ಕೊರಟಗೆರೆಗೆ ಶಾಸಕನಾಗಿ ತಾನು ಏನು ಮಾಡಿರುವೆ ಎಂಬುದನ್ನು ಜನರ ಮುಂದಿಟ್ಟ ಡಾ. ಜಿ.ಪರಮೇಶ್ವರ

ಕೊರಟಗೆರೆ : ಕೊರಟಗೆರೆ ಕ್ಷೇತ್ರದಿಂದ ನನ್ನನ್ನು ಆರಿಸಿ ಕಳುಹಿಸಿದ ಜನರಿಗೆ ಕಳೆದ 5 ವರ್ಷಗಳಲ್ಲಿ ನನ್ನ ಅಭಿವೃದ್ದಿ ಕೆಲಸಗಳ ಜನಪರ ಸಾಧನೆಯ ಕೈಪಿಡಿ “ಹೆಚ್ಚೆಗುರುತು” ಪುಸ್ತಕವನ್ನು ಮನೆ ಮನೆಗೂ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ,.ಪರಮೇಶ್ವರ ತಿಳಿಸಿದರು.

 

 

 

 

ಅವರು ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೊರಟಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ 5 ವರ್ಷಗಳಲ್ಲಿ ಮಾಡಿರುವ 2573.68 ಕೋಟಿ ರೂಗಳ ಅಭಿವೃದ್ದಿ ಕಾಮಗಾರಿಗಳ ಮಾಹಿತಿ “ಹೆಚ್ಚೆಗುರುತು” ಪುಸ್ತಕ ಬಿಡುಗಡೆ ಮಾಡಿ ಮಾಹಿತಿ ನೀಡಿ ಮಾತನಾಡಿ ಕೊರಟಗೆರೆ ಕ್ಷೇತ್ರದ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿದ್ದೇನೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಗ್ರಾಮಗಳ ಅಗತ್ಯಕ್ಕೆ ತಕ್ಕಂತೆ ಆದ್ಯತೆ ಮೇರೆಗೆ ಕೆಲಸಮಾಡಿದ್ದೇನೆ, ಕ್ಷೇತ್ರದ ಅಭಿವೃಧ್ದಿಗೆ ನನ್ನದೇ ಕಲ್ಪನೆ ರೀತಿಯಲ್ಲಿ ಸೇವೆ ಸಲ್ಲಿಸಿದ್ದೇನೆ, ಆದರೂ ಕೆಲ ವಿರೋಧ ಪಕ್ಷದವರು, ನನ್ನನ್ನು ದ್ವೇಶಿಸುವರು ಈಗಲೂ ಹೈಫೈ ರಾಜಕಾರಣಿ ಎಂದು ಅಪಪ್ರಚಾರ ಮಾಡುತ್ತಾರೆ, ಆದರೆ ರಾಜ್ಯದಲ್ಲಿಯೇ ಸಾಮಾನ್ಯ ವ್ಯಕ್ತಿ ಹಾಗೂ ಜನ ಪ್ರತಿನಿಧಿಯಾಗಿ ನನ್ನ ಕ್ಷೇತ್ರದ ಜನತೆಯ ಜೊತೆಗಿದ್ದೇನೆ, ಜನರಿಗೆ ನನ್ನ ವ್ಯಕ್ತಿತ್ವದ ಸಂಪೂರ್ಣ ಅರಿವಿದೆ, ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಹೆಚ್ಚಿನ ಪ್ರತಿನಿದ್ಯವಾಗಿ ಶೈಕ್ಷಣಿಕ, ಆರೋಗ್ಯಕೇಂದ್ರಗಳು, ನೀರಾವರಿ ಯೋಜನೆಗಳಿಗೆ ಸೇರಿದಂತೆ ಬಹುತೇಕ ಕೆಲಸಗಳು ಜನರ ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ, ಇದನ್ನು ಜನರಿಗೆ ತಲುಪಿಸಿ ವಿರೋದಿಗಳಿಗೆ ಬಾಯಿ ಮುಚ್ಚಿಸಿ ಮುಂಬರುವ ಚುನಾವಣೆಯಲ್ಲಿ ಸಾಧನೆಗೆ ಮತ ನೀಡಿ ಸಾಧಿಸೋಣ ಜೊತೆಗೂಡಿ ಎಂಬ ದ್ಯೇಯವಾಕ್ಯದೊಂದಿಗೆ ಮುಂದಿನ ಚುನಾವಣೆಯನ್ನು ಎದುರಿಸುತ್ತೇನೆ ಎಂದರು.

 

 

 

 

ನಾನು ನನ್ನ ರಾಜಕೀಯ ಜೀವನದಲ್ಲಿ ವಿವಿಧ ಮಂತ್ರಿ ಪದವಿಗಳನ್ನು ಪಡೆದು ಸೇವೆ ಮಾಡಿದ್ದು, ಮಧುಗಿರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ಘೋಷಿಸಿದ್ದೆ, ತುಮಕೂರು ಜಿಲ್ಲೆಗೆ ವಿಶ್ವವಿದ್ಯಾನಿಲಯವನ್ನು ಮೂಂಜೂರು ಮಾಡಿಸಿದೆ, ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ಅತ್ಯದುನಿಕ ನವೀಕರಣ ಗೊಳಿಸಲು ವಿಶೇಷ ಹಣ ಮಂಜೂರು ಮಾಡಿಲಾಗಿದೆ, ಸ್ಮಾಟ್ ಸಿಟಿ ಯೋಜನೆಗೆ ಒತ್ತಾಯ ಮಾಡಿ ಪ್ರಾರಂಭಗೊಳಿಸಿ ತುಮಕೂರು ಜಿಲ್ಲೆಗೆ ಹಲವು ಅಭಿವೃಧ್ದಿ ಕೆಲಸಗಳನ್ನು ಮಾಡಿದ್ದೇನೆ ಹಾಗೂ ಕೊರಟಗೆರೆ ಕ್ಷೇತ್ರದಲ್ಲೂ ಸಹ ನೂರಾರು ಕೋಟಿ ರೂಗಳ ಏಕರೂಪದ ಶಾಶ್ವತ ಬೃಹತ್ ಕಾಮಗಾರಿಗಳನ್ನು ಮಾಡಲಾಗಿದೆ, ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿ ಅನುದಾನ ನೀಡುವುದರೊಂದಿಗೆ ಕೊರಟಗೆರೆ ತಾಲೂಕಿನ ರೈತರಿಗೆ ಸಮಭಾಗದ ಪರಿಹಾರಕ್ಕಾಗಿ ಈಗಲೂ ಹೋರಾಟ ಮಾಡುತ್ತಿದ್ದು ಜನಪರ ಕೆಲಸ, ಸೇವೆ ಹಾಗೂ ಹೋರಾಟವನ್ನು ನಿರಂತರವಾಗಿ ಮುಂದುವರೆಸುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!