ಮಾತಿನ ಮನೆಯ ಆವರಣದಲ್ಲಿ ಮೌನ ತರಂಗ ಹಾಗೂ ಅಕ್ಷರ ಸಿಂಚನ ಎರಡು ಕೃತಿಗಳ ಬಿಡುಗಡೆ

ಬೆಂಗಳೂರು:    ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ತಮ್ಮ ಬರಹಗಳನ್ನು ಕೇವಲ ಮನೆಗೆ ಸೀಮಿತವಾಗಿರದೆ, ಹೊರಗಿನ ಪ್ರಪಂಚದ ಆಗು-ಹೋಗುಗಳ ಮೇಲೆ ಹೆಚ್ಚು ಹೆಚ್ಚು ಕೃತಿಗಳನ್ನು ರಚಿಸಬೇಕು. ಸ್ತ್ರೀ ಸ್ವಾತಂತ್ರ್ಯ ಇನ್ನೂ ಹಲವು ರಂಗಗಳಲ್ಲಿ ಮರೀಚಿಕೆಯಾಗಿದೆ. ಮಹಿಳಾ ದಿನಾಚರಣೆ ಬರೀ ಆಚರಣೆಗೆ ಸೀಮಿತವಾಗದೆ ನಿಜ ಅರ್ಥದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶಗಳು ಒದಗಬೇಕು ಈ ನಿಟ್ಟಿನಲ್ಲಿ ಮಹಿಳಾ ಲೇಖಕಿಯರು ಬರಹಗಳನ್ನು ರಚಿಸಬೇಕು ಎಂದು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬೈರಮಂಗಲ ರಾಮೇಗೌಡರವರು ತಿಳಿಸಿದರು.

 

 

 

 

 

ಬೆಂಗಳೂರಿನ ಚಾಮರಾಜಪೇಟೆಯ ೫ನೇ ತಿರುವು, ೬ನೇ ಮುಖ್ಯರಸ್ತೆಯ ಶ್ರೀಕುಟೀರದ ಮಾತಿನ ಮನೆಯಲ್ಲಿ ಮೌನ ತರಂಗ ಕಥಾ ಸಂಕಲನದ ಅಕ್ಷರ ಸಿಂಚನ ಲೇಖನದ ಸಂಕಲನದ ಶ್ರೀಮತಿ ಮಾನಸ ಕೆ.ಕೆ.ರವರ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ರಾ.ಸು. ವೆಂಕಟೇಶ್‌ರವರು ಲೋಕಾರ್ಪಣೆಯನ್ನು ಮಾರ್ಚ್ ೫ ರಂದು ಹಮ್ಮಿಕೊಳ್ಳಲಾಗಿತ್ತು.

 

 

 

 

 

 

 

ಈ ಕಾರ್ಯಕ್ರಮದಲ್ಲಿ ಲೇಖಕಿಯಾದ ಮಾನಸ ಕೆ.ಕೆ.ರವರು ಮಾತನಾಡುತ್ತಾ ಕಥೆಗಳ ಮೂಲಕ ಸಮಾಜದಲ್ಲಿ ಒಂದಿಷ್ಟು ಬದಲಾವಣೆಯನ್ನು ಮೂಡಿಸುವ ನಿಟ್ಟಿನಲ್ಲಿ ಬರೆಯಬೇಕು. ಲೇಖನಗಳು ಮಾನವೀಯ ಗುಣಗಳನ್ನು ಪ್ರತಿಯೊಬ್ಬರಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಯಶೋಧಾ ಮತ್ತು ರಾ.ಸು.ವೆಂಕಟೇಶ್‌ರವರು ಮಾತನಾಡುತ್ತಾ ಬರೀ ಕಲ್ಪನೆಯ ಕಥೆಗಳನ್ನು ಬರೆಯದೇ ನೈಜ ಬದುಕಿನ ಅನುಭವಗಳನ್ನು ಬರೆದಾಗ ಮಾತ್ರ ಓದುಗರಿಗೆ ನಾವು ಹತ್ತಿರವಾಗುತ್ತೇವೆ ಎಂದು ತಿಳಿಸಿದರು.

 

 

 

 

 

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಸಂಸ್ಕೃತಿ ವೇದಿಕೆ ಹಾಗೂ ಕನ್ನಡಪರ ಚಿಂತಕರು ಸಂಸ್ಥಾಪಕ ಅಧ್ಯಕ್ಷರಾದ ಆರ್.ಸದಾಶಿವಯ್ಯ ಜರಗನಹಳ್ಳಿರವರು ಮಾತನಾಡುತ್ತಾ ಈ ಎರಡು ಕೃತಿಗಳು ಅತ್ಯುತ್ತಮ ಕೃತಿಗಳಿಂದ ಲೋಕೋರ್ಪಣೆಗೊಂಡಿದೆ ಇತಂಹ ಕೃತಿಗಳು ಹೆಚ್ಚು ಹೆಚ್ಚು ಮೂಡಲಿ ಎಂದು ಹಾರೈಸಿದ್ದರು. ಈ ಪುಸ್ತಕ ಪರಿಚಯವನ್ನು ಮೌನ ತರಂಗ ಪುಸ್ತಕವನ್ನು ಶ್ರೀಮತಿ ಡಿ.ಯಶೋಧಾ, ಅಕ್ಷರ ಸಿಂಚನ ಪುಸ್ತಕವನ್ನು ರಾ.ಸು.ವೆಂಕಟೇಶ್‌ರವರು ಪರಿಚಯಿಸಿದ್ದರು. ಕಾರ್ಯಕ್ರಮದಲ್ಲಿ ಮಾನಸ ಕೆ.ಕೆ., ಆರ್.ಶ್ರೀನಿವಾಸ್, ಡಿ. ಯಶೋಧಾ, ರಾ.ಸು.ವೆಂಕಟೇಶ ಮುಂತಾದ ಲೇಖಕಿಯರು, ಸಾಹಿತ್ಯಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ನಾಡಗೀತೆಯನ್ನು ಎಂ.ಗೌರಮ್ಮ, ಕು.ಸಹನಾ ಕೆ.ಆರ್‌ರವರು ಪ್ರಾರ್ಥಿಸಿದ್ದರು, ಶ್ರೀಕಾಂತ್ ಪತ್ರೆಮರರವರು ಸ್ವಾಗತಿಸಿದ್ದರು, ಪದ್ಮಲತಾ ಮೋಹನ್‌ರವರು ನಿರೂಪಿಸಿದ್ದರು, ವಂದನಾರ್ಪಣೆಯನ್ನು ಸುಜಾತ ವಿಶ್ವನಾಥ್‌ರವರು ವಂದಿಸಿದರು.

Leave a Reply

Your email address will not be published. Required fields are marked *

error: Content is protected !!