‘ಜೀವನವಾದರೆ ಯೋಗಯುಕ್ತ ಭಾರತವಾಗುವುದು ರೋಗಮುಕ್ತ’- ಶಾಸಕ ಜ್ಯೋತಿಗಣೇಶ್

ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಕೀರ್ತಿ ನಮ್ಮ ಭಾರತ ದೇಶಕ್ಕೆ ಸಲ್ಲುತ್ತದೆ. ಅಂತೆಯೇ ‘ಯೋಗಥಾನ್’ ಕಾರ್ಯಕ್ರಮದ ಮೂಲಕ ಯೋಗದ‌ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಶಾಸಕ ಜ್ಯೋತಿಗಣೇಶ್ ತಿಳಿದರು.

 

 

ಅವರಿಂದು ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ಜಿಲ್ಲಾಡಳಿತ,‌ಜಿಲ್ಲಾ ಪಂಚಾಯತ್ , ಯುವಜನ ಸೇವಾ ಕ್ರೀಡಾ ಇಲಾಖೆ , ಆಯುಷ್ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2022-23 ವಿಶ್ವ ದಾಖಲೆಯ ಯೋಗಥಾನ್ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನ್ನಾಡಿದರು.

 

 

 

ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಇಂದಿನ ವಿಶ್ವ ದಾಖಲೆಯ ಯೋಗಥಾನ್ ಕಾರ್ಯಕ್ರಮದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಭಾಗವಹಿಸಿರುವುದು ಸಂತಸ ತಂದಿದೆ‌ ಎಂದರು.

 

 

 

2015 ರ ಜೂನ್ 15ರಂದು ವಿಶ್ವ ಯೋಗ ದಿನಾಚರಣೆ ಎಂದು ವಿಶ್ವಸಂಸ್ಥೆ ಘೋಷಿಸಿದ್ದು, ಇದರಿಂದ ಯೋಗದ ಮಹತ್ವ ಎಲ್ಲೆಡೆ ಹತ್ತು ಪಟ್ಟು ಹೆಚ್ಚಾಗಲು ಕಾರಣವಾಗಿದೆ . ವಿಶ್ವ ಸಂಸ್ಥೆ ಕೂಡ ಯೋಗಕ್ಕೆ ಮನ್ನಣೆ ನೀಡಿದೆ ಎಂದರು.

 

 

 

 


ಕ್ರಿ.ಪೂ.೩ನೇ ಶತಮಾನದಲ್ಲಿ ಪತಂಜಲಿ ಋಷಿಯ ಚಿಂತನೆಯ ಫಲವಾಗಿ ಯೋಗ ಬರೀ ಶಾಸ್ತ್ರವಾಗದೆ , ಆಚರಣೆ ಅಭ್ಯಾಸವಾಗಿ ಬಂದಿದೆ ಎಂದರು.

 

 

 

ಸಿದ್ದಗಂಗಾ ಮಠದ ಪೂಜ್ಯರಾದ ಶ್ರೀ ಸಿದ್ದಲಿಂಗಸ್ಮಾಮಿಗಳು‌ ಮಾತನ್ನಾಡಿ,26ನೇ ಯುವಜನೋತ್ಸವದ ಆತಿಥ್ಯ ವಹಿಸಿರುವ ಕರ್ನಾಟಕ‌ ಸರ್ಕಾರ ವಿಶೇಷವಾದ ಯೋಗಥಾನ್ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ವಿಷಯವಾಗಿದೆ ಎಂದರು.
ವಿಶ್ವ ದಾಖಲೆಗಾಗಿ ಯೋಗ ಒಂದು ಕಡೆಯಾದರೆ, ಆರೋಗ್ಯ, ಉತ್ತಮ ಜೀವನ, ಧೀರ್ಘಾಯ್ಸಗಾಗಿ ಯೋಗ ಅತ್ಯಂತ ಅವಶ್ಯವಾಗಿದೆ ಎಂದರು.

 

 

ನಮ್ಮ ಬದುಕನ್ನು ಚೆನ್ನಾಗಿ ಇಟ್ಟುಕೊಳ್ಳುವುದಕ್ಕೆ ನಮ್ಮ ಹಿರಿಯರು ನಮಗೆ ಯೋಗಾಸನ, ಪ್ರಾಣಾಯಾಮ, ಧ್ಯಾನ ಮುಂತಾದವುಗಳನ್ನು ಕಾಣಿಕೆಯನ್ನಾಗಿ ನೀಡಿದ್ದಾರೆ ಎಂದರು.
ಯೋಗ ಇಂದಿನ ದಿನದ ಕಾರ್ಯಕ್ರಮಕ್ಕೆ ಮಾತ್ರ ಮೀಸಲಾಗದೆ, ನಮ್ಮ ಪ್ರತಿದಿವಸವೂ ಯೋಗಾಭ್ಯಾಸ ಮಾಡುತ್ತಾ, ಆರೋಗ್ಯವಂತ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ಪ್ರಧಾನಮಂತ್ರಿ ಮೋದಿಯವರು ಯೋಗಕ್ಕೆ ಒಂದು ಜಾಗತಿಕ‌ ಮನ್ನಣೆ ದೊರಕಿಸಿಕೊಟ್ಟಿದ್ದಾರೆ.ಇದರಿಂದ ಇಡೀ ಪ್ರಪಂಚದಾದ್ಯಂತ ಯೋಗಕ್ಕೆ ಬಹಳಷ್ಟು ಮಹತ್ವ ನೀಡಿ‌ ಆಚರಿಸಲಾಗುತ್ತಿದೆ. ಭಾರತೀಯರಾದ ನಾವುಗಳು ಶಿಸ್ತಿನಿಂದ‌ ಯೋಗಾಭ್ಯಾಸವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

 

 

 

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ,‌ಜಿ.ಪಂ ಸಿಇಓ ವಿದ್ಯಾಕುಮಾರಿ, ವೀಕ್ಷಕರಾದ ವೆಂಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು,‌ಮಕ್ಕಳು, ಸಾರ್ವಜನಿಕರು‌ ಭಾಗವಸಿದ್ದರು.

Leave a Reply

Your email address will not be published. Required fields are marked *

error: Content is protected !!