ಕುಣಿಗಲ್ ತಾಲೂಕು, ತರೀಕೆರೆ ಬಳಿ ನಡೆಯುತ್ತಿರುವ ಕ್ರಷರ್ ಗಳ ನೈಜತೆಯನ್ನು ಪರಿಶೀಲನೆಗಾಗಿ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳ ಪರಿವೀಕ್ಷಣೆ ವೇಳೆ ಅಧಿಕಾರಿಗಳ ಮುಂದೆ ಗುಬ್ಬಿ ತಾಲ್ಲೂಕು ಜೆಡಿಎಸ್ ಪಕ್ಷದ ಶಾಸಕ ಅಭ್ಯರ್ಥಿ ಎನ್ನಲಾದ ಬಿ.ಎಸ್.ನಾಗರಾಜುರವರು ಸ್ಥಳೀಯವಾಗಿ ವಿಡಿಯೋ ಮಾಡುತ್ತಿದ್ದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕಾರ್ಯಕರ್ತರೊಂದಿಗೆ ಅಸಭ್ಯವಾಗಿ ಮಾತನಾಡಿರುವ ಹಾಗೂ ಗೂಂಡಾ ರೀತಿಯಲ್ಲಿ ವರ್ತಿಸಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
ಬಿಚ್ಛಪ್ಪ ವಿಡಿಯೋ ಮಾಡ್ಕೊಳ್ಳಿ ಅಂದ ಗುಬ್ಬಿ ಜೆಡಿಎಸ್ ಎಂಎಲ್ಎ ಕ್ಯಾಂಡಿಡೇಟ್
ಸ್ಥಳೀಯ ಅಧಿಕಾರಿಗಳು ಕ್ರಷರ್ ಗಳನ್ನು ಸರ್ವೆ ಮಾಡುವ ಸಮಯದಲ್ಲಿ ವಿಡಿಯೋ ಚಿತ್ರೀಕರಿಸುತ್ತಿದ್ದವರ ಮೇಲೆ ಆಕ್ರೋಶ ಹೊರ ಹಾಕಿರುವ ಗುಬ್ಬಿ ನಾಗರಾಜುರವರು ಬಾಯಿಗೆ ಬಂದಂತೆ ಮಾತನಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇನ್ನು ಗುಬ್ಬಿ ಜೆಡಿಎಸ್ ಮುಖಂಡ ನಾಗರಾಜು ಮಾತನಾಡಿರುವ ವಿಡಿಯೋವನ್ನು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ವೇದಿಕೆ ಯ ಫೇಸ್ಬುಕ್ ಪೇಜ್‌ನಲ್ಲಿ ಅಪ್ಲೋಡ್ ಮಾಡಲಾಗಿದ್ದು ಆ ವಿಡಿಯೋ ಇದೀಗ ಎಲ್ಲಡೆ ಹರಿದಾಡುತ್ತಿದೆ.
ಇನ್ನು ಸ್ಥಳೀಯ ಅಧಿಕಾರಿಗಳ ಮುಂದೆ ಈ ರೀತಿಯಾಗಿ ವರ್ತಿಸಿರುವ ನಾಗರಾಜ್ ರವರು ಮುಂದೆ ತಾಲ್ಲೂಕಿನ ಜನಪ್ರತಿನಿಧಿಯಾದರೆ ಜನರ ಬಳಿ ಯಾವ ರೀತಿಯಾದ ವರ್ತನೆ ಮಾಡುತ್ತಾರೆಂಬುದು ಸಾರ್ವಜನಿಕರ ಚಿಂತೆಯಾಗಿದೆ. ಸಮಾಜದಲ್ಲಿ ಉನ್ನತ ಸ್ಥಾನ, ಪದವಿಯಲ್ಲಿರುವವರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ ಎಂಬ ಕೂಗು ಬಹು ಜನರಲ್ಲಿ ಕಾಡುತ್ತಿರುವ ಈ ಹಿನ್ನಲೆಯಲ್ಲಿಯೇ ಈ ರೀತಿಯಾಗಿ ಸುದ್ಧಿಯಾಗಿರುವ ಶಾಸಕ ಅಭ್ಯರ್ಥಿಯ ಮುಂದಿನ ಭವಿಷ್ಯ ಏನಾಗಲಿದೆ ಎನ್ನುವ ಹಸಿ ಬಿಸಿ ಚರ್ಚೆ ಜನರಲ್ಲಿ ಮೂಡಿದೆ.
ಏಕೆಂದರೆ ಪ್ರಸ್ತುತದ ದಿನಗಳಲ್ಲಿ ಅಧಿಕಾರಿಗಳು ಮೊದಲ್ಗೊಂಡು, ಜನಪ್ರತಿನಿಧಿಗಳು ಸಾಮಾನ್ಯ ಜನರೊಂದಿಗೆ ಬೆರೆಯುವುದು ಅತೀ ವಿರಳ, ಅಂತಹದರಲ್ಲಿ ಕೆಲವು ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ಇದ್ದಾಗ ಈ ರೀತಿಯಾದ ಗೂಂಡಾ ವರ್ತನೆ, ಅಸಭ್ಯ ವರ್ತನೆ, ದರ್ಪ ದೋರಣೆ ಮಾಡುತ್ತಿದ್ದರೆ ಯಾರನ್ನು ಆಯ್ಕೆ ಮಾಡಬೇಕು ಎಂಬ ದೊಡ್ಡ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.
ಸಾರ್ವಜನಿಕರು ಪ್ರತಿನಿತ್ಯ ಕಷ್ಟ ಪಟ್ಟು ಬೆವರು ಸುರಿಸಿ ಕೂಡಿಟ್ಟು, ತನ್ನ ಸಂಸಾರವೊಂದನ್ನೇ ನೋಡದೇ ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಟ್ಯಾಕ್ಸ್ (ಸನ್ನದು) ಕಟ್ಟುತ್ತಿದ್ದರೆ, ಅದನ್ನು ಬಳಸಿಕೊಳ್ಳುತ್ತಿರುವವರೇ ಈ ರೀತಿಯಾಗಿ ವರ್ತಿಸುತ್ತಿರುವುದು ಎಷ್ಟು ಮಾತ್ರ ಸರಿ ಅಲ್ಲವೇ, ಅವರುಗಳಿಗೆ ಅನ್ನದಾತರು ಸಾರ್ವಜನಿಕರೇ ಅಲ್ಲವೇ? ಒಮ್ಮೆ ಯೋಚಿಸಿ ನೋಡಿ.