತ್ರವನ್ನು ವ್ಯಾಪಿಸಿದೆ.ಭಾರತದಲ್ಲಿ 4 ಲಕ್ಷ ಕೋಟಿ ಮಾಂಸದ ವ್ಯಾಪಾರದ ಮೇಲೆ ನಿಯಂತ್ರಣ ಸಾಧಿಸಲಾಗಿದೆ. ಭಾರತದಲ್ಲಿ FSSAI, FDA ನಂತರ ಪ್ರಮಾಣಪತ್ರ ನೀಡುವ ಸರಕಾರಿ ಸಂಸ್ಥೆಗಳು ಇರುವಾಗ ಪ್ರತ್ಯೇಕ ಮತದ ಆಧಾರದ ಮೇಲೆ ಪ್ರಮಾಣಪತ್ರ ನೀಡಿ, ಹಣ ಸಂಗ್ರಹ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರ ಹಣ ಭಯೋತ್ಪಾಧನಾ ಚಟುವಟಿಕೆಗಳಿಗೆ ಉಪಯೋಗ ಮಾಡಲಾಗುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಪುರುಷರ,ರಾಷ್ಟ್ರ ಮತ್ತು ಧರ್ಮರಕ್ಷಣೆಗೆ ಸಂಭಂದಿಸಿದ ಮತ್ತು ಧರ್ಮಶಿಕ್ಷಣದ ಮಾಹಿತಿ ಇರುವ ಫಲಕಗಳ ಪ್ರದರ್ಶನ ಮತ್ತು ಧರ್ಮಾಚರಣೆ,ಆಧ್ಯಾತ್ಮ ,
ಆಯುರ್ವೇದಕ್ಕೆ ಸಂಭಂದಿಸಿದ ಗ್ರಂಥಗಳು ಮತ್ತು ದಿನನಿತ್ಯ ಬಳಸುವ ಸಾತ್ವಿಕ ಉತ್ಪಾದನೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.