ನಮ್ಮಲ್ಲಿ ಹಲವು ಜನರು ಬಾಯಾರಿಕೆಯಾದಾಗ ಶುದ್ಧವಾದ ನೀರಿನ ಬದಲು ಕೂಲ್ ಡ್ರಿಂಕ್ಸ್, ಹಣ್ಣಿನ ರಸ, ಟೀ ಅಥವಾ ಕಾಫಿ ಕುಡಿಯುತ್ತಾರೆ. ಅವುಗಳು ಬಾಯಾರಿಕೆಯನ್ನು ತಣಿಸಬಹುದು ಆದರೆ ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ.
ಅದರಲ್ಲೂ ತೂಕ ಇಳಿಸಿಕೊಳ್ಳಲು ಡಯಟ್ ಮಾಡುವವರು ನೀರನ್ನು ಬಿಟ್ಟು ಬೇರೆ ಯಾವುದೇ ರೀತಿಯ ಜ್ಯೂಸ್ ಅಥವಾ ಕೂಲ್ ಡ್ರಿಂಕ್ಸ್ ಕುಡಿಯಬಾರದು. ಈ ರೀತಿಯ ವಸ್ತುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯು ಇರುವ ಕಾರಣ, ತೂಕ ಹೆಚ್ಚಾಗುವ ಸಾಧ್ಯತೆಗಳಿವೆ.
ತಂಪು ಪಾನೀಯಗಳು ಮತ್ತು ಬಿಸಿ ಪಾನೀಯಗಳ ಬದಲಿಗೆ ಸಾಕಷ್ಟು ನೀರು ಕುಡಿಯುವ ಜನರು ಸಾಮಾನ್ಯವಾಗಿ ಸಾಧಾರಣ ತೂಕವನ್ನು ಹೊಂದಿರುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಬಾಯಾರಿಕೆಯಾಗುವ ಮೊದಲು ನಮ್ಮ ದೇಹದಲ್ಲಿನ ನೀರಿನಂಶವು ಸಾಕಷ್ಟು ಕಡಿಮೆಯಾಗುತ್ತದೆ.
ಬಾಯಾರಿಕೆಯಾದಾಗ ಕುಡಿಯುವ ನೀರಿನ ಬದಲು ಕೂಲ್ ಡ್ರಿಂಕ್ಸ್ ತೆಗೆದುಕೊಳ್ಳುವುದರಿಂದ ನೀರಿನ ಅಂಶ ಹಚ್ಚುತ್ತದೆ. ಅದೇ ಸಮಯದಲ್ಲಿ ಸಕ್ಕರೆಯ ಪ್ರಮಾಣವು ಮಹತ್ತರವಾಗಿ ಹೆಚ್ಚಾಗುತ್ತದೆ. ಮಲಬದ್ಧತೆ ಮತ್ತು ಇತರ ಸಮಸ್ಯೆಗಳ ಸಾಧ್ಯತೆಗಳಿವೆ. ಆದ್ದರಿಂದಲೇ ಹೆಚ್ಚು ನೀರು ಕುಡಿಯುವವರಿಗೆ ಹೃದಯಾಘಾತವಾಗುವ ಸಾಧ್ಯತೆ ಕಡಿಮೆ.
ಅಲ್ಲದೆ ಮಲಬದ್ಧತೆ, ರಕ್ತದೊತ್ತಡ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವುದರಿಂದ, ಬಾಯಾರಿಕೆಯಾದಾಗ ನೀರು ಕುಡಿಯುವುದು ಉತ್ತಮ. ನಿತ್ಯವೂ ಕೂಲ್ ಡ್ರಿಂಕ್ಸ್ ಕುಡಿಯುವವರು ತೂಕ ಹೆಚ್ಚಾಗುವುದು ಖಚಿತ. ತೂಕ ಇಳಿಸಿಕೊಳ್ಳಲು ಬಯಸುವವರು ತಂಪು ಪಾನೀಯಗಳಿಂದ ದೂರವಿರಬೇಕು.