ಯುಗಾದಿ ಹಬ್ಬಕ್ಕಾಗಿ ತಯಾರು ಆಗ್ತಾ ಇದೆ ಅಟ್ಟಿಕಾ ಫುಡ್‌ ಕಿಟ್‌ !!!!!

ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯ ಹಿನ್ನಲೆಯಲ್ಲಿ ಎಲ್ಲಾ ಪಕ್ಷಗಳು ಜನರನ್ನು ನಾನಾ ರೀತಿಯಲ್ಲಿ ಮನ ಓಲೈಸಲು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿದ್ದಾರೆ, ಅದರಂತೆಯೇ ತುಮಕೂರು ನಗರದಿಂದ ಯಾವ ಪಕ್ಷದಿಂದ ತಾನು ನಿಲ್ಲುತ್ತಿದ್ದೇನೆಂದು ಜನರಿಗೆ ಸ್ಪಷ್ಟವಾಗಿ ಹೇಳದೇ ತಮ್ಮ ಚುನಾವಣೆಯ ಅಬ್ಬರದ ಪ್ರಚಾರವನ್ನು ಆರಂಭಿಸಿರುವ ಬಹುಕೋಟಿಗಳ ಸರದಾರ, ಅಟ್ಟಿಕಾ ಬಾಬು @ ಬೊಮ್ಮನಹಳ್ಳಿ ಬಾಬು.

 

 

 

 

 

ತುಮಕೂರಿನ ತಮ್ಮ ನಿವಾಸದ ಬಳಿ ಬೃಹತ್‌ ಫುಡ್‌ ಕಿಟ್‌ ಗಳನ್ನು ತಯಾರು ಮಾಡುತ್ತಿದ್ದಾರೆ, ಏಕೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಯುಗದಿ ಹಬ್ಬವು ಬರಲಿದ್ದ, ಜನರಿಗೆ ಹಂಚಲೆಂದೇ ಗೋಧಿ ಹಿಟ್ಟು, ಅಕ್ಕಿ, ಸಕ್ಕರೆ, ಬೆಲ್ಲ, ಸಾಂಬಾರು ಪದಾರ್ಥ, ಇನ್ನಿತರೆ ದಿನಸಿ ಸಾಮಾಗ್ರಿಗಳನ್ನು ಒಳಗೊಂಡಿರುವ ಫುಡ್‌ ಕಿಟ್‌ ಗಳು ತಯಾರು ಆಗುತ್ತಿವೆ.

 

 

 

 

 

ಇನ್ನು ಈಗಷ್ಟೇ ಅಟ್ಟಿಕಾ ಬಾಬು ಕುಕ್ಕರ್‌ ಮತ್ತು ಸೀರೆಗಳನ್ನು ಹಂಚಿ, ಕೆಲವರಿಗೆ ಹಂಚದೇ ಶಾಪ ಹಾಕಿಸಿಕೊಂಡಿರುವ ಉದಾಹರಣೆಗಳೂ ಇವೆ, ಅದರ ಬೆನ್ನಲ್ಲಿಯೇ ಇದೀಗ ಫುಡ್‌ ಕಿಟ್‌ ಗಳನ್ನು ರೆಡಿ ಮಾಡಿಸುತ್ತಿದ್ದು, ಇದು ತುಮಕೂರು ನಗರ ಕ್ಷೇತ್ರದ ಪ್ರತಿಯೊಂದು ಮನೆಗೆ ತಲುಪಿಸುವ ಸದುದ್ದೇಶವನ್ನು ಅವರು ಹೊಂದಿದ್ದಾರೆ ಎನ್ನಲಾಗಿದೆ.

 

 

 

 

 

ಆದರೆ ಅವರ ಮನಸ್ಸನ್ನು ಬದಲಾಯಿಸಿ, ಅವರ ಕೆಲ ಹಿಂಬಾಲಕರು ಪ್ರಯತ್ನಿಸುತ್ತಿದ್ದು, ಅವರ ಮನೆಯ ಬಳಿಯೇ ಸರಥಿ ಸಾಲಿನಲ್ಲಿ ಲೈನ್‌ ಮಾಡಿಸಿ, ಜನರನ್ನು ಬೆಳಿಗ್ಗೆಯಿಂದ ಸಂಜೆ ವರೆಗೂ ಬಿರು ಬಿಸಿಲಿನಲ್ಲಿ ಕಾಯಿಸಿ,  ಕಾಯಿಸಿ ಕೋಡೋಣ ಬಿಡಿ ಎಂದು ಕಿವಿ ಚುಚ್ಚುತ್ತಿದ್ದಾರೆಂಬ ಗುಸು ಗುಸು ಅವರ ಮನೆಯ ಹತ್ತಿರದಲ್ಲೇ ಕೇಳಿ ಬರುತ್ತಿದೆ.

 

 

 

 

 

 

ಯಾವುದು ಏನೇ ಇರಲಿ, ಜನರನ್ನು ಸೆಳೆಯಲು ನಾನಾ ರೀತಿಯ ಕಸರತ್ತುಗಳನ್ನು ರಾಜಕೀಯ ಪಕ್ಷದವರು ಮಾಡುತ್ತಿರುವ ಇಂತಹ ಸಂದರ್ಭಗಳಲ್ಲಿ ಜನರ ಹೊಟ್ಟೆಯನ್ನು ತುಂಬಿಸುವಂತಹ ಫುಡ್‌ ಕಿಟ್‌ ಗಳನ್ನು ನೀಡುತ್ತಿರುವುದು ಒಳ್ಳೆಯ ಸಂಗತಿಯೂ ಹೌದಲ್ಲವೇ!!!!

 

 

 

 

 

 

 

ಸಾರ್ವಜನಿಕರ ಒಳತಿಗಾಗಿ, ಹಬ್ಬದ ಉಡುಗೊರೆಯಾಗಿ ಫುಡ್‌ ಕಿಟ್‌ ಗಳೇನೋ ರೆಡಿ ಆಗುತ್ತಿವೆ, ಆದರೆ ಅಟ್ಟಿಕಾ ಬಾಬು ಅವರ ಕೆಲ ಹಿಂಬಾಲಕರು ಇಲಿ, ಹೆಗ್ಗಣಗಳಂತೆ ಫುಡ್‌ ಕಿಟ್‌ ಗಳನ್ನು ಮಾಯ ಮಾಡಲು ಹೊಂಚು ಹಾಕಿ ಕೂತಿದ್ದಾರೆಂಬ ವಿಷಯವೂ ಅಷ್ಟೇ ಸತ್ಯವಾಗಿದೆ.

 

 

 

 

 

 

ಏಕೆಂದರೆ ಆ ಫುಡ್‌ ಕಿಟ್‌ ಗಳು ಒಂದು ಮನೆಗೆ ಸಾಮಾನ್ಯವಾಗಿ 15 ದಿನಗಳಿಗೆ ಬೇಕಾಗುವಷ್ಟು ರೇಷನ್‌ ಇರುತ್ತದೆಂಬ ಮಾಹಿತಿ ಇದೆ, ಅದೇ ಅವರ ಹಿಂಬಾಲಕರು ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯದರೇ ಕನಿಷ್ಠ 6 ತಿಂಗಳು ಕುಳಿತು ತಿನ್ನಬಹುದಲ್ಲವೇ ಎಂಬ ದುರಾಲೋಚನೆ ಅವರ ಕೆಲ ಹಿಂಬಾಲಕರಲ್ಲಿ ಮೂಡಿದೆಂದು, ಅಟ್ಟಿಕಾ ಬಾಬು ಮನೆಯ ಸಮೀಪದಲ್ಲೇ ಕೆಲ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.

Leave a Reply

Your email address will not be published. Required fields are marked *

error: Content is protected !!