ತುಮಕೂರು: ಮುಂಬರುತ್ತಿರುವ 2023 ಸಾರ್ವತ್ರಿಕ ಚುನಾವಣೆಯಲ್ಲಿ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಸಂಬಂಧ ಜೆಡಿಎಸ್ ಪಕ್ಷದಿಂದ ಕನ್ನಡಪರ ಹೋರಾಟಗಾರ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಮುಖಂಡರಾದ ದನಿಯ ಕುಮಾರ್ ಅವರಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಬೇಕೆಂದು ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.
ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು ಅದರಲ್ಲಿ ಆರು ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಕನ್ನಡಪರ ಸಂಘಟನೆಗಳ ಹೋರಾಟದ ಮುಖಂಡರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದು ಅದರಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದಿಂದ ಧನಿಯಾ ಕುಮಾರ್ ರವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ ಈಗಾಗಲೇ ಜೆ.ಡಿ.ಎಸ್. ಪಕ್ಷದಿಂದ ಎನ್.ಗೋವಿಂದರಾಜುರವರ ಹೆಸರನ್ನು ಈಗಾಗಲೇ ಶಾಸಕ ಸ್ಥಾನದ ಅಭ್ಯರ್ಥಿ ಎಂದು ಘೋಷಿಸಲಾಗಿದೆ, ಆದರೂ ಸಹ ಕುಮಾರಸ್ವಾಮಿಯವರು ಕನ್ನಡಪರ ಹೋರಾಟಗಾರರಿಗೆ ಟಿಕೇಟ್ ನೀಡಲಾಗುವುದು ಎಂದು ಬಹಿರಂಗ ಹೇಳಿಕೆ ನೀಡಿರುವುದರಿಂದ ಈ ಅಹ್ವಾಲನ್ನು ಸಲ್ಲಿಸುತ್ತಿದ್ದೇವೆಂದು ತಿಳಿಸಿದರು.
ಈ ಬಗ್ಗೆ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಇದುವರೆಗೂ ಕನ್ನಡದ ನಾಡು ನುಡಿ ಸಂಬಂಧ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಜನಸ್ನೇಹಿ ವ್ಯಕ್ತಿಯಾಗಿರುವ ಧನಿಯ ಕುಮಾರ್ ಅವರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ಕನ್ನಡ ಪರ ಸಂಘಟನೆಗಳ ಹೋರಾಟಗಾರ ವೆಂಕಟಚಲ ತಿಳಿಸಿದ್ದಾರೆ.
ಮತ್ತೋರ್ವ ಮುಖಂಡ ಜಯಪುರ ನಾಗೇಶ್ ಮಾತನಾಡಿ ಕನ್ನಡ ನಾಡು ನುಡಿಗೆ ದಕ್ಕೆಯಾದ ಸಂದರ್ಭದಲ್ಲಿ ಬೃಹತ್ ಯುವಕರ ಪಡೆಯನ್ನ ಕಟ್ಟಿ ಹಲವು ಹೋರಾಟ ಮಾಡಿರುವ ದನಿಯ ಕುಮಾರ್ ಅವರಂತಹ ಉತ್ತಮ ವ್ಯಕ್ತಿಗೆ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ ಅವರು ಇದುವರೆಗೂ ರಾಜ್ಯದಲ್ಲಿ ಕನ್ನಡಪರ ಹೋರಾಟಗಳಲ್ಲಿ ಭಾಗಿಯಾದ ಮುಖಂಡರು ಕಾರ್ಯಕರ್ತರ ಮೇಲೆ ಹಾಕಿರುವ ಕೇಸ್ ಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ನೇತಾಜಿ ಶ್ರೀಧರ್, ಪ್ರಸನ್ನ (ಪಚ್ಚಿ), ನಯಾಜ್, ಮಹೇಶ್, ಚಕ್ರವರ್ತಿ ಪ್ರಕಾಶ್,ವಿಠ್ಠಲ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು